ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದೆ. ಸ್ಪೆಷಲ್ ಶೋ ವೇಳೆ ಸಿನಿಮಾ ನೋಡುತ್ತಿದ್ದ ಮಹಿಳೆಯೊಬ್ಬರು 'ದೇವಿ ಮೈಮೇಲೆ ಬಂದಂತಾಯ್ತು' ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಸಿನಿಮಾ ಚಿತ್ರೀಕರಣದ ವೇಳೆ ತನಗೂ ವಿಚಿತ್ರ ಅನುಭವಗಳಾಗಿವೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಲಾಂಗ್ ಗ್ಯಾಪ್ ನಂತರ ಬಣ್ಣ ಹಚ್ಚಿರೋ ಭೈರಾದೇವಿ ಸಿನಿಮಾ ಇದೇ ವಾರ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ರಿಲೀಸ್ ಗೂ ಮುನ್ನ ಸ್ಪೆಷಲ್ ಶೋನಲ್ಲಿ ಸಿನಿಮಾವನ್ನ ನೋಡಿರೋ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್ ರಾಧಿಕಾ ಅಭಿನಯಕ್ಕೆ ಫಿದಾ ಆಗಿದ್ದಾರೆ. ಇನ್ನೂ ಸಿನಿಮಾ ನೋಡ್ತಾ ಇದ್ದ ವೇಳೆ ಮಹಿಳೆಯೊಬ್ರು 'ದೇವಿ ಮೈಮೇಲೆ ಬಂದವರಂತೆ ಆಡಿದ್ದು, ಚಿತ್ರದಲ್ಲಿ ಅಂಥದ್ದೇನಿದೆ ಅನ್ನೋ ಕುತೂಹಲವೂ ಮೂಡಿದೆ.
ಭೈರಾದೇವಿ.. ಸ್ಯಾಂಡಲ್ ವುಡ್ ಸ್ವೀಟಿ ಬಹುಕಾಲದ ನಂತರ ಬಣ್ಣ ಹಚ್ಚಿರೋ ಸಿನಿಮಾ. ಆದ್ರೆ ಇಲ್ಲಿ ಸ್ವೀಟಿಯ ಊಟ್ ಅವತಾರ ನೋಡೋದಕ್ಕೆ ಸಿಕ್ಕೆದಿಲ್ಲ. ಬದಲಾಗಿ ಸ್ತ್ರೀ ಅಘೋರಿ ಪಾತ್ರದಲ್ಲಿ ನಟಿಸಿರೋ ರಾಧಿಕಾ, ಇಲ್ಲಿ ಚಂಡಿ ಚಾಮುಂಡಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
undefined
ಈಗಾಗ್ಲೆ ರಿಲೀಸ್ ಆಗಿರೋ ಚಿತ್ರದ ಟ್ರೈಲರ್, ಸಾಂಗ್ಸ್ ಭೈರಾದೇವಿ ಬಗ್ಗೆ ದೊಡ್ಡ ನಿರೀಕ್ಷೆ ಮೂಡುವಂತೆ ಮಾಡಿವೆ. ರಮೇಶ್ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದು, ಇದು ಮತ್ತೊಂದು ಆಪ್ತಮಿತ್ರ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದ್ರೆ ಇತ್ತೀಚಿಗೆ ಚಿತ್ರದ ಸ್ಪೆಷಲ್ ಶೋ ವೇಳೆ ಅಂಥದ್ದೇ ಘಟನೆ ನಡೆದಿದೆ.
ಬೀಚ್ ವೇರ್‌ನಲ್ಲಿ ಸ್ಟನ್ನಿಂಗ್ ಆಗಿ ನಟ ನಾಗಚೈತನ್ಯ ಮನದರಸಿ ನಟಿ ಶೋಭಿತಾ ಧೂಳಿಪಾಲ
ಭೈರಾದೇವಿ ಚಿತ್ರವನ್ನ ನೋಡ್ತಾ ಇದ್ದ ಮಹಿಳೆಯೊಬ್ರು, ಮೈಮೇಲೆ ದೇವಿ ಬಂದವರಂತೆ ಆಡಿದ್ದಾರೆ. ವಿಚಿತ್ರ ಶಕ್ತಿ ಆವರಿಸಿದಂತೆ ನರ್ತಿಸ್ತಾ ಇದ್ದ ಈಕೆಯನ್ನ ಚಿತ್ರಮಂದಿರದ ಹೊರಗೆ ಕರೆತಂದು ನೀರು, ಕುಡಿಸಿ ಸಮಾಧಾನ ಮಾಡಲಾಗಿದೆ.
ಅಸಲಿಗೆ ಭೈರಾದೇವಿ ಸಿನಿಮಾ ಚಿತ್ರೀಕರಣವಾಗ್ತಾ ಇದ್ದಾಗಲೇ ರಾಧಿಕಾಗೂ ಇಂತಹ ಹಲವು ಅನುಭವ ಆಗಿವೆಯಂತೆ. ಸ್ತ್ರೀ ಅಘೋರಿ ಪಾತ್ರ ಮಾಡೋದು, ಕಾಳಿ ಅವತಾರ ಹಾಕೋದು ಅಷ್ಟು ಸುಲಭದ ಕೆಲಸ ಅಲ್ಲ. ಈ ಅವಧಿನಲ್ಲಿ ತಮಗೆ ಅನೇಕ ವಿಚಿತ್ರ ಅನುಭವ ಆಗಿವೆ ಅಂತ ಖುದ್ದು ರಾಧಿಕಾ ಹೇಳಿಕೊಂಡಿದ್ದಾರೆ.
