ಒಮ್ಮೆ ಸಂಪತ್ ಗ್ರಹಚಾರ ಕೆಟ್ಟಿತ್ತು ಎನ್ನಬೇಕು. ಅಂದು ಶಾಲೆ ತಪ್ಪಿಸಿ, ಸಾಬಿಯನ್ನು ಬಿಟ್ಟು ಸಂಪತ್ ಒಬ್ಬರೇ ಮೃಗಾಲಯದ ಹತ್ತಿರಕ್ಕೆ ಜಟಕಾ ಹೊಡೆದುಕೊಂಡು ಹೋದರು. ಆದರೆ ಅಲ್ಲಿ ಅವರ ಎದೆ ಧಸಕ್ಕೆಂದಿತು.
ಕನ್ನಡದ ಮೇರು ನಟ, ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಜೀವನದಲ್ಲಿ ಹಲವಾರು ಮರೆಯಲಾಗದ ಘಟನೆಗಳು ನಡೆದಿದ್ದವು. ಅವರು ನಟರಾಗಿ ಉತ್ತುಂಗದಲ್ಲಿದ್ದಾಗ ನಡೆದಿದ್ದ ಕೆಲವು ಇನ್ಸಿಡೆಂಟ್‌ಗಳು ಸುದ್ದಿಯಾಗಿವೆ. ಆದರೆ, ಅವರು ಬಾಲ್ಯದಲ್ಲಿದ್ದಾಗ ನಡೆದ ಈ ಘಟನೆ ಬಹುಶಃ ಯಾರಿಗೂ ಗೊತ್ತಿರಲಿಕ್ಕಿಲ್ಲ. ನಟ ವಿಷ್ಣುವರ್ಧನ್ ಅವರ ಮೂಲ ಹೆಸರು ಸಂಪತ್ ಕುಮಾರ್ ಎಂಬುದು ಬಹುತೇಕರಿಗೆ ಗೊತ್ತು. ಈ ಸಂಪತ್ ಕುಮಾರ್ ಸ್ಕೂಲಿಗೆ ಹೋಗುವಾಗಿನ ಈ ಘಟನೆ ಇದೀಗ ಹೊರಬಂದಿದ್ದು ಸಖತ್ ವೈರಲ್ ಆಗತೊಡಗಿದೆ.
ಹುಡುಗ ಸಂಪತ್ ಕುಮಾರ್‌ಗೆ (ವಿಷ್ಣುವರ್ಧನ್‌ಗೆ) ಬಾಲ್ಯದಲ್ಲಿ ಜಟಕಾ ಗಾಡಿ ಓಡಿಸುವ ಹುಚ್ಚು. ಮೈಸೂರಿನ ನಂಜು ಮಳಿಗೆ ಜಟಕಾ ಸ್ಟ್ಯಾಂಡ್‌ನಲ್ಲಿ ಒಂದು ಒಳ್ಳೆಯ ಜಟಕಾ ಇತ್ತು. ಆ ಜಟಕಾ ಗಾಡಿಗೆ ಕಟ್ಟುತ್ತಿದ್ದ ಕುದುರೆ ಕಟ್ಟುಮಸ್ತಾಗಿದ್ದು, ಆ ಗಾಡಿಯನ್ನು ನೋಡಿದರೆ ವಿಷ್ಣುವರ್ಧನ್ ಅವರಿಗೆ ಏನೋ ಕ್ರೇಜ್. ಆ ಜಟಕಾ ಸಾಬಿಯ ಹೆಸರು ಸಾಬ್ ಜಾನ್. ಅವರನ್ನು ಪರಿಚಯ ಮಾಡಿಕೊಂಡು ಸಂಪತ್ ಕುಮಾರ್ ಅವರನ್ನು ಪಕ್ಕಕ್ಕೆ ಕುಳ್ಳಿಸಿರಿಕೊಂಡು ಆಗಾಗ ಜಟಕಾ ಹೊಡೆಯುತ್ತಿದ್ದರು. ಅದನ್ನು ಓಡಿಸುತ್ತ ಹುಡುಗಬುದ್ಧಿಯ ಸಂಪತ್ ಸಖತ್ ಎಂಜಾಯ್ ಮಾಡುತ್ತಿದ್ದರು.
