ಧನ್ಯಾ ರಾಮ್‌ಕುಮಾರ್‌ ಚೊಚ್ಛಲ ಸಿನಿಮಾ ಬಿಡುಗಡೆಗೆ ದಿನಗಣನೆ

Published : Aug 04, 2021, 10:02 AM ISTUpdated : Aug 05, 2021, 09:02 AM IST
ಧನ್ಯಾ ರಾಮ್‌ಕುಮಾರ್‌ ಚೊಚ್ಛಲ ಸಿನಿಮಾ ಬಿಡುಗಡೆಗೆ ದಿನಗಣನೆ

ಸಾರಾಂಶ

ಧನ್ಯಾ ರಾಮ್‌ಕುಮಾರ್‌ ಚೊಚ್ಛಲ ಸಿನಿಮಾ ಬಿಡುಗಡೆಗೆ ದಿನಗಣನೆ ನಿನ್ನ ಸನಿಹಕೆ ಸಿನಿಮಾ ಆ.20ರಂದು ರಿಲೀಸ್‌

ಡಾ. ರಾಜ್‌ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್‌ ನಟನೆಯ ‘ನಿನ್ನ ಸನಿಹಕೆ’ ಸಿನಿಮಾ ಆ. 20ರಂದು ರಿಲೀಸ್‌ ಆಗಲಿದೆ. ಸೂರಜ್‌ ಗೌಡ ನಿರ್ದೇಶನ, ನಟನೆಯ ಈ ಸಿನಿಮಾದ ನಿರ್ಮಾಪಕರು ಅಕ್ಷಯ್‌ ರಾಜಶೇಖರ್‌, ರಂಗನಾಥ್‌ ಕೂಡ್ಲಿ. ಮೊದಲ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಧನ್ಯಾ ಮಾತನಾಡಿದ್ದಾರೆ.

ಪ್ರಿಯಾ ಕೆರ್ವಾಶೆ

- ನನ್ನ ಮೊದಲ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ನಿರೀಕ್ಷೆ, ಆತಂಕ, ಸಂಭ್ರಮ ಎಲ್ಲವನ್ನೂ ಒಟ್ಟೊಟ್ಟಿಗೇ ಅನುಭವಿಸುತ್ತಿದ್ದೇನೆ. ದೊಡ್ಡ ಎಕ್ಸೈಟ್‌ಮೆಂಟ್‌ ಇದೆ.

- ಈ ಸಿನಿಮಾದಲ್ಲಿ ಉದ್ಯೋಗದಲ್ಲಿರುವ ಹುಡುಗಿಯ ಪಾತ್ರ. ಮೂಗಿನ ತುದೀಲಿ ಕೋಪ. ಆದರೂ ಅದೊಂಥರಾ ಕ್ಯೂಟ್‌ ಕೋಪ. ಉಳಿದಂತೆ ಗಂಭೀರ ನಡೆಯ ಹೆಣ್ಣುಮಗಳು. ಪಾತ್ರಕ್ಕೆ ತಕ್ಕ ಹಾಗೆ ಸಿನಿಮಾದಲ್ಲಿ ಡೀಸೆಂಟ್‌ ಉಡುಗೆಯಲ್ಲೇ ಕಾಣಿಸಿಕೊಂಡಿದ್ದೇನೆ. ಈ ಚಿತ್ರ ನೋಡ್ತಿದ್ರೆ ಟೀನೇಜ್‌, 20ರಿಂದ 30ರ ಹರೆಯದವರಿಗೆ ತಮ್ಮದೇ ಕತೆ ಅನಿಸಬಹುದು. 30 ರಿಂದ 40ರ ವಯೋಮಾನದವರಿಗೆ ನಾವು ಈ ಹಂತವನ್ನು ದಾಟಿ ಬಂದಿದ್ದೀವಿ ಅನಿಸಬಹುದು. ಎಲ್ಲಾ ವಯೋಮಾನದವರಿಗೂ ಕನೆಕ್ಟ್ ಆಗೋ ಕಥೆ.

- ಡಾ. ರಾಜ್‌ ಕುಟುಂಬದ ಕುಡಿ ಅಂದಾಗ ನನ್ನ ನಟನೆ ಬಗ್ಗೆ ಜನರಿಗೆ ನಿರೀಕ್ಷೆ ಹೆಚ್ಚೇ ಇರುತ್ತೆ. ಆದರೆ ಇದು ನನಗೆ ಪಾಸಿಟಿವ್‌ ಆಗಿದೆ. ಅವರ ನಿರೀಕ್ಷೆ ಮುಟ್ಟುವ ಭರವಸೆ ಇದೆ.

- ನಿನ್ನ ಸನಿಹಕೆ ಸಿನಿಮಾದ ಹಾಡುಗಳು ಲಕ್ಷಾಂತರ ವೀಕ್ಷಣೆ ದಾಖಲಿಸಿರೋದು ಬಹಳ ಖುಷಿ. ಹಾಡುಗಳನ್ನೇ ಈ ರೇಂಜ್‌ಗೆ ಇಷ್ಟಪಟ್ಟಜನ ಸಿನಿಮಾವನ್ನು ಖಂಡಿತಾ ಗೆಲ್ಲಿಸುತ್ತಾರೆ ಅನ್ನೋದು ನನ್ನ ಈ ಕ್ಷಣದ ಭರವಸೆ.

- ಲಾಕ್‌ಡೌನ್‌ನಲ್ಲಿ ಹಾಗೂ ನಂತರ ಒಂದಿಷ್ಟುಜನ ಬಂದು ಕತೆ ಹೇಳಿದ್ದಾರೆ. ಅವೆಲ್ಲ ಇನ್ನೂ ಮಾತುಕತೆಯ ಹಂತದಲ್ಲಿವೆ. ವಿಭಿನ್ನ ಪಾತ್ರಗಳಲ್ಲಿ ನಟಿಸೋ ನನ್ನ ಕನಸಿಗೆ ನೀರೆರೆಯುವಂಥಾ ಪಾತ್ರಗಳೂ ಬಂದಿವೆ ಅನ್ನೋದು ತೃಪ್ತಿ ಕೊಟ್ಟಸಂಗತಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