ಸಾವಿರ ಕೋಟಿ ಕೊಟ್ಟರೆ ಅಷ್ಟರಲ್ಲಿ ಪ್ರೇಮಲೋಕ 2 ಸಿನಿಮಾ ಮಾಡುವುದು ಹೇಗೆಂದು ಪ್ಲಾನ್‌ ಮಾಡುತ್ತೇನೆ: ರವಿಚಂದ್ರನ್‌

Published : Jun 01, 2024, 07:26 PM IST
ಸಾವಿರ ಕೋಟಿ ಕೊಟ್ಟರೆ ಅಷ್ಟರಲ್ಲಿ ಪ್ರೇಮಲೋಕ 2 ಸಿನಿಮಾ ಮಾಡುವುದು ಹೇಗೆಂದು ಪ್ಲಾನ್‌ ಮಾಡುತ್ತೇನೆ: ರವಿಚಂದ್ರನ್‌

ಸಾರಾಂಶ

ನನ್ನ ಹುಟ್ಟುಹಬ್ಬದ ದಿನವೇ ಪ್ರೇಮಲೋಕ 2 ಚಿತ್ರ ಅಧಿಕೃತವಾಗಿ ಘೋಷಣೆ ಆಗಬೇಕಿತ್ತು. ಆದರೆ, ಬರ್ತ್‌ ಡೇ ಸಂಭ್ರಮ, ದೊಡ್ಡ ಸಿನಿಮಾ ಘೋಷಣೆ ಎರಡೂ ಒಟ್ಟಿಗೆ ಬಂದು ಗೊಂದಲ ಆಗುವುದು ಬೇಡ ಅಂತ ಪ್ರೇಮಲೋಕ 2 ಚಿತ್ರವನ್ನು ಮತ್ತೊಂದು ದಿನ ದೊಡ್ಡದಾಗಿ ಲಾಂಚ್‌ ಮಾಡಲು ನಿರ್ಧರಿಸಿದೆವು. 

‘ಪ್ರೇಮಲೋಕ 2’ ಚಿತ್ರದ ಕುರಿತು ಶೀಘ್ರವೇ ಸಂಪೂರ್ಣ ಮಾಹಿತಿ ನೀಡುವುದಾಗಿ ರವಿಚಂದ್ರನ್‌ ತಿಳಿಸಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್‌, ‘ಇನ್ನೊಂದು ವಾರ ಅಥವಾ ಹತ್ತು ದಿನದಲ್ಲಿ ಪ್ರೇಮಲೋಕ 2 ಚಿತ್ರದ ಜತೆಗೆ ನಿಮ್ಮ ಬರುತ್ತೇನೆ’ ಎಂದರು.

‘ನನ್ನ ಹುಟ್ಟುಹಬ್ಬದ ದಿನವೇ ಪ್ರೇಮಲೋಕ 2 ಚಿತ್ರ ಅಧಿಕೃತವಾಗಿ ಘೋಷಣೆ ಆಗಬೇಕಿತ್ತು. ಆದರೆ, ಬರ್ತ್‌ ಡೇ ಸಂಭ್ರಮ, ದೊಡ್ಡ ಸಿನಿಮಾ ಘೋಷಣೆ ಎರಡೂ ಒಟ್ಟಿಗೆ ಬಂದು ಗೊಂದಲ ಆಗುವುದು ಬೇಡ ಅಂತ ಪ್ರೇಮಲೋಕ 2 ಚಿತ್ರವನ್ನು ಮತ್ತೊಂದು ದಿನ ದೊಡ್ಡದಾಗಿ ಲಾಂಚ್‌ ಮಾಡಲು ನಿರ್ಧರಿಸಿದೆವು. ಕೃಷ್ಣ ಜ್ಯುವೆಲ್ಲರ್ಸ್‌ನವರು ಈ ಚಿತ್ರದ ನಿರ್ಮಾಪಕರು. ನನ್ನ ಜತೆಗೆ ಇವರು ಮೊದಲ ಬಾರಿಗೆ ಸಿನಿಮಾ ನಿರ್ಮಿಸುತ್ತಿದ್ದಾರೆ. ನಾನು ಮತ್ತು ನನ್ನ ಇಬ್ಬರು ಮಕ್ಕಳು ಒಟ್ಟಿಗೆ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇವೆ’ ಎಂದು ಅವರು ಹೇಳಿದರು.

