ನಟಿ ನಿವೇದಿತಾ ಜೈನ್ ಸಾವು ಆಕಸ್ಮಿಕವೋ, ಕೊಲೆಯೋ; ಪದೇಪದೇ ಚರ್ಚೆ ಆಗುತ್ತಿರುವುದೇಕೆ?

By Shriram BhatFirst Published May 9, 2024, 6:16 PM IST
Highlights

ತೆಲುಗಿನಲ್ಲಿ ಅರ್ಜುನ್ ಸರ್ಜಾ ಜೋಡಿಯಾಗಿ 'ತಾಯಿನ್ ಮನಿಕೊಡಿ' ಸಿನಿಮಾದಲ್ಲಿ ನಿವೇದಿತಾ ಜೈನ್ ನಟಿಸಿದ್ದಾರೆ. ತಮಿಳಿನಲ್ಲಿ ಕೂಡ ಒಂದು ಚಿತ್ರದಲ್ಲಿ ಕಾಣಿಸಿಕೊಂಡರೂ ಅವರಿಗೆ ಸಿನಿಮಾ ನಟಿಯಾಗಿ ಹಿಟ್ ಸಿಗಲೇ ಇಲ್ಲ. 

ನಟಿ ನಿವೇದಿತಾ ಜೈನ್ (Nivedita Jain) ಕನ್ನಡ ಸಿನಿರಂಗ ಕಂಡ ಅತ್ಯಂತ ಸ್ಪುರದ್ರೂಪಿ ನಟಿಯರಲ್ಲಿ ಒಬ್ಬರು. ಸಿನಿಮಾಗಿಂತ ಮೊದಲು ಅವರು ಮಾಡೆಲಿಂಗ್ ಮಾಡುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್ ನಾಯಕತ್ವದ 'ಶಿವರಂಜನಿ' ಚಿತ್ರದ ಮೂಲಕ ನಟಿಯಾಗಿ ಉದ್ಯಮಕ್ಕೆ ಕಾಲಿಟ್ಟ ನಿವೇದಿತಾ ಜೈನ್, ನಟ ಶಿವರಾಜ್‌ಕುಮಾರ್ ನಾಯಕತ್ವದ 'ಶಿವಸೈನ್ಯ' ಚಿತ್ರಕ್ಕೂ ನಾಯಕಿಯಾಗಿದ್ದರು. ತಮ್ಮ ವೃತ್ತಿಜೀವನದ ಮೊದಲ ಎರಡೂ ಚಿತ್ರಗಳಲ್ಲಿ ಡಾ ರಾಜ್‌ಕುಮಾರ್ ಫ್ಯಾಮಿಲಿಯ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಿದ್ದರು ನಟಿ ನಿವೇದಿತಾ ಜೈನ್. ಶಿವರಂಜನಿ ಕಳಪೆ ಕಲೆಕ್ಷನ್ ದಾಖಲಿಸಿದರೆ ಶಿವಸೈನ್ಯ ಅದಕ್ಕಿಂತ ಬೆಟರ್ ಎಂಬಂತಾಗಿತ್ತು ಅಷ್ಟೇ!

ನಟಿ ನಿವೇದಿತಾ ಜೈನ್‌ ನಟನೆಯ 'ಅಮೃತವರ್ಷಿಣಿ' ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಆದರೆ, ಸುಹಾಸಿನಿ-ಶರತ್‌ಬಾಬು ಹಾಗು ರಮೇಶ್ ಅರವಿಂದ್ ನಟನೆಯ ಆ ಚಿತ್ರದಲ್ಲಿ ನಿವೇದಿತಾ ಜೈನ್ ಕೇವಲ ಒಂದು ಹಾಡಿಗೆ ಮಾತ್ರ ಸೀಮಿತವಾಗಿದ್ದರು. ಹೀಗಾಗಿ ಆ ಚಿತ್ರದ ಸಕ್ಸಸ್ ಕ್ರೆಡಿಟ್ ನಿವೇದಿತಾಗೆ ಸಿಗಲಿಲ್ಲ. ಬಳಿಕ, ಪ್ರೇಮರಾಗ ಹಾಡು ಗೆಳತಿ, ಸೂತ್ರಧಾರ, ನೀ ಮುಡಿದಾ ಮಲ್ಲಿಗೆ, ಬಾಳಿದ ಮನೆ, ಹೀಗೆ ಸಾಲುಸಾಲು ಚಿತ್ರಗಳಲ್ಲಿ ನಟಿ ನಿವೇದಿತಾ ಜೈನ್ ಕಾಣಿಸಿಕೊಂಡರೂ ಅವರಿಗೆ ಯಶಸ್ಸು ಮಾತ್ರ ದಕ್ಕಲೇ ಇಲ್ಲ.

