ಬಿಗ್ ಬಾಸ್ ಕಪ್‌ ಗೆಲ್ಲದ ನಟಿ ಸಂಗೀತಾ ಶೃಂಗೇರಿ ಅಳೆದೂ ತೂಗಿ ಅದೆಂಥಾ ಮಾತು ಹೇಳ್ಬಿಟ್ರು ನೋಡಿ!

By Shriram Bhat  |  First Published Apr 10, 2024, 6:19 PM IST

ಕೆಲವು ದಿನಗಳ ಬಳಿಕ, ಆ ಟೈಮ್‌ ಬಗ್ಗೆ ಅದು ಕಳೆದು ಹೋದಾಗ ನೀವು ಮಾತಾಡ್ತೀರ.. ಸ್ವಲ್ಪ ದಿನ ಆದ್ಮೇಲೆ ಎಲ್ಲಾ ನಾರ್ಮಲ್ ಆಗಿರುತ್ತೆ.. ಆಗ ಆ ಕಷ್ಟಗಳು ಇತ್ತಲ್ಲಾ, ಅದು ಜೋಕ್ ಆಗಿ ಕಾಣ್ಸುತ್ತೆ, ಆ ಕಷ್ಟಗಳು ಏನೂ ಅಲ್ಲ ಅಂತ ಅನ್ಸುತ್ತೆ..


ಸ್ಯಾಂಡಲ್‌ವುಡ್ ನಟಿ ಹಾಗು ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಸಂದರ್ಶನವೊಂದರಲ್ಲಿ ಲೈಫ್ ಅನ್‌ಸರ್ಟಾನಿಟಿ (Uncertainty) ಬಗ್ಗೆ ಮಾತನಾಡಿದ್ದಾರೆ. ನಿರೂಪಕಿ ಕೇಳಿದ 'ನೀವು ಲೈಫ್‌ನಲ್ಲಿ ಅನ್‌ಸರ್ಟಾನಿಟಿನಾ ಹೇಗೆ ಹ್ಯಾಂಡಲ್‌ ಮಾಡ್ತೀರಾ ಸಂಗೀತಾ?' ಪ್ರಶ್ನೆಗೆ ಉತ್ತರಿಸುತ್ತ ನಟಿ ಸಂಗೀತಾ ಶೃಂಗೇರಿ ಅವರು 'ಲೈಫ್‌ನಲ್ಲಿ ಯಾವಾಗಾದ್ರೂ ಅನ್ಸುತ್ತಲ್ವಾ ಅನ್‌ಸರ್ಟಾನಿಟಿ ಇದೆ ಅಂತ.. 

ತುಂಬಾ ಕಷ್ಟ ಆಗ್ತಾ ಇದೆ, ನಾಳೆ ನಂಗೆ ಕೆಲ್ಸ ಸಿಗುತ್ತಾ ಇಲ್ವಾ, ದುಡ್ಡು ಸಿಗುತ್ತಾ ಇಲ್ವಾ? ಈ ಒಂದು ಪ್ರಶ್ನೆ ಬಂದಾಗ ಗಾಡ್‌ (God) ನಮ್ಮನ್ನು ಟೆಸ್ಟಿಂಗ್ ಮಾಡ್ತಾ ಇದಾನೆ ಅನ್ಸುತ್ತೆ, ನೀನು ಇದ್ನ ಹ್ಯಾಗೆ ಹ್ಯಾಂಡಲ್‌ ಮಾಡ್ತೀಯ ನೋಡೋಣ ಅಂತ! ಆ ಟೈಮಲ್ಲಿ ಎಲ್ಲಾನೂ ಬರೀ ನೆಗೆಟಿವ್‌ಗಳೇ ಬರ್ತಾ ಇರ್ತಾವೆ. ಲೈಫಲ್ಲಿ ಯಾವುದೇ ಹೋಪ್‌ ಇಲ್ಲಾ ಅಂತ ಅನ್ಸೋಕೆ ಶುರುವಾಗುತ್ತೆ.. 

Tap to resize

Latest Videos

ಬಟ್ಟೆಯಲ್ಲಿ ಕಲ್ಲು ಸುತ್ತಿ ಹೊಡೆದ ನಟಿ ಮೃಣಾಲ್ ಠಾಕೂರ್; ನೆಪೋಟಿಸಂ ಬಗ್ಗೆ ಕೆಂಡಕಾರಿದ ಚೆಲುವೆ!

