ಬಟ್ಟೆಯಲ್ಲಿ ಕಲ್ಲು ಸುತ್ತಿ ಹೊಡೆದ ನಟಿ ಮೃಣಾಲ್ ಠಾಕೂರ್; ಕೆಲವರ ಬಗ್ಗೆ ಕೆರಳಿ ಕೆಂಡಕಾರಿದ ಚೆಲುವೆ!

By Shriram Bhat  |  First Published Apr 10, 2024, 5:07 PM IST

ನೆಪೋಟಿಸಂ ಬಗ್ಗೆ ಬೇಸರದಿಂದ ಗಂಭೀರ ಆರೋಪ ಮಾಡಿರುವ ನಟಿ ಮೃಣಾಲ್ ಠಾಕೂರ್ 'ನಾನು ಬೆಸ್ಟ್ ಕ್ರಿಟಿಕ್ಸ್ ಅವಾರ್ಡ್ ಪಡೆದು ಪ್ರೈಜ್ ಸ್ವೀಕರಿಸಲು ವೇದಿಕೆ ಮೇಲೆ ಇದ್ದೆ. ನನ್ನಂತೆಯೆಏ ನಟಿಯರಾದ ಜಾಹ್ನವಿ ಕಪೂರ್ ಹಾಗೂ ಅನನ್ಯಾ ಪಾಂಡೆ ಸಹ ಅಲ್ಲಿದ್ದರು...


ಹೆಚ್ಚಾಗಿ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ನಟಿ ಮೃಣಾಲ್ ಠಾಕೂರ್ (Mrunal Thakur), ಬೆಸ್ಟ್ ಕ್ರಿಟಿಕ್ ಅವಾರ್ಡ್‌ ಪಡೆದ ಸಮಯದಲ್ಲಿ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ನೆಪೋಟಿಸಂ (Nepotism) ಬಗ್ಗೆ ನಟಿ ಮೃಣಾಲ್ ಠಾಕೂರ್ ಮಾತನಾಡಿದ್ದಾರೆ. ತಾವು ಬಹುಮಾನ ಪಡೆದ ಅದೇ ಕಾರ್ಯಕ್ರಮದಲ್ಲಿ ನಟಿ ಜಾಹ್ನವಿ ಕಪೂರ್ (Janhvi Kapoor) ಮತ್ತು ಅನನ್ಯಾ ಪಾಂಡೆ (Ananya Panday) ಕೂಡ ಪಡೆದುಕೊಂಡಿದ್ದಾರೆ. ಆದರೆ, ಅವರು ಸ್ಟಾರ್ ಕಿಡ್ ಆಗಿರುವ ಕಾರಣಕ್ಕೆ ಅವರಿಗೇ ಬೇರೆ ರೀತಿಯ ಟ್ರೇಟ್‌ಮೆಂಟ್ ಸಿಕ್ಕಿದೆ ಎಂದು ನಟಿ ಮೃಣಾಲ್ ಠಾಕೂರ್ ಆರೋಪ ಮಾಡಿದ್ದಾರೆ.  

ನೆಪೋಟಿಸಂ ಬಗ್ಗೆ ಬೇಸರದಿಂದ ಗಂಭೀರ ಆರೋಪ ಮಾಡಿರುವ ನಟಿ ಮೃಣಾಲ್ ಠಾಕೂರ್ 'ನಾನು ಬೆಸ್ಟ್ ಕ್ರಿಟಿಕ್ಸ್ ಅವಾರ್ಡ್ ಪಡೆದು ಪ್ರೈಜ್ ಸ್ವೀಕರಿಸಲು ವೇದಿಕೆ ಮೇಲೆ ಇದ್ದೆ. ನನ್ನಂತೆಯೆಏ ನಟಿಯರಾದ ಜಾಹ್ನವಿ ಕಪೂರ್ ಹಾಗೂ ಅನನ್ಯಾ ಪಾಂಡೆ ಸಹ ಅಲ್ಲಿದ್ದರು. ಆದರೆ, ಮೀಡಿಯಾದವರು ನನ್ನನ್ನು ಬಿಟ್ಟು ಜಾಹ್ನವಿ ಕಪೂರ್ ಹಾಗೂ ಅನನ್ಯಾ ಕಡೆ ಓಡುತ್ತಿದ್ದರು. ಎಲ್ಲರೂ ಒಂದೇ ರೀತಿಯಲ್ಲಿ ಬಹುಮಾನ ಪಡೆದಾಗ, ಹಾಗೆ ಮಾಡಲು ಅವರು ಸ್ಟಾರ್ ಕಿಡ್ಸ್ ಎನ್ನುವುದನ್ನು ಬಿಟ್ಟು ಬೇರೆ ಇನ್ನೇನು ಕಾರಣಗಳು ಇರುತ್ತವೆ?

