ಧನಂಜಯ್ ಓಲ್ಡ್ ವಿಡಿಯೋ ಈಗ್ಯಾಕೆ ಓಡಾಡ್ತಿದೆ? ಅದೂ ಬ್ಲಾಕ್ & ವೈಟ್‌ ಆಗಿ...ಕನೆಕ್ಷನ್ ಸಿಕ್ತಾ!?

Published : Feb 22, 2025, 12:25 AM ISTUpdated : Feb 22, 2025, 07:05 AM IST
ಧನಂಜಯ್ ಓಲ್ಡ್ ವಿಡಿಯೋ ಈಗ್ಯಾಕೆ ಓಡಾಡ್ತಿದೆ? ಅದೂ ಬ್ಲಾಕ್ & ವೈಟ್‌ ಆಗಿ...ಕನೆಕ್ಷನ್ ಸಿಕ್ತಾ!?

ಸಾರಾಂಶ

ನಟ ಡಾಲಿ ಧನಂಜಯ್ ಅವರ ಮದುವೆಯ ನಂತರ, ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಅವರು "ಒಂದೇ ಜೀವನ, ಕಡಿಮೆ ಟೈಮಿದೆ" ಎಂದು ಪ್ರೀತಿ ವಿಫಲವಾದ ಬಗ್ಗೆ ಮಾತನಾಡಿದ್ದಾರೆ. ಇದು ಅವರ ವೈಯಕ್ತಿಕ ಅನುಭವವೇ ಅಥವಾ ಕೇವಲ ಉದಾಹರಣೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅವರ ಪ್ರೇಮ ಜೀವನದ ಬಗ್ಗೆ ಹಲವು ಊಹೆಗಳು ಹರಿದಾಡುತ್ತಿವೆ.

ನಟ ಡಾಲಿ ಧನಂಜಯ್ (Dolly Dhananjay) ಇತ್ತೀಚೆಗಷ್ಟೇ ಮದುವೆ ಆಗಿರುವುದು ಗೊತ್ತೇ ಇದೆ. ಚಿತ್ರದುರ್ಗದ ಡಾಕ್ಟರ್ ಧನ್ಯತಾ ಅವರನ್ನು ಮದುವೆ ಮಾಡಿಕೊಂಡಿರುವ ಧನಂಜಯ್, ಸದ್ಯ ಹನಿಮೂನ್ ಮೂಡ್‌ನಲ್ಲಿದ್ದಾರೆ. ಆದರೆ, ಅಚ್ಚರಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಧನಂಜಯ್ ಹಿಂದೊಮ್ಮೆ ಮಾತನ್ನಾಡಿದ್ದ ವಿಡಿಯೋ ವೈರಲ್ ಆಗ್ತಿದೆ.. ಶಾಕಿಂಗ್ ಅಂದ್ರೆ, ಅದ್ಯಾಕೆ ಕಪ್ಪು-ಬಿಳುಪು ಬಣ್ಣ ಪಡೆದು ಹೀಗೆ ಈಗ ಓಡಾಡ್ತಿದೆ..? ಸೀಕ್ರೆಟ್ ಇರೋದೇ ಅಲ್ಲಾ..? ನೋಡಿ ಹೇಳಿ..!

ನಟ ಡಾಲಿ ಧನಂಜಯ್ 'ಒಂದೇ ಜೀವನ, ತುಂಬಾ ಕಮ್ಮಿ ಟೈಮಿದೆ.. ಒದ್ದಾಡ್ಕೊಂಡು ಕೂಡೋದ್ರಲ್ಲಿ ಅರ್ಥ ಇಲ್ಲ.. ಹೌದು ನೋವಾಗುತ್ತೆ.. ಈಗ ಸಮಸ್ಯೆಗಳು ಅಂದಾಗ ಎಲ್ಲಾ ತರದ ಸಮಸ್ಯೆಗಳೂ ಇರುತ್ತೆ.. ನೋವಾಗುತ್ತೆ.. ಎಲ್ರಿಗೂ ಕನೆಕ್ಟ್ ಆಗೋ ಎಕ್ಸಾಂಪಲ್ ತಗೋಬೇಕು ಅಂದ್ರೆ, ಲವ್ ಫೇಲ್ಯೂರ್‌.. ಆಗೋಯ್ತು., ಏನ್ ಮಾಡೋಕಾಗಲ್ಲ.. 

Kichcha Sudeep: ಭಾರೀ ಸೀಕ್ರೆಟ್ ಬಯಲಾಗಿ ಹೋಯ್ತು, ಇನ್ಮುಂದೆ ಜಗತ್ತು ಸುದೀಪ್ ನೋಡೋ ರೀತಿನೇ ಬೇರೆ..!

ನಾವ್ ಯಾರನ್ನೂ ಫೋರ್ಸ್‌ಫುಲ್‌ ಆಗಿ ಇಟ್ಕೊಳ್ಳೋಕೆ ಆಗಲ್ಲ.. ಅಥವಾ, ಅವ್ರು ನಮ್ಮನ್ನ ಫೋರ್ಸ್ಫುಲ್‌ ಆಗಿ ಇಟ್ಕೊಳ್ಳೋಕಾಗಲ್ಲ.. ಜೊತೆಗೆ ಇರೋಕಾಗಲ್ಲ.. ಆಗೋಯ್ತು.. ನೋವಾಗಲ್ಲ ಅಂತ, ಆಗುತ್ತೆ.. ಆದ್ರೆ ಎಷ್ಟು ಬೇಗ ಆಚೆ ಬರೋಕೆ ಆಗುತ್ತೆ, ಅದ್ಕೆ ಏನ್ ಮಾಡ್ಬೇಕು..?

