
ಬೆಂಗಳೂರು: ರಾಜೇಂದ್ರ ಬಾಬು ಚಂದನವನದ ಸ್ಟಾರ್ ನಿರ್ದೇಶಕರು. ಕಾಳಿಂಗ ಸರ್ಪ, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ರಾಮರಾಜ್ಯದಲ್ಲಿ ರಾಕ್ಷಸರು, ಅಣ್ಣಯ್ಯ, ಹಾಲುಂಡ ತವರು, ಅಪ್ಪಾಜಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದ್ರೆ 2000ರಲ್ಲಿ ಬಿಡುಗಡೆಯಾದ ರಾಜೇಂದ್ರ ಬಾಬು ನಿರ್ದೇಶನದ ಮತ್ತು ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ ತ್ರಿಕೋನ ಪ್ರೇಮಕಥೆ ಹೊಂದಿರುವ ಸೈಕಾಲಜಿಕಲ್ ಥ್ರಿಲ್ಲರ್ ರೊಮ್ಯಾಂಟಿಕ್ ಸಿನಿಮಾ ನೋಡಿ ವೀಕ್ಷಕರು ಅದರಲ್ಲಿಯೂ ಪಡ್ಡ ಹುಡುಗರು ಹುಚ್ಚರಾಗಿದ್ದರು. ಈ ಸಿನಿಮಾ ರಿಮೇಕ್ ಆಗಿದ್ರೂ ಇದಕ್ಕೆ ಪ್ರಾದೇಶಿಕತೆಯ ಸ್ಪರ್ಶ ನೀಡಿದ್ದರಿಂದ ಸೂಪರ್ ಹಿಟ್ ಆಗಿತ್ತು. ಸುಮಾರು 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು.
ಹೋಳಿ ಹಬ್ಬ ಬಂದ್ರೆ ಸಾಕು ಈ ಸಿನಿಮಾದ ಸೂಪರ್ ಹಿಟ್ ಹಾಡು ಟ್ರೆಂಡ್ ಆಗುತ್ತದೆ. ಸಿನಿಮಾ ಬಿಡುಗಡೆಯಾಗಿ 25 ವರ್ಷವಾದ್ರೂ ಚಿತ್ರದ ಹಾಡುಗಳು ಇಂದಿಗೂ ಜನಮಾನಸದಲ್ಲಿವೆ. ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್ ಚೆಲುವೆ ವನಿತಾವಾಸು, ಹಿರಿಯ ನಟ ಅನಂತ್‌ನಾಗ್ ಸೇರಿದಂತೆ ಮಲ್ಟಿ ಸ್ಟಾರ್ ಸಿನಿಮಾ ಇದಾಗಿತ್ತು. 2000ರಲ್ಲಿ ಬಿಡುಗಡೆಯಾದ ತ್ರಿಕೋನ ಪ್ರೇಮಕಥೆ 'ಪ್ರೀತ್ಸೆ' ಯಶಸ್ಸು ಕಂಡಿದ್ದನ್ನು ನೋಡಿ ಅಕ್ಕಪಕ್ಕ ಸಿನಿ ಅಂಗಳದವರು ಬೆರಗಾಗಿದ್ದರು. ನಂತರ ಈ ಸಿನಿಮಾ ಸ್ಯಾಡಿಸ್ಟ್ ಹೆಸರಿನಲ್ಲಿ ತೆಲಗು ಭಾಷೆಗೆ ಡಬ್ಬ ಆಗಿತ್ತು. 1993ರಲ್ಲಿ ಬಿಡುಗಡೆಯಾಗಿದ್ದ 'ಡರ್' ಸಿನಿಮಾದ ರಿಮೇಕ್ 'ಪ್ರೀತ್ಸೆ' ಆಗಿತ್ತು.
ಚಿತ್ರದಲ್ಲಿ ಸೂರ್ಯನಾಗಿ ಶಿವರಾಜ್‌ಕುಮಾರ್, ಚಂದ್ರನಾಗಿ ಉಪೇಂದ್ರ ನಟಿಸಿದ್ದರು. ಸೂರ್ಯನ ಪ್ರೇಯಸಿಯಾಗಿ ಕಿರಣ್ ಪಾತ್ರದಲ್ಲಿ ಸೋನಾಲಿ ಬೇಂದ್ರೆ ನಟಿಸಿದ್ದರು. ಸೂರ್ಯ ಮತ್ತು ಚಂದ್ರ ಇಬ್ಬರು ಬಾಲ್ಯದ ಗೆಳೆಯರು. ಆದ್ರೆ ಯೌವನಕ್ಕೆ ಬಂದಾಗ ಗೆಳೆಯ ಸೂರ್ಯನ ಪ್ರೇಯಸಿ ಕಿರಣ್ ಮೇಲೆ ಚಂದ್ರನಿಗೆ ಹುಚ್ಚು ಪ್ರೀತಿಯಾಗುತ್ತದೆ. ಮದುವೆಯಾದ ಬಳಿಕವೂ ಗೆಳೆಯನಿಂದ ಆಕೆಯ ಹೆಂಡತಿಯನ್ನು ಕಿತ್ತುಕೊಳ್ಳಲು ಚಂದ್ರ ಪ್ರಯತ್ನಿಸುತ್ತಾನೆ.
