
ಕರ್ನಾಟಕದ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಮಾಡಿದ ನಂತರ ಅವರ ಸಂಭಾವನೆ ಗಗನಕ್ಕೇರಿದೆ. ಈಗ ರಶ್ಮಿಕಾ ಜೊತೆ ಸಿನಿಮಾ ಮಾಡಬೇಕೆಂದರೆ ಸಂಭಾವನೆ ಕೂಡಾ ಅಷ್ಟೇ ಹೈ ಆಗಿರಬೇಕು.
ತೆಲುಗಿನ ಖ್ಯಾತ ನಟ ನಾಗ ಚೈತನ್ಯ ಜೊತೆ ಮುಂದಿನ ಸಿನಿಮಾ ಮಾಡಲು ರಶ್ಮಿಕಾ ಒಪ್ಪಿಕೊಂಡಿದ್ದರು. ಮಾತುಕತೆ ಹೆಚ್ಚು ಕಡಿಮೆ ಅಂತಿಮ ಹಂತಕ್ಕೆ ಬಂದಿತ್ತು. ನಿರ್ಮಾಪ ದಿಲ್ ರಾಜು ಜತೆ ಸಂಭಾವನೆ ವಿಚಾರದಲ್ಲಿ ಸ್ವಲ್ಪ ಕಿರಿಕ್ ಆಗಿದೆ ಎನ್ನಲಾಗಿದೆ.
ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚಿತಾರ್ಥ ಫೋಟೋಸ್!
ಮಾತುಕತೆ ಅಂತಿಮ ಹಂತದಲ್ಲಿದ್ದಾಗ ರಶ್ಮಿಕಾ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ನಿರ್ಮಾಪಕ ದಿಲ್ ರಾಜು ಇದಕ್ಕೆ ಒಪ್ಪದೇ ಇರುವುದರಿಂದ ರಶ್ಮಿಕಾ ಆ ಚಿತ್ರದಿಂದ ಹೊರ ಬಂದಿದ್ಧಾರೆ ಎನ್ನಲಾಗಿದೆ.
ಶಶಿ ಎನ್ನುವವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಎರಡು ಬಾರಿ ಕಥೆಯನ್ನು ನರೇಟ್ ಮಾಡಿದ್ದಾರೆ. ಆದರೆ ಸಂಭಾವನೆ ವಿಚಾರದಲ್ಲಿ ಕಿರಿಕ್ ಆಗಿದ್ದರಿಂದ ಚಿತ್ರದಿಂದ ಹೊರ ನಡೆದಿದ್ದಾರೆ.
ಸಂಭಾವನೆ ವಿಚಾರಕ್ಕೆ ಬಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡಿ ಶಾಹಿದ್ ಕಪೂರ್ ಜೊತೆ ನಟಿಸುತ್ತಾರೆ ಎನ್ನಲಾಗಿದ್ದ ಜೆರ್ಸಿ ಸಿನಿಮಾದಿಂದಲೂ ಹೊರ ಬಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.