Tap to resize

Latest Videos

ಯುವ ರಾಜ್‌ಕುಮಾರ್‌ಗೆ ಜವಾಬ್ದಾರಿ ಬಂದಿದ್ದು ಯಾವಾಗ; ಉತ್ತರ ನೀಡ್ತಿದೆ ವೈರಲ್ ಆಗ್ತಿರೋ ವೀಡಿಯೋ! 

ನನಗೆ ಸ್ಟಾರ್ ಕಿಡ್‌ಗಳ ಬಗ್ಗೆ ಅಸೂಯೆ ಇಲ್ಲ. ಏಕೆಂದರೆ ಅದು ಅವರಿಂದ ಆಗುತ್ತಿರುವ ಸಮಸ್ಯೆಯಲ್ಲ. ಅವರಿಗೆ ಅದರ ಬಗ್ಗೆ ಗೊತ್ತಿರಲಿಕ್ಕೆ ಕೂಡ ಇಲ್ಲ. ಆದರೆ, ನೆಪೋಟಿಸಂ ಎನ್ನುವುದು ಸ್ಟಾರ್ ಕಿಡ್‌ಗಳಲ್ಲಿ ಇರುವ ಬದಲು ಮಾಧ್ಯಮದವರು ಹಾಗು ಜನರಲ್ಲಿ ಇದೆ. ಸ್ಟಾರ್‌ ಕಿಡ್‌ಗಳು ಎನ್ನುವ ಕಾರಣಕ್ಕೆ ಅವರನ್ನು ಜನರು ಹಾಗೂ ಮಾಧ್ಯಮದವರು ಅವರನ್ನು ಅಟ್ಟಕ್ಕೇರಿಸುವ ಪ್ರವೃತ್ತಿ ಬಿಡಬೇಕು ಎನ್ನುವುದಷ್ಟೇ ನನ್ನ ಮನವಿ. ಸ್ಟಾರ್ ಕಿಡ್‌ಗಳ ಬಗ್ಗೆ ನನಗೇನೂ ಅಭ್ಯಂತರವಿಲ್ಲ'ಎಂದಿದ್ದಾರೆ. 

ಪರಮೇಶ್ವರ್ ಗುಂಡ್ಕಲ್- ಧನಂಜಯ್ ಜೋಡಿ 'ಕೋಟಿ' ಸಿನಿಮಾ ಪೋಸ್ಟರ್ ಯುಗಾದಿ ಹಬ್ಬಕ್ಕೆ ಬಿಡುಗಡೆ!

ಅಂದಹಾಗೆ, ನೆಪೋಟಿಸಂ ಬಗ್ಗೆ ಮಾತನಾಡಿರುವವರಲ್ಲಿ ನಟಿ ಮೃಣಾಲ್ ಠಾಕೂರ್ ಮೊದಲಿಗರೇನೂ ಅಲ್ಲ. ನಟಿ ಕಂಗನಾ ರಣಾವತ್ ಅವರು ಅನೇಕ ಬಾರಿ ಈ ಬಗ್ಗೆ ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಬೇರೂರಿರುವ ನೆಪೋಟಿಸಂ ಬಗ್ಗೆ ಅನೇಕ ವೇದಿಕೆಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ನಟಿ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್ ಮುಖ್ಯ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್‌ ಅವರು ನೆಪೋಟಿಸಂ ಪೋಷಿಸುತ್ತಿರುವವರಲ್ಲಿ ಪ್ರಮುಖರು ಎಂದು ಆಗಾಗ ಕಂಗನಾ ಹರಿಹಾಯುತ್ತಲೇ ಇರುತ್ತಾರೆ. 

ಬೆಂಗಳೂರು ಹೆಚ್‌ಎಎಲ್‌ ಆವರಣದಲ್ಲಿ 'ಟಾಕ್ಸಿಕ್' ಶೂಟಿಂಗ್ ಸೆಟ್; ಜಗತ್ತಿಗೇ ಕೊಡುತ್ತಿರುವ ಮೆಸೇಜ್ ಏನು?

click me!