ಮಳೆಗಾಲಕ್ಕೆ ಬರ್ತಿದಾನೆ ಭಗೀರಥ, ಮಾನ್ಸೂನ್ ಬರೋವರೆಗೂ ಕಾದು ಬರ್ತಿರೋದ್ಯಾಕೆ?

ತೆಲುಗಿನಲ್ಲಿ ಅರ್ಜುನ್ ಸರ್ಜಾ ಜೋಡಿಯಾಗಿ 'ತಾಯಿನ್ ಮನಿಕೊಡಿ' ಸಿನಿಮಾದಲ್ಲಿ ನಿವೇದಿತಾ ಜೈನ್ ನಟಿಸಿದ್ದಾರೆ. ತಮಿಳಿನಲ್ಲಿ ಕೂಡ ಒಂದು ಚಿತ್ರದಲ್ಲಿ ಕಾಣಿಸಿಕೊಂಡರೂ ಅವರಿಗೆ ಸಿನಿಮಾ ನಟಿಯಾಗಿ ಹಿಟ್ ಸಿಗಲೇ ಇಲ್ಲ. ಸಿನಿಮಾರಂಗದಲ್ಲಿ ಸಕ್ಸಸ್ ಸಿಗದ ಹಿನ್ನೆಲೆಯಲ್ಲಿ ನಿವೇದಿತಾ ಜೈನ್ ಮತ್ತೆ ಮಾಡೆಲಿಂಗ್‌ ಕಡೆಗೆ ಮರಳಲು ನಿರ್ಧರಿಸಿ ಅದಕ್ಕಾಗಿ ಸಿದ್ಧತೆ ಶುರುಮಾಡಿದ್ದರು. 

ಪೇರೆಂಟಿಂಗ್ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದೇನು? ಇಂದಿನ ಕಾಲಕ್ಕೆ ಈ ಅಡ್ವೈಸ್‌ ಸೂಕ್ತವೇ?

1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಗಾಗಿ ತಯಾರಿ ಮಾಡುತ್ತಿದ್ದ ನಿವೇದಿತಾ ಜೈನ್, 17 ಮೇ 1998ರಂದು ತಮ್ಮದೇ ಮನೆಯ ಟೆರೆಸ್ಸಿನ ಮೇಲೆ ಕ್ಯಾಟ್‌ವಾಕ್ ಮಾಡುವಾಗ 35 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಕೋಮಾಗೆ ಜಾರಿ ಆಸ್ಪತ್ರೆ ಸೇರಿಕೊಂಡರು. ಬಳಿಕ, ಚಿಕಿತ್ಸೆ ಫಲಕಾರಿಯಾಗದೇ 10 ಜೂನ್ 1998ರಲ್ಲಿ ಇಹಲೋಕ ತ್ಯಜಿಸಿದರು. ಮಗಳನ್ನು ಬದುಕಿಸಿಕೊಳ್ಳಲು ಹರಸಾಹಸ ಪಟ್ಟಿದ್ದ ಅವರ ತಂದೆಯ ಯಾವ ಪ್ರಯತ್ನವೂ ಫಲ ಕೊಡಲಿಲ್ಲ. ಕೇವಲ 19 ವರ್ಷಕ್ಕೆ ನಟಿ ನಿವೇದಿತಾ ಜೈನ್ ಅಸು ನೀಗಿದರು. 