ಇನ್ನೂ ಸೆಲೆಬ್ರಿಟಿ ಶೋನಲ್ಲಿ ಭೈರಾದೇವಿ ಸಿನಿಮಾವನ್ನ ನೋಡಿದ ಕನ್ನಡ ಚಿತ್ರರಂಗದ ತಾರೆಯರು ರಾಧಿಕಾ ನಟನೆಯನ್ನ ಕೊಂಡಾಡಿದ್ದಾರೆ. ರಾಧಿಕಾ ಪಟ್ಟ ಶ್ರಮ ತೆರೆ ಮೇಲೆ ಕಾಡ್ತಾ ಇದೆ. ಇದೊಂದು ಬೆಸ್ಟ್ ಹಾರರ್ ಗ್ರಿಲ್ಲರ್ ಎಕ್ಸ್ ಪೀರಿಯನ್ಸ್ ಕೊಡುವ ಸಿನಿಮಾ ಅಂತ ಭೈರಾದೇವಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಇನ್ನೂ ಲಾಂಗ್ ಗ್ಯಾಪ್ ನಂತರ ಬಣ್ಣ ಹಚ್ಚಿರೋ ರಾಧಿಕಾ, ಚಿತ್ರರಂಗದ ಮಿತ್ರರಿಂದ ಬಂದ ರೆಸ್ಪಾನ್ಸ್ ನೋಡಿ ಖುಷ್ ಆಗಿದ್ದಾರೆ. ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 1 ರಿಂದ 10ರವರೆಗೆ 50 ಲಕ್ಷ ಗೆದ್ದವರಿವರು!
ಒಟ್ಟಾರೆ ಭೈರಾದೇವಿ ಒಂದು ಸಾಮಾನ್ಯ ಸಿನಿಮಾ ಅಲ್ಲ ಅನ್ನೋದು ಮತ್ತೆ ಮತ್ತೆ ಪ್ರೊವ್ ಆಗ್ತಾ ಬಂದಿದೆ. ಸದ್ಯ ಸಿನಿಮಾ ನೋಡಿದವರು ಇದೊಂದು ಅದ್ಭುತ ಎಕ್ಸ್ ಪಿರೀಯನ್ಸ್ ಅಂದಿದ್ದಾರೆ. ಸೋ ಈ ಎಕ್ಸ್ ಪೀರಿಯನ್ಸ್ ನ ತೆರೆ ಮೇಲೆ ನೋಡಲಿಕ್ಕೆ ನೀವು ಕೂಡ ಸಜ್ಜಾಗಿ. ಇದೇ ಗುರುವಾರ ಭೈರಾದೇವಿ ಬೆಳ್ಳಿತೆರೆ ಮೇಲೆ ರಾಜಾಜಿಸಲಿದ್ದಾಳೆ.
ಭೈರಾದೇವಿಯಲ್ಲಿ ಭೂತ-ಪ್ರೇಮತಗಳ ಕಥೆ ಇದೆ. ಅದನ್ನ ಪರಿಹರಿಸೋಕೆ ಅಘೋರಿಗಳ ಮೊರೆ ಹೋಗೋ ಚಿತ್ರಣವೂ ಇದೆ. ಇದನ್ನ ಸರಿ ಮಾಡೋಕೆ ಅಘೋರಿಗಳ ಎಂಟ್ರಿ ಆದ್ಮೇಲೆ ಆಗೋ ಅಬ್ಬರವೂ ಇಲ್ಲಿ ವಿಶೇಷವಾಗಿಯೇ ಇದೆ. ಭೈರಾದೇವಿ ಸಿನಿಮಾದಲ್ಲಿ ಹಾರರ್ ಕಂಟೆಂಟ್ ಜಾಸ್ತಿನೇ ಇದೆ. ಅದರ ಜೊತೆಗೆ ದೇವರ ಮೇಲೆ ಭಕ್ತಿ ಬರೋ ಮ್ಯಾಟರ್ ಕೂಡ ಇದೆ. ಎಲ್ಲವೂ ಇರೋ ಈ ಸಿನಿಮಾ ಒಂದು ಭರವಸೆಯಂತೂ ಮೂಡಿಸಿದೆ.
ಡೈರೆಕ್ಟರ್ ಶ್ರೀಜೈ ಆಕ್ಷನ್ ಕಟ್ ಹೇಳಿರೋ ಭೈರಾದೇವಿಗೆ ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನೀಡಿದ್ದಾರೆ. ಭೈರಾದೇವಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಅಕ್ಟೋಬರ್ 3ನೇ ತಾರೀಕು ಸಿನಿಮಾ ತೆರೆ ಮೇಲೆ ಬರಲಿದೆ. ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸಿರೋ ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲ ಹೆರಚ್ಚಾಗಿರೋದಂತು ಸುಳ್ಳಲ್ಲ.