ಎಲ್ಲರ ಬದುಕಲ್ಲೂ ತಂದೆ-ತಾಯಿ, ಅದೂ ಇದೂ ಹೀಗೆ ಸಾಕಷ್ಟು ವಿಷ್ಯಗಳಿರುತ್ತೆ.. ಇರೋದು ಒಂದೇ ಲೈಫು, ನಿಮ್ ಬದುಕು ನೀವ್ ಕಟ್ಕೋಬೇಕು...' ಎಂದಿದ್ದರು ನಟ ಧನಂಜಯ್. ಈಗ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ. 'ನಟ ಡಾಲಿ ಧನಂಜಯ್‌ ಅವ್ರಿಗೆ ಲವ್ ಫೇಲ್ಯೂರ್ ಆಗಿತ್ತು? ಲವ್ ಬ್ರೇಕಪ್ ಆಗಿತ್ತಾ? ಇದು ಎಕ್ಸಾಂಪಲ್ಲಾ ಅಥವಾ ಅನುಭವವಾ? ಇಲ್ಲಾ ಅಂದ್ರೆ, ಅವ್ರಿಗೆ ಆ ಅನುಭವ ಆಗಿದ್ಯಾ? ಅದು ಹೇಗೆ..?' ಅಂತ ನೆಟ್ಟಿಗರು ಹಲವರು ಪ್ರಶ್ನೆ ಮಾಡ್ತಿದಾರೆ. 

ರಾಧಿಕಾ ಕುಮಾರಸ್ವಾಮಿ ಮೊದಲ ಗಂಡ ಇವ್ರೇ ನೋಡಿ.. ಭೂಲೋಕದಿಂದ ದೂರಾಗಿದ್ದು ಹೀಗೆ..!

ನಟ ಧನಂಜಯ್‌ಗೆ ಲವ್ ಆಗಿತ್ತಾ? ಲವ್ ಆಗಿ ಬ್ರೇಕಪ್ ಆಗಿತ್ತಾ? ಲವ್ ಫೇಲ್ಯೂರ್ ಆಗಿದ್ರೆ ಯಾರು ಅವ್ರ ಲವ್ವರ್ ಆಗಿದ್ರು?' ಎಂದ ಪ್ರಶ್ನೆ ಈಗ ಹಲವರನ್ಜು ಕಾಡುತ್ತಿದೆ. ಅದಕ್ಕೆ ಉತ್ತರ ಅಂದ್ರೆ, 'ಅವರ ವಿಷ್ಯ ಅವ್ರಿಗೆ ಬಿಟ್ಟು ಇನ್ಯಾರಿಗೂ ಸರಿಯಾಗಿ ಗೊತ್ತಿಲ್ಲ, ಗೊತ್ತಿರೋಕೆ ಸಾಧ್ಯವೂ ಇಲ್ಲ.. ಇದಕ್ಕೆಲ್ಲಾ ಇನ್ನು ಸ್ವಲ್ಪ ದಿನದಲ್ಲಿ ಮತ್ತೊಂದು ವಿಡಿಯೋ ನೆಟ್‌ನಲ್ಲಿ ಓಡಾಡುತ್ತೆ, ಅದ್ರಲ್ಲಿ ನಿಮ್ಗೆ ಉತ್ತರ ಸಿಗಬಹುದು..' ಎನ್ನಬಹುದೇನೋ. 

ಈ ಕಾಮನ್ ಜನ್ರೇ ಹೀಗೆ.. ಸೆಲೆಬ್ರಿಟಿಗಳ ಲೈಫ್ ಬಗ್ಗೆನೇ ತಲೆ ಕೆಡಿಸ್ಕೊಂಡು ತಮ್ಮ ಸ್ವಂತ ಲೈಫು ಮರೆತೇ ಬಿಡ್ತಾರೆ. ಅವರಿಷ್ಟಕ್ಕೆ ಅವರೇನೋ ಆಗಿದಾರೆ, ನಿಮ್ಮಿಷ್ಷಕ್ಕೆ ನೀವ್ ಏನಾದ್ರೂ ಮಾಡ್ಕೊಳ್ಳಿ ಅಂತ ಅವ್ರಿಗೆ ಯಾರೂ ಹೇಳೋಕೋ ಹೋಗಲ್ಲ. ಯಾಕಂದ್ರೆ, ಎಲ್ರಿಗೂ ಗೊತ್ತು ಅವೆಲ್ಲಾ ಅವ್ರ ತಲೆಗೇ ಹೋಗಲ್ಲ.. 'ತಾಸಿಗೊಂದು ಮಾತಾಡುವ ಸಿನಿಮಾ ತಾರೆಗಳ ಬಗ್ಗೆ ಅದ್ಯಾಕೆ ಅಷ್ಟೊಂದು ವ್ಯಾಮೋಹವೋ ಏನೋ' ಎಂಬ ಕೆಲವರ ಮಾತು ಈ ಹಲವರ ತಲೆಯೊಳಗೆ ಹೋಗೋದು ಯಾವಾಗಲೋ..!?

ವಿದ್ಯಾ ಬಾಲನ್ ಸೀಕ್ರೆಟ್ ಓಪನ್ ಮಾಡಿದ ಶ್ರೇಯಾ ಘೋಷಾಲ್..! ಇಷ್ಟು ವರ್ಷ ಏನೋ ಅಂದ್ಕೊಂಡಿದ್ರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್