ತೆರೆ ಮೇಲೆ ರಕ್ಷಿತ್ ಶೆಟ್ಟಿ VS ರಶ್ಮಿಕಾ ಮಂದಣ್ಣ/ ಒಂದೇ ದಿನ ಬೇರೆ ಬೇರೆ ಚಿತ್ರಗಳು ರಿಲೀಸ್/ ಅವನೇ ಶ್ರೀಮನ್ನಾರಾಯಣ ಮತ್ತು ಪೊಗರು ಒಂದೇ ದಿನ ತೆರೆಗೆ
ಬೆಂಗಳೂರು(ಅ. 22) ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಸಿನಿಮಾಗಳು ಒಂದೇ ದಿನ ತೆರೆಯಲ್ಲಿ ಮುಖಾಮುಖಿಯಾಗಲಿವೆ. ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ "ಅವನೇ ಶ್ರೀಮನ್ನಾರಾಯಣ" ಮತ್ತು ಧ್ರುವ ಸರ್ಜಾ ಹಾಗೂ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಒಂದೇ ದಿನ ತೆರೆಗೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ.
ಈ ವರ್ಷದ ಕೊನೆಗೆ ಕನ್ನಡ ಚಿತ್ರರಸಿಕರಿಗೆ ಡಬಲ್ ಕಪೊಡುಗೆಯೂ ಇದೆ. ನಂದ ಕಿಶೋರ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಪೊಗರು ಹಾಗೂ ರಕ್ಷಿತ್ ಶೆಟ್ಟಿ ನಟನೆಯ, ನಿರ್ದೇಶಕರಾಗಿ ಸಚಿನ್ ರವಿ ಅವರ ಮೊದಲ ಸಿನಿಮಾ ಅವನೇ ಶ್ರೀಮನ್ನಾರಾಯಣ ಡಿ.27 ರಂದು ಬಿಡುಗಡೆಯಾಗಲಿವೆ.
undefined
ಜನ್ಮಾಷ್ಟಮಿಯ;ಲ್ಲಿ ಹುಲಿ ಹಾಡಿಗೆ ರಕ್ಷಿತ್ ಡಾನ್ಸ್
ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಹೊಸದಾಗಿ ಪ್ರಕಟಿಸಿದೆ. ಹಾಗಾಗಿ ಎರಡು ಚಿತ್ರಗಳು ಒಂದೇ ದಿನ ತೆರೆ ಮೇಲೆ ಬರಲಿವೆ. 2019 ರ ಡಿ.27 ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯ 3 ನೇ ವಾರ್ಷಿಕೋತ್ಸವದ ದಿನ ಸಹ ಆಗಿದೆ.
ಇನ್ನು ಪೊಗರು ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಅನೇಕ ಸಂದರ್ವಾಭದಲ್ದಲಿ ಡಿ.27 ರಂದು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.