ತಕ್ಷಣ ಹೋಗಿ ನಾನು ಅವರ ಕಾಲಿಗೆ ಕೂಡ ನಮಸ್ಕಾರ ಮಾಡಿದೆ. ನಂತರ ಪಕ್ಕದಲ್ಲಿ ಕುಳಿತೆ. ಮತ್ತೆ ಎದ್ದೆ, ಇಬ್ಬರಿಗೂ ನಮಸ್ಕಾರ ಮಾಡಿದೆ. ಮತ್ತೆ ಕುಳಿತು, ಮತ್ತೆ ಎದ್ದು ಇಬ್ಬರಿಗೂ ನಮಸ್ಕಾರ ಮಾಡಿದೆ. ಮೂರನೆಯ ಸಾರಿ ನಾನು ನಮಸ್ಕಾರ...
ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ (Vijay Raghavendra) ಮಾತನಾಡಿರುವ ವೀಡಿಯೋವೊಂದು ಸಖತ್ ವೈರಲ್ ಆಗಿದೆ. ಈ ವೀಡಿಯೋದಲ್ಲಿ ನಟ ವಿಜಯ್ ರಾಘವೇಂದ್ರ ಅವರು ತಾವು ತಮ್ಮ ಆರಾಧ್ಯ ದೈವವನ್ನು ಭೇಟಿಯಾಗಿದ್ದರ ಕುರಿತು ಮಾತನಾಡಿದ್ದಾರೆ. ನಟ ವಿಜಯ್ ರಾಘವೇಂದ್ರ ಅವರ ದೊಡ್ಡ ಮಾವ ಡಾ ರಾಜ್‌ಕುಮಾರ್ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಹಾಗಿದ್ದರೆ ಯಾವತ್ತು ವಿಜಯ್ ರಾಘವೇಂದ್ರ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿದ್ದು? ಮುಂದಿದೆ ಡೀಟೇಲ್ಸ್..
ನಟ ವಿಜಯ್ ರಾಘವೇಂದ್ರ ಅವರು ಈ ಬಗ್ಗೆ 'ನಾನು ಯಾವತ್ತೂ ನನ್ನ ಹುಟ್ಟುಹಬ್ಬದ ದಿನ ನಮ್ಮ ದೊಡ್ಡ ಮಾಮ (ಡಾ ರಾಜ್)ನ ಮನೆಗೆ ಹೋಗಿ ಸ್ವೀಟ್ ಕೊಟ್ಟು ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಬರುವುದು ಪದ್ಧತಿ ಮಾಡಿಕೊಂಡಿದ್ದೇನೆ. ಅದರಂತೆ ಒಮ್ಮೆ ನಾನು ನನ್ನ ಹುಟ್ಟುಹಬ್ಬದ ದಿನ ದೊಡ್ಡಮಾಮನ ಮನೆಗೆ ಹೋದೆ. ಬಾಗಿಲ ಎದುರಿನಲ್ಲೇ ಕುಳಿತಿದ್ದರು ದೊಡ್ಡ ಮಾಮ. ಅವರಿಗೆ ಸ್ವೀಟ್ ಕೊಟ್ಟು ನಮಸ್ಕಾರ ಮಾಡಿ ಪಕ್ಕಕ್ಕೆ ನೋಡಿದರೆ ಅಲ್ಲಿದ್ದರು ರಜನಿಕಾಂತ್ ಸರ್ (Rajinikanth).
ಮತ್ತೆ ಬರಲಿರುವ 'ಗಾಂಧಿ ನಗರ'ಕ್ಕೂ ಡಾ ರಾಜ್‌ಕುಮಾರ್ ಸಿನಿಮಾಕ್ಕೂ ಏನಾದ್ರೂ ಲಿಂಕ್ ಇದ್ಯಾ?
ತಕ್ಷಣ ಹೋಗಿ ನಾನು ಅವರ ಕಾಲಿಗೆ ಕೂಡ ನಮಸ್ಕಾರ ಮಾಡಿದೆ. ನಂತರ ಪಕ್ಕದಲ್ಲಿ ಕುಳಿತೆ. ಮತ್ತೆ ಎದ್ದೆ, ಇಬ್ಬರಿಗೂ ನಮಸ್ಕಾರ ಮಾಡಿದೆ. ಮತ್ತೆ ಕುಳಿತು, ಮತ್ತೆ ಎದ್ದು ಇಬ್ಬರಿಗೂ ನಮಸ್ಕಾರ ಮಾಡಿದೆ. ಮೂರನೆಯ ಸಾರಿ ನಾನು ನಮಸ್ಕಾರ ಮಾಡಿದ ಬಳಿಕ ನನಗೆ ನಾನೇನೋ ಮಾಡ್ತಾ ಇದೀನಲ್ಲ, ಏನೋ ಆಗ್ತಿದೆ ನಂಗೆ ಎನ್ನಿಸಿಬಿಟ್ಟಿತು. ಆಗ 'ಸರಿ ಮಾಮಾ, ಹೊರಡ್ತೀನಿ ಅಂದ್ಬಿಟ್ಟು ನನ್ನ ತಮ್ಮಂಗೆ ಫೋನ್ ಮಾಡಿ ರಜನಿ ಸರ್ ಇಲ್ಲಿರೋ ವಿಷಯ ಹೇಳಿದೆ.