ಇದನ್ನೂ ಓದಿ: 16 ಕೋಟಿಯ ಕನ್ನಡ ಸಿನಿಮಾ ಗಳಿಸಿದ್ದು 300 ಕೋಟಿ; ನಟನ ಆಕ್ಟಿಂಗ್‌ಗೆ ಬೆರಗಾದ ಸಿನಿ ಲೋಕ
ಚಂದ್ರನಾಗಿ ಕಾಣಿಸಿಕೊಂಡಿರುವ ಉಪೇಂದ್ರ ರಿಯಲ್ ನಟನೆಗೆ ಅಭಿಮಾನಿಗಳು ಬಹುಪರಾಕ್ ಹೇಳಿದ್ದರು. ಉಪೇಂದ್ರ ತಮ್ಮ ಡೈಲಾಗ್‌ನಲ್ಲಿ ಕಿರಣ್ ಎಂದು ಹೇಳುವ ಶೈಲಿಗೆ ನೋಡಗರು ಫಿದಾ ಆಗಿದ್ದರು. ಮದುವೆಯದ್ರೂ ಫೋನ್ ಮಾಡಿ ಕಿರಣ್‌ಗೆ ಚಂದ್ರ ಕಿರುಕುಳ ನೀಡುತ್ತಿರುತ್ತಾನೆ. ಕಿರಣ್ ಎಲ್ಲೇ ಹೋದ್ರೂ ಆಕೆ ಹಿಂದೆಯೇ ಇರುತ್ತಿರುತ್ತಾನೆ. ತನ್ನ ಪ್ರೇಯಸಿಗೆ ಕಿರುಕುಳ ನೀಡುತ್ತಿರೋದು ತನ್ನ ಬಾಲ್ಯದ ಗೆಳೆಯ ಎಂದು ಸೂರ್ಯನಿಗೆ ಗೊತ್ತಿರಲ್ಲ. ಹಾಗಾಗಿ ಎಲ್ಲಾ ವಿಷಯಗಳನ್ನು ಚಂದ್ರನ ಬಳಿ ಹೇಳಿಕೊಳ್ಳುತ್ತಿರುತ್ತಾನೆ. ಹೀಗಾಗಿ ಕಿರಣ್ ಇರಿಸೋ ಪ್ರತಿ ಹೆಜ್ಜೆ ಮೇಲೆ ಚಂದ್ರ ನೆರಳು ಇರುತ್ತದೆ. ಚಿತ್ರದ ಭಾಗಶಃ ಚಿತ್ರೀಕರಣ ಆಸ್ಟ್ರೇಲಿಯಾದ ಸುಂದರ ಸ್ಥಳಗಳಲ್ಲಿ ನಡೆದಿದೆ. ಅನಂತ್‌ನಾಗ್ ಮತ್ತು ವನಿತಾ ವಾಸು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಮ್ಯೂಸಿಕಲ್ ಹಿಟ್ ಸಿನಿಮಾ
ಸೈಕಾಲಜಿಕಲ್ ಥ್ರಿಲ್ಲರ್ ರೊಮ್ಯಾಂಟಿಕ್ ಸಿನಿಮಾದ ಯಶಸ್ಸಿನ ಚಿತ್ರದ ಹಾಡುಗಳು. ಸನ್ನಿವೇಶಕ್ಕೆ ತಕ್ಕಂತೆ ಕೇಳುಗರಿಗೆ ಇಷ್ಟವಾಗುವಂತೆ ಎಲ್ಲಾ ಜಾನರ್ ಹಾಡುಗಳನ್ನು ಹಂಸಲೇಖ ನೀಡಿದ್ದಾರೆ. ಹೋಳಿ ಹಬ್ಬದಂದು ಪ್ರೀತ್ಸೆ ಚಿತ್ರದ 'ಹೋಳಿ' ಹಾಡು ಇಂದಿಗೂ ಪ್ಲೇ ಆಗುತ್ತಿರುತ್ತದೆ. ಯಾರಿಟ್ಟರೀ ಚುಕ್ಕಿ, ಸೂರ್ಯ ಒಬ್ಬ, ಚಂದ್ರ ಒಬ್ಬ, ಪ್ರೀತ್ಸೆ ಪ್ರೀತ್ಸೆ ಟೈಟಲ್ ಟ್ರ್ಯಾಕ್ ಹಾಡು ಇಂದಿಗೂ ಇಷ್ಟವಾಗುತ್ತದೆ. 2 ಗಂಟೆ 27 ನಿಮಿಷದ ಪ್ರೀತ್ಸೆ ಸಿನಿಮಾ ಬೆಳ್ಳಿ ಪರದೆ ಮೇಲೆ ಮೂಡಿ ಮಾಡಿತ್ತು.
ಇದನ್ನೂ ಓದಿ: ಅತಿದೊಡ್ಡ ಯುದ್ಧದ ಚಿತ್ರೀಕರಣ ಆರಂಭ; 50 ದಿನದ ಶೂಟಿಂಗ್‌ಗಾಗಿ 30 ದಿನ ತಯಾರಿ ನಡೆಸಿದ ಕನ್ನಡದ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.