ನಾಲ್ಕು ತಾಸಿಗಿಂತ ಹೆಚ್ಚಿನ ನಿದ್ದೆ ಟೈಂ ವೇಸ್ಟ್ ಅಂದ್ರು ಸಿಹಿಕಹಿ ಚಂದ್ರು; ನೆಟ್ಟಿಗರಿಂದ ಶುರುವಾಯ್ತು ಪಾಠ!

ಆದರೆ, ನಿವೇದಿತಾ ಜೈನ್ ಸಾವು ಆಕಸ್ಮಿಕ ಅಪಘಾತವಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂಬ ಗಾಸಿಪ್ ಹಬ್ಬಿತ್ತು. ಕರ್ನಾಟಕದ ಅಂದಿನ ಪ್ರಭಾವಿ ರಾಜಕಾರಣಿಯೊಬ್ಬರು ನಟಿ ನಿವೇದಿತಾ ಜೈನ್‌ ಅವರಿಗೆ ತಮ್ಮನ್ನು ಭೇಟಿಯಾಗುವಂತೆ ಪದೇಪದೇ ಪೀಡಿಸುತ್ತಿದ್ದರು. ಅವರ ಕಿರಿಕಿರಿ ತಾಳಲಾರದೇ ನಿವೇದಿತಾ ಜೈನ್ ಆತ್ಮಹತ್ಯೆ ಮಾಡಿಕೊಂಡರು ಎಂಬ ಗಾಸಿಪ್ ಹಬ್ಬಿತ್ತು. ಅಷ್ಟೇ ಅಲ್ಲ, ಅಂದಿನ ಸ್ಟಾರ್ ನಟರೊಬ್ಬರು ನಿವೇದಿತಾ ಜೈನ್ ಬೆನ್ನುಬಿದ್ದು ತಮ್ಮನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದರು, ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಯ್ತು. 

ಸಾಯಿ ಪಲ್ಲವಿ ರೋಲ್ ಮಾಡೆಲ್ ಹುಡುಗನ ಸೀಕ್ರೆಟ್ ರಿವೀಲ್; ಅಬ್ಬಬ್ಬಾ, ಅಂಥವ್ನು ಸಿಗ್ತಾನಾ?

ಆದರೆ, ಅದ್ಯಾವುದೂ ಕೂಡ ಸಾಕ್ಷಿ ಸಮೇತ ಪ್ರೂವ್ ಆಗಲಿಲ್ಲ. ಬಿದ್ದು ಆಸ್ಪತ್ರೆ ಸೇರಿಕೊಂಡಿದ್ದ ನಟಿ ನಿವೇದಿತಾ ಗುಣಮುಖರಾಗಿ ಬಂದಿದ್ದರೆ ಬಹುಶಃ ಈ ಎಲ್ಲ ಗಾಸಿಪ್‌ಗಳಿಗೆ, ಗಾಳಿಸುದ್ದಿಗಳಿಗೆ ಸ್ಪಷ್ಟನೆ ಕೊಡುತ್ತಿದ್ದರೇನೋ! ಆದರೆ ಹಾಗಾಗಲಿಲ್ಲ. ಫೋನ್ ಕಾಲ್ ಇರಲಿ, ಪ್ರೀತಿಗಾಗಿ ಪೀಡನೆ ಇರಲಿ, ಅದು ವೈಯಕ್ತಿಕವಾದದ್ದು. ಅದನ್ನು ಸ್ವತಃ ಅವರಷ್ಟೇ ಬಲ್ಲರು. ಹೇಳಿದರೆ ಮಾತ್ರ ಹೊರಜಗತ್ತಿಗೆ ಗೊತ್ತಾಗಲು ಸಾಧ್ಯ. ಹೀಗಾಗಿ ಕೊನೆಗೂ ನಿವೇದಿತಾ ಜೈನ್ ಸಾವು ಶಾಶ್ವತವಾಗಿ ಗಾಳಿಸುದ್ದಿಗೆ, ಗಾಸಿಪ್‌ಗಳಿಗೆ ಆಹಾರವಾಗಿಯೇ ಉಳಿಯಿತು. 

click me!