‘ಬಾಲ ನಟನಾಗಿ ನಟಿಸಿದ್ದು ಸೇರಿ ನಾನು ಚಿತ್ರರಂಗಕ್ಕೆ ಬಂದು 53 ವರ್ಷ ಆಯಿತು. ನನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಒಂದು ಸಾವಿರ ಕೋಟಿ ಕೊಟ್ಟರೆ ಅಷ್ಟರಲ್ಲಿ ಸಿನಿಮಾ ಮಾಡುವುದು ಹೇಗೆಂದು ಪ್ಲಾನ್‌ ಮಾಡುತ್ತೇನೆ. ಒಂದು ಕೋಟಿ ಕೊಟ್ಟರೂ ಅಷ್ಟರಲ್ಲೇ ಸಿನಿಮಾ ಮಾಡುತ್ತೇನೆ. ಈಗ ನನ್ನ ಪರಿಸ್ಥಿತಿ ಏನೇ ಇದ್ದರೂ ನನ್ನ ಸಿನಿಮಾ ತಾಕತ್ತು, ನನ್ನೊಳಗಿರುವ ಆಸೆ ಕಡಿಮೆ ಆಗಿಲ್ಲ. ‘ಪ್ರೇಮಲೋಕ 2’ ಮೂಲಕ ದೊಡ್ಡದಾಗಿ ಬರುತ್ತೇನೆ’ ಎಂದು ರವಿಚಂದ್ರನ್ ಹುಮ್ಮಸ್ಸಿನಿಂದಲೇ ಹೇಳಿದ್ದಾರೆ.

ಕತೆಯೇ ಮುಖ್ಯ, ಕತೆ ಇಲ್ಲದೆ ಸ್ಟಾರ್‌ ಸಿನಿಮಾ ಆಗಲ್ಲ: ರವಿಚಂದ್ರನ್‌, ಧ್ರುವ ಸರ್ಜಾ ಹೇಳಿದ್ಧೇನು?

ದಿ ಜಡ್ಜ್‌ಮೆಂಟ್‌ ಗೆಲುವಿಗೆ ಸಂತಸ: ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟನೆಯ, ಗುರುರಾಜ್‌ ಕುಲಕರ್ಣಿ ನಿರ್ದೇಶನದ ‘ದಿ ಜಡ್ಜ್‌ಮೆಂಟ್‌’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ, ಒಳ್ಳೆಯ ವಿಮರ್ಶೆ ಬಂದಿದೆ ಎನ್ನುವ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿತು. ರವಿಚಂದ್ರನ್‌, ‘ಸಿನಿಮಾ ಬಿಡುಗಡೆ ಆದ ಮೇಲೆ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಮುಖದಲ್ಲಿ ಖುಷಿ ನೋಡುತ್ತಿದ್ದೇವೆ ಎಂದರೆ ನಾವು ಒಳ್ಳೆಯ ಚಿತ್ರ ಮಾಡಿದ್ದೇವೆ. ಜನ ಆ ಚಿತ್ರವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ ಎಂದರ್ಥ. ನನ್ನಿಂದ ಪ್ರೇಕ್ಷಕರು ಯಾವ ರೀತಿಯ ಸಿನಿಮಾಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಒಳ್ಳೆಯ ಚಿತ್ರಗಳಿಗೆ ಇದೇ ರೀತಿ ಪ್ರೋತ್ಸಾಹ ಇರಲಿ’ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್