ಕೆಲವು ದಿನಗಳ ಬಳಿಕ, ಆ ಟೈಮ್‌ ಬಗ್ಗೆ ಅದು ಕಳೆದು ಹೋದಾಗ ನೀವು ಮಾತಾಡ್ತೀರ.. ಸ್ವಲ್ಪ ದಿನ ಆದ್ಮೇಲೆ ಎಲ್ಲಾ ನಾರ್ಮಲ್ ಆಗಿರುತ್ತೆ.. ಆಗ ಆ ಕಷ್ಟಗಳು ಇತ್ತಲ್ಲಾ, ಅದು ಜೋಕ್ ಆಗಿ ಕಾಣ್ಸುತ್ತೆ,, ಆ ಕಷ್ಟಗಳು ಏನೂ ಅಲ್ಲ ಅಂತ ಅನ್ಸುತ್ತೆ.. ಆದ್ರೆ ಆ ಕಷ್ಟಗಳಲ್ಲಿ ನೀವು ತಗೊತಾ ಇರೋ ನಿರ್ಧಾರ, ಆ ಟೈಮ್‌ನಲ್ಲಿ ಯಾರು ನಿಮ್ ಜತೆ ಇದಾರೆ, ನೀವು ಯಾರ್ ಜತೆ ಮಾತಾಡ್ತಾ ಇದೀರಾ, ನೀವು ಯಾರ್ ಮಾತು ಕೇಳ್ತೀರಾ? ನೀವೇ ನಿಮ್ ಲೈಫ್ ಡಿಸಿಸನ್ ತಗೋತಾ ಇದೀರಾ ಅಥವಾ ಬೇರೆಯವ್ರಿಗೆ ನಿಮ್ ಡಿಸಿಸನ್ ತಗೋಳೋಕೆ ಬಿಡ್ತಿದೀರಾ? ಆ ಟೈಮ್‌ನಲ್ಲಿ ತುಂಬಾ ಅರ್ಥ ಮಾಡ್ಕೊಳ್ಳೋದು ಈ ಮ್ಯಾಟರ್. 

ಯುವ ರಾಜ್‌ಕುಮಾರ್‌ಗೆ ಜವಾಬ್ದಾರಿ ಬಂದಿದ್ದು ಯಾವಾಗ; ಉತ್ತರ ನೀಡ್ತಿದೆ ವೈರಲ್ ಆಗ್ತಿರೋ ವೀಡಿಯೋ!

ಅದೇನು ಅಂದ್ರೆ, ಏನೇ ಕಷ್ಟ ಬಂದ್ರೂ ಎಲ್ಲೀತನಕ ನಾನು ಉಸಿರಾಡ್ತಾ ಇರ್ತೀನೋ ಅಲ್ಲಿ ತನಕ ನಂಗೆ ನನ್ ಲೈಫ್‌ ಬಗ್ಗೆ ಹೋಪ್ ಇದೆ ಅಂತ.. ಅದನ್ನ ನಾನು ನನ್ ಬಿಗ್ ಬಾಸ್ (Bigg Boss) ಜರ್ನಿನಲ್ಲಿ ಕೂಡ ಫಸ್ಟ್ ಡೇ ಇಂದ ಕೊನೇ ದಿನದವರೆಗೂ ಇಟ್ಕೊಂಡಿದ್ದೆ.. ನಂಗೆ ಕಪ್ ಸಿಗದೇ ಇರ್ಬಹುದು, ಆದ್ರೆ ನನಗೆ ಬೇಕಾಗಿದ್ದು ಸಿಕ್ಕಿದೆ.. ಎಲ್ಲದರಿಂದ್ಲೂ ಪೊಸೆಟಿವ್ ತಗೋಬೇಕು ಅಷ್ಟೇ, ಎಂದಿದ್ದಾರೆ ನಟಿ ಸಂಗೀತಾ ಶೃಂಗೇರಿ. 

ಪರಮೇಶ್ವರ್ ಗುಂಡ್ಕಲ್- ಧನಂಜಯ್ ಜೋಡಿ 'ಕೋಟಿ' ಸಿನಿಮಾ ಪೋಸ್ಟರ್ ಯುಗಾದಿ ಹಬ್ಬಕ್ಕೆ ಬಿಡುಗಡೆ!

click me!