ಮಳೆಗಾಲಕ್ಕೆ ಬರ್ತಿದಾನೆ ಭಗೀರಥ, ಮಾನ್ಸೂನ್ ಬರೋವರೆಗೂ ಕಾದು ಬರ್ತಿರೋದ್ಯಾಕೆ?

Published : May 09, 2024, 04:15 PM ISTUpdated : May 09, 2024, 04:18 PM IST
ಮಳೆಗಾಲಕ್ಕೆ ಬರ್ತಿದಾನೆ ಭಗೀರಥ, ಮಾನ್ಸೂನ್ ಬರೋವರೆಗೂ ಕಾದು ಬರ್ತಿರೋದ್ಯಾಕೆ?

ಸಾರಾಂಶ

ದೇವರ್ಷಿ ಭಗೀರಥ ತನ್ನ ತಪಸ್ಸಿನಿಂದ ಗಂಗೆಯನ್ನು ಭೂಲೋಕಕ್ಕೆ ಕರೆ ತಂದರು ಎಂಬುದು ಪುರಾಣ ಪ್ರಸಿದ್ಧ ಕಥೆ. ಆ ಕಾರಣಕ್ಕಾಗಿಯೇ ಗಂಗೆಗೆ 'ಭಾಗೀರಥಿ' ಎಂಬ ಹೆಸರು ಉಂಟು. ತುಂಬಾ ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ..

ದೇವರ್ಷಿ ಭಗೀರಥ (Bhageeratha) ತನ್ನ ತಪಸ್ಸಿನಿಂದ ಗಂಗೆಯನ್ನು ಭೂಲೋಕಕ್ಕೆ ಕರೆ ತಂದರು ಎಂಬುದು ಪುರಾಣ ಪ್ರಸಿದ್ಧ ಕಥೆ. ಆ ಕಾರಣಕ್ಕಾಗಿಯೇ ಗಂಗೆಗೆ 'ಭಾಗೀರಥಿ' ಎಂಬ ಹೆಸರು ಉಂಟು. ತುಂಬಾ ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು 'ಭಗೀರಥ' ಪ್ರಯತ್ನ ಎನ್ನುತ್ತಾರೆ. ಇಂತಹ ಒಂದು  ವಿಭಿನ್ನ ಕಥೆಯನ್ನಿಟ್ಟಿಕೊಂಡು 'ಭಗೀರಥ' ಸಿನಿಮಾ ಬರುತ್ತಿದೆ. ಮುಂದಿನ ತಿಂಗಳು ಜೂನ್‌ನಲ್ಲಿ (ಮಾನ್ಸೂನ್ ವೇಳೆ)ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಕೆ ರಮೇಶ್ ಹಾಗೂ ಬಿ ಭೈರಪ್ಪ ಮೈಸೂರು ನಿರ್ಮಿಸಿರುವ ಚಿತ್ರ ಭಗೀರಥ. ಈ ಮೊದಲು 'ಬಾಯ್ ಫ್ರಂಡ್‌' ಚಿತ್ರವನ್ನು ಮಾಡಿದ್ದ ರಾಮ್ ಜನಾರ್ದನ್ ಈ ಚಿತ್ರದ ನಿರ್ದೇಶಕರು. ಭಗೀರಥ ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು‌. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಪೇರೆಂಟಿಂಗ್ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದೇನು? ಇಂದಿನ ಕಾಲಕ್ಕೆ ಈ ಅಡ್ವೈಸ್‌ ಸೂಕ್ತವೇ?

