Latest Videos

ಪ್ರಜ್ವಲ್ ದೇವರಾಜ್‌ ಇನ್ನಿಲ್ಲ ಎಂದು ಫೋಟೋ ವೈರಲ್; ಕಿಡಿಗೇಡಿಗ ವಿರುದ್ಧ ನಟ ಗರಂ

By Vaishnavi ChandrashekarFirst Published Jun 1, 2024, 5:24 PM IST
Highlights

ಫೇಕ್‌ ಫೋಟೋಗಳನ್ನು ಕ್ರಿಯೇಟ್ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ಪ್ರಜ್ವಲ್ ದೇವರಾಜ್.
 

ಕನ್ನಡ ಚಿತ್ರರಂಗ ಚಾಕೋಲೇಟ್ ಬಾಯ್ ಪ್ರಜ್ವಲ್ ದೇವರಾಜ್‌ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಜ್ವಲ್ ಇನ್ನಿಲ್ಲ ಅನ್ನೋ ಫೋಟೋ ಕೂಡ ವೈರಲ್ ಆಗುತ್ತಿದೆ. ಪ್ರಜ್ವಲ್ ದೇವರಾಜ್‌ ಫೋಟೋಗೆ ಹಾರ ಹಾಕಿರುವುದು ಹಾಗೂ ಫೋಟೋ ಮುಂದೆ ಪೂಜೆ ಮಾಡಿರವಂತಿದೆ. ಇದು ನಟನ ಗಮನಕ್ಕೆ ಬಂದಿದೆ. 

ಫೋಟೋ ವೈರಲ್ ಆಗುತ್ತಿದ್ದಂತೆ  ಪ್ರಜ್ವಲ್ ದೇವರಾಜ್ ಆರೋಗ್ಯವಾಗಿದ್ದಾರೆ ವದಂತಿಗಳು ಸುಳ್ಳು ಎಂದು ಆಪ್ತರು ಸ್ಪಷ್ಟನೆ ಕೊಟ್ಟಿದ್ದಾರೆ. ನಿಜಕ್ಕೂ ಪ್ರಜ್ವಲ್ ಆರೋಗ್ಯವಾಗಿದ್ದಾರೆ, ಪತ್ನಿ ರಾಗಿಣಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು ಪತಿ ಜೊತೆ ಜಾಲಿ ಮಾಡುತ್ತಿರುವ ಫೋಟೋ ಹಾಕಿದ್ದಾರೆ. ಹೀಗಾಗಿ ಪ್ರಜ್ವಲ್ ಸೇಫ್‌ ಎಂದು ಅಭಿಮಾನಿಗಳಿಗೆ ತಿಳಿದು ಬಂದಿದೆ. 

ಮೊನ್ನೆ ಮೊನ್ನೆ ಗಂಡನ ಜೊತೆ ಫೋಟೋ ಹಾಕಿದ್ದೀನಿ ಆಗ್ಲೇ ಡಿವೋರ್ಸ್‌ ಅಂತೀರಾ?; ನೆಟ್ಟಿಗರ ಮೇಲೆ ನಮಿತಾ ಗರಂ

ಈ ಫೋಟೋ ವೈರಲ್ ಆಗಿರುವುದಕ್ಕೆ ದೇವರಾಜ್‌ ಕುಟುಂಬದವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಪ್ರಜ್ವಲ್ ಕ್ಷೇಮವಾಗಿದ್ದಾ ಆರೋಗ್ಯವಾಗಿದ್ದಾರೆ ಯಾವುದೇ ಬದಲಾವಣೆ ಆಗಿಲ್ಲ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ ಯಾಕೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ. ವೈರಲ್ ನ್ಯೂಸ್ ಕ್ರಿಯೇಟ್ ಮಾಡುತ್ತಿರುವವರ ಮೇಲೆ ದೂರು ನೀಡಲು ಮುಂದಾಗಿದ್ದಾರೆ. 

ಬೆಳ್ಳಗಾಗಲು ಪ್ಯಾನ್‌ಕೇಕ್‌ ಬಳಸಿದ ಜಗ್ಗೇಶ್; ಕಪ್ಪೆಂದು ಟೀಕಿಸಿದವರಿಗೆ ಮೊಮ್ಮಗನನ್ನು ತೋರಿಸಿದ ನಟ!

ಈ ಫೋಟೋ ಎಡಿಟ್ ಮಾಡಿರುವುದಾ? ಈ ಪೋಟೋ ಎಲ್ಲಿಂದ ಸಿಕ್ತು? ಈ ಫೋಟೋ ಮೂಲ ಯಾವುದು ಎಂದು ಅಭಿಮಾನಿಗಳು ಕಂಡು ಹಿಡಿದಿದ್ದಾರೆ. ಪ್ರಜ್ವಲ್ ದೇವರಾಜ್ ಇತ್ತೀಚಿಗೆ ನಟಿಸಿರುವ ವೀರಂ ಚಿತ್ರದ್ದು ಎನ್ನಲಾಗಿದೆ. ವೀರಂ ಮತ್ತು ತತ್ಸಮ ತದ್ಬವ ಚಿತ್ರದ ನಂತರ ಪ್ರಜ್ವಲ್ ಮಾಫಿಯಾ ಮತ್ತು ಗಾನಾ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 

click me!