ರಾಮಾಯಣದಲ್ಲಿ ಯಶ್ ರಾವಣ ಆಗೋಕೆ 80 ಕೋಟಿ ಹಣವನ್ನ ಆಫರ್ ಮಾಡಿದ್ದಾರಂತೆ. ಆದ್ರೆ ಯಶ್ ಮಾತ್ರ ರಾಮಾಯಣದ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ್ದಾರಂತೆ. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ..
ರಾಕಿಂಗ್ ಸ್ಟಾರ್ ಯಶ್ ಈಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ಹೋಗೋ ತಯಾರಿಯಲ್ಲಿದ್ದಾರೆ. ಏಪ್ರಿಲ್ 15ರ ನಂತರ ಬೆಂಗಳೂರಿನಲ್ಲೇ ಟಾಕ್ಸಿಕ್ ಚಿತ್ರೀಕರಣ ಆರಂಭ ಆಗುತ್ತೆ. ಆದ್ರೆ ಮತ್ತೊಂದ್ ಕಡೆ ಬಾಲಿವುಡ್ನ ಬಹು ಕೋಟಿ ವೆಚ್ಚದ ಬಿಗ್ ಬಜೆಟ್ ಸಿನಿಮಾ, ಇಡೀ ದೇಶದ ಸಿನಿ ಪ್ರೇಕ್ಷಕರು ಕಣ್ಣರಳಿಸಿ ಕಾಯುತ್ತಿರೋ ಸಿನಿಮಾ ರಾಮಾಯಣ ಚಿತ್ರದಲ್ಲೂ ಯಶ್ ಹೆಸರು ಪದೇ ಪದೆ ಕೇಳಿ ಬರುತ್ತಿದೆ.
ಬಾಲಿವುಡ್ ನಟ ರಣಬೀರ್ ಕಪೂರ್ ನಾಯಕತ್ವದ 'ರಾಮಾಯಣ'ದಲ್ಲಿ ಯಶ್ಗೆ ಮಾಡಿರೋ ಆಫರ್ ಎಷ್ಟು ಕೋಟಿ ಗೊತ್ತಾ.? ಆದರೆ ಆ ಚಿತ್ರಕ್ಕೆ ಯಶ್ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ್ದಾರೆ ಯಶ್ ಎನ್ನಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್ನಲ್ಲಿ ಸಿದ್ಧವಾಗುತ್ತಿರೋ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಇನ್ನು ಪಕ್ಕಾ ಸುದ್ದಿ ಬಂದಿಲ್ಲ. ಆದ್ರೆ ಯಶ್ ಹೆಸ್ರು ಮಾತ್ರ ರಾಮಾಯಣದಲ್ಲಿ ಬರ್ತಾನೆ ಇದೆ. ಯಶ್ ರಾವಣ ಆಗುತ್ತಾರೆ ಅಂತ ಕಾಯುತ್ತಿರೋ ಯಶ್ ಫ್ಯಾನ್ಸ್ಗೆ ಮತ್ತೊಂದು ಬಿಗ್ ನ್ಯೂಸ್ ಸಿಕ್ಕಿದೆ. .
ಒಲ್ಲದ ಮದುವೆ ತಪ್ಪಿಸಿಕೊಳ್ಳಲು ಕೇರಳದಿಂದ ಓಡಿಹೋದ ನಟಿ ಫೇಮಸ್ ಐಟಂ ಡಾನ್ಸರ್ ಆದ್ರು!
ರಾಮಾಯಣದಲ್ಲಿ ಯಶ್ ರಾವಣ ಆಗೋಕೆ 80 ಕೋಟಿ ಹಣವನ್ನ ಆಫರ್ ಮಾಡಿದ್ದಾರಂತೆ. ಆದ್ರೆ ಯಶ್ ಮಾತ್ರ ರಾಮಾಯಣದ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ್ದಾರಂತೆ. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ. ಪ್ಯಾನ್ ಇಂಡಿಯಾ ಪ್ರೊಡ್ಯೂಸರ್ ಕೂಡ ಹೌದು. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಟನೆ ಜೊತೆ Monster Mind Creation ಮೂಲಕ ಬಂಡವಾಳವನ್ನೂ ಹೂಡುತ್ತಿದ್ದಾರೆ. ಇದೀಗ ಹಿಂದಿಯ ರಾಮಾಯಣದಲ್ಲಿ ನಟಿಸೋ ಯಶ್ ಆ ಸಿನಿಮಾದ ನಟನೆಗೆ 80 ಕೋಟಿ ಸಂಭಾವನೆ ಬೇಡ. ನಿರ್ಮಾಣದ ಪಾಲುದಾರಿಕೆ ಕೊಡಿ ಅಂತ ಕೇಳಿದ್ದಾರಂತೆ. ಈ ಬಗ್ಗೆ ಈ ಬಾಲಿವುಡ್ನಲ್ಲಿ ಸುದ್ದಿ ಹರಿದಾಡುತ್ತಿದೆ.
ಕೇರಳದ ಜನರ ಬಗ್ಗೆ ಮತ್ತೆ ಮತ್ತೆ ಯಾಕೆ ಹೀಗೇ ಹೇಳ್ತಿದಾರೆ ಅಲ್ಲು ಅರ್ಜುನ್; ಅದರಲ್ಲೇನಿದೆ ಮರ್ಮ?
ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ರಣಬೀರ್ ಕಪೂರ್ಗೆ 70 ಕೋಟಿ ಸಂಭಾವನೆ ಕೊಡುತ್ತಿದ್ದಾರೆ. ಆದ್ರೆ ರಾವಣನ ರೋಲ್ ಮಾಡೋಕೆ ಯಶ್ಗೆ ಆಫರ್ ಮಾಡಿದ್ದು 80 ಕೋಟಿ. ಅಲ್ಲಿಗೆ ರಾಮನಿಗಿಂತ ರಾವಣನ ರೋಲ್ಗೆ ಡಿಮ್ಯಾಂಡ್ ಹೆಚ್ಚಿದೆ ಅದ್ಕೊಳ್ಳಬೇಡಿ. ಇಲ್ಲಿ ರಾಣಬೀರ್ ಕಪೂರ್ಗಿಂತ ಯಶ್ಗೆ ಡಿಮ್ಯಾಂಡ್ ಅನ್ನೋದು ಸತ್ಯ. ಇದಲ್ಲವೇ ನಮ್ಮ ಕನ್ನಡ ಸ್ಟಾರ್ ತಾಕತ್ತು.
ಪುರುಷ ಪ್ರಧಾನ ಸಿನಿಮಾಗಳಷ್ಟೇ ಬರುತ್ತಿದ್ದವು ಎಂದಿದ್ದಕ್ಕೆ ಥಟ್ಟನೆ ಸ್ಪೆಷಲ್ ಕೌಂಟರ್ ಕೊಟ್ಟ ಸಾಯಿ ಪಲ್ಲವಿ!