ದೊಡ್ಡಮಾಮನ ಮನೇಲಿ ರಜನಿ ಸರ್ ಮೀಟ್ ಆಗಿದ್ದೆ, ಮುರಳಿ ಸಿಕ್ಕಾಪಟ್ಟೆ ಬೈದ; ವಿಜಯ್ ರಾಘವೇಂದ್ರ
ಒಮ್ಮೆ ಸಂಪತ್ ಗ್ರಹಚಾರ ಕೆಟ್ಟಿತ್ತು ಎನ್ನಬೇಕು. ಅಂದು ಶಾಲೆ ತಪ್ಪಿಸಿ, ಸಾಬಿಯನ್ನು ಬಿಟ್ಟು ಸಂಪತ್ ಒಬ್ಬರೇ ಮೃಗಾಲಯದ ಹತ್ತಿರಕ್ಕೆ ಜಟಕಾ ಹೊಡೆದುಕೊಂಡು ಹೋದರು. ಆದರೆ ಅಲ್ಲಿ ಅವರ ಎದೆ ಧಸಕ್ಕೆಂದಿತು. ಕಾರಣ, ಎದುರಿನಿಂದ ಅವರ ಚಿಕ್ಕಪ್ಪ ಬರುತ್ತಿದ್ದರು. ಅವರು ಮೈಸೂರಿನಲ್ಲಿರಲಿಲ್ಲ, ಆದರೆ ಊರಿಂದ ಬಂದವರು ಮೃಗಾಲಯ ವೀಕ್ಷಣೆಗೆ ಬಂದಿದ್ದರು. ಅಲ್ಲಿ ಅವರು ತಮ್ಮ ಅಣ್ಣನ ಮಗನನ್ನು ನೋಡಿ, ಅಚ್ಚರಿಗೆ ಒಳಗಾದರು. ಶಾಲೆಗೆ ಹೋಗಬೇಕಾಗಿದ್ದವ ಇಲ್ಲೇನು ಮಾಡುತ್ತಿದ್ದಾನೆ ಎಂದು ಅವರು ಶಾಕ್‌ಗೆ ಒಳಗಾದರು.
ಲಾಕ್‌ಡೌನ್ ವೇಳೆಯಲ್ಲೇ ವಕ್ಕರಿಸಿದ ಕ್ಯಾನ್ಸರ್, ಸೈಕಲ್ ತುಳಿದಿದ್ದೇಕೆ ನಟ ಸಂಜಯ್ ದತ್..?
ಬಳಿಕ, ಚಿಕ್ಕಪ್ಪ ಸಂಪತ್ ಮನೆಗೆ ಹೋದವರೇ ಈ ತಾವು ಕಂಡ ಘನಂದಾರಿ ಘಟನೆಯನ್ನು ಅಣ್ಣನ ಮನೆಯವರಿಗೆ ಹೇಳಿದ್ದಾರೆ. ಅಲ್ಲಿ ಅದು ದೊಡ್ಡ ಬಾಂಬ್ ರೀತಿ ಕೆಲಸ ಮಾಡಿದೆ. ಹುಡುಗ ಸಂಪತ್‌ಗೆ ಸರಿಯಾಗಿ ಒದೆ ಬಿತ್ತು. ಆದರೂ ಜಟಕಾ ಓಡಿಸುವುದನ್ನು ಬಿಡದಿದ್ದ ಅವರಿಗೆ, ಒಮ್ಮೆಯಂತೂ ಕೈಗೆ ಬರೆ ಕೊಟ್ಟು ಶಿಕ್ಷಿಸಲಾಗಿತ್ತು. ಅಂದು ಕೊಟ್ಟ ಆ ಬರೆ ನಟ ಸಂಪತ್ ಖ್ಯಾತ ನಟ ವಿಷ್ಣುವರ್ಧನ್ ಆಗಿ ಬದಲಾದ ಬಹುಕಾಲದ ಬಳಿಕವೂ ಅವರ ಕೈ ನಲ್ಲಿ ಕಾಣಿಸುತ್ತಲೇ ಇತ್ತು. ಹೀಗೆ ನಟ ವಿಷ್ಣುವರ್ಧನ್ ಅವರ ಜಟಕಾ ಓಡಿಸುವ ಹುಚ್ಚು ಬಾಲ್ಯದಲ್ಲಿ ಅವರಿಗೆ ಒದೆ ತಿನ್ನಿಸಿತ್ತು.
ಕಾಶೀನಾಥ್ ಶಿಷ್ಯ ಭಗತ್ ರಾಜ್ ಬಟ್ಟೆ ಬಗ್ಗೆ ಸಿನಿಮಾ ಮಾಡಿದ್ರಾ? ಯಾರಿದು ಬಾಲಿವುಡ್ ನಟ ಕಮಲ್?