ಲಾಕ್‌ಡೌನ್ ವೇಳೆಯಲ್ಲೇ ವಕ್ಕರಿಸಿದ ಕ್ಯಾನ್ಸರ್, ಸೈಕಲ್ ತುಳಿದಿದ್ದೇಕೆ ನಟ ಸಂಜಯ್ ದತ್..?
ಮರಳಿ ನಂಗೆ ಚೆನ್ನಾಗಿ ಬೈದ. ಅವ್ನು ಕೂಡ ರಜನಿ ಸರ್‌ನ ಡೈ ಹಾರ್ಡ್ ಫ್ಯಾನ್. 'ನಂಗೆ ಹೇಳಿದ್ರೆ ನಾನು ಬಂದು ಬಿಡ್ತಾ ಇದ್ನಲ್ಲ, 20 ನಿಮಿಷದಿಂದ ಅಲ್ಲೇ ಇದೀಯ ಅಂತ ನಂಗೆ ಚೆನ್ನಾಗಿ ಬೈದ. ಅಷ್ಟು ಪವರ್‌ಫುಲ್ ಪರ್ಸನ್ ಅಷ್ಟು ಸಂಪ್ಲಿಸಿಟಿ ಮೆಂಟೇನ್ ಮಾಡ್ಬೇಕಾದ್ರೆ ಅಲ್ಲೇ ಅರ್ಧ ಲೈಫ್‌ನ ಅರ್ಥ ಇದೆ. ಅದನ್ನೇ ಇಂಬೈಬ್ ಮಾಡಿದ್ದು ಅಪ್ಪು' ಎಂದಿದ್ದಾರೆ ನಟ ವಿಜಯ್ ರಾಘವೇಂದ್ರ. ವಿಜಯ್ ರಾಘವೇಂದ್ರ ಅವರು ನಟ ರಜನಿಕಾಂತ್ ಅವರನ್ನು ಭೇಟಿಯಾಗಿದ್ದು ತುಂಬಾ ವರ್ಷಗಳ ಹಿಂದೆ ಎಂಬುದು ಕನ್ಫರ್ಮ್. ಏಕೆಂದರೆ, ಈಗ ಡಾ ರಾಜ್‌ಕುಮಾರ್ ಅವರು ನಮ್ಮೊಂದಿಗಿಲ್ಲ.
ನಾವಿಬ್ಬರೂ ಒಟ್ಟಿಗೇ ಇರಬೇಕೆಂದು ಪೋಷಕರನ್ನೂ ದೂರ ಮಾಡಿದ್ವಿ; ಕಾಜೋಲ್ ದೇವಗನ್
ನಟ ವಿಜಯ್ ರಾಘವೇಂದ್ರ ಹಾಗು ಶ್ರೀ ಮುರಳಿ (Sri Murali) ಇಬ್ಬರೂ ನಟ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಗಳು ಎಂಬುದು ಈ ಮೂಲಕ ರುಜುವಾತಾಯಿತು. ಕನ್ನಡದ ವರನಟ ಡಾ ರಾಜ್‌ಕುಮಾರ್ ಕುಟುಂಬದ ಸಂಬಂಧಿಗಳಾಗಿರುವ ನಟ ವಿಜಯ್ ರಾಘವೇಂದ್ರ ಫ್ಯಾಮಿಲಿ ಡಾ ರಾಜ್ ಕುಟುಂಬದ ಜತೆ ಒಳ್ಳೆಯ ನಂಟು ಮೆಂಟೇನ್ ಮಾಡಿದೆ. ಹೀಗಾಗಿ ತಮ್ಮ ರೋಲ್ ಮಾಡೆಲ್ ರಜನಿಕಾಂತ್ ಅವರನ್ನು ಅಲ್ಲೇ ಭೇಟಿಯಾಗುವ ಸುಯೋಗ ನಟ ವಿಜಯ ರಾಘವೇಂದ್ರ ಅವರಿಗೆ ದೊರಕಿದೆ.