'ಕಳೆದ ಸೆಪ್ಟೆಂಬರ್‌ನಲ್ಲಿ ನಮ್ಮ ಚಿತ್ರ ಭಗೀರಥ್ ಮುಹೂರ್ತ ಸಮಾರಂಭ ನೆರವೇರಿತ್ತು. ಈಗ ಚಿತ್ರೀಕರಣ ಮುಕ್ತಾಯವಾಗಿ, ತೆರೆಗೆ ಬರಲು ಅಣಿಯಾಗಿದೆ. ಮಂದಿನ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ‌. ಚಿತ್ರವು ನಮ್ಮ ತಂಡದ ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿದೆ. 'ಬಾಯ್ ಫ್ರೆಂಡ್' ಚಿತ್ರದಿಂದ ನಾನು ನಿರ್ದೇಶಕನಾದೆ. 'ಭಗೀರಥ' ನನ್ನ ನಿರ್ದೇಶನದ ಐದನೇ ಚಿತ್ರ. ಇದೊಂದು ಪ್ರಸ್ತುತ ರಾಜಕಾರಣದ ಕಥಾಹಂದರ ಹೊಂದಿರುವ ಹಾಗೂ ಪತ್ರಕರ್ತರೊಬ್ಬರ ಸುತ್ತ ನಡೆಯುವ ಕಥೆ.  ಇಂದು ಟೀಸರ್ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಎನ್ ಎಂ ಸುರೇಶ್ ಅವರಿಗೆ ಧನ್ಯವಾದಗಳು' ಎಂದಿದ್ದಾರೆ ನಿರ್ದೇಶಕ ರಾಮ್ ಜನಾರ್ದನ್‌. 

ನಾಲ್ಕು ತಾಸಿಗಿಂತ ಹೆಚ್ಚಿನ ನಿದ್ದೆ ಟೈಂ ವೇಸ್ಟ್ ಅಂದ್ರು ಸಿಹಿಕಹಿ ಚಂದ್ರು; ನೆಟ್ಟಿಗರಿಂದ ಶುರುವಾಯ್ತು ಪಾಠ!

'ಜರ್ನಿಲಿಸಂ ಮಾಡಿ ಪತ್ರಕರ್ತನಾಗಿದ್ದ ನಾನು, 'ಜಮಾನ' ಚಿತ್ರದ ಮೂಲಕ ನಟನಾದೆ ಎಂದು ಮಾತನಾಡಿದ ನಾಯಕ ಜಯಪ್ರಕಾಶ್ ಅವರು, 'ಭಗೀರಥ' ನನ್ನ ಮೂರನೇಯ ಚಿತ್ರ. 'ಸೂರ್ಯಪ್ರಕಾಶ್' ನನ್ನ ಪಾತ್ರದ ಹೆಸರು. ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. 'ಭಗೀರಥ' ಹೆಸರಿಗೆ ತಕ್ಕಂತೆ ನೀರಿಗೆ ಸಂಬಂಧಿಸಿದ ಕಥೆ ಈ ಚಿತ್ರದಲ್ಲಿದೆ' ಎಂದರು.

ಸಾಯಿ ಪಲ್ಲವಿ ರೋಲ್ ಮಾಡೆಲ್ ಹುಡುಗನ ಸೀಕ್ರೆಟ್ ರಿವೀಲ್; ಅಬ್ಬಬ್ಬಾ, ಅಂಥವ್ನು ಸಿಗ್ತಾನಾ?

'ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುತ್ತೇವೆ. ಪ್ರೋತ್ಸಾಹ ನೀಡಿ' ಎಂದರು ನಿರ್ಮಾಪಕರಾದ ಕೆ ರಮೇಶ್ ಹಾಗೂ ಬಿ ಭೈರಪ್ಪ. 'ನಾನು ನಾಯಕನ ಸೋದರತ್ತೆಯ ಮಗಳ ಪಾತ್ರದಲ್ಲಿ ನಟಿಸಿದ್ದೇನೆ' ಎಂದು ನಟಿ ಶ್ರೀಯಾ ಪಾವನಿ ತಿಳಿಸಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಹಾಗೂ ಛಾಯಾಗ್ರಹಣದ ಕುರಿತು ಸೂರಿ ಚಿತ್ತೂರು ಮಾಹಿತಿ ನೀಡಿದರು. ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಾಲ ರಾಜವಾಡಿ, ನಯನ, ಸುರಭಿ ರವಿ, ಶ್ರೀಯಾ ಪಾವನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!