
ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಅಭಿಮಾನಿಗಳನ್ನು ತಮ್ಮ ಮನೆಯವರಂತೆ ಪ್ರೀತಿಯಿಂದ ಮಾತನಾಡಿಸಿ, ಆರೈಕೆ ಮಾಡುತ್ತಾರೆ. ದೂರದಿಂದ ಪ್ರಯಾಣ ಮಾಡಿಕೊಂಡು ಯಾರೇ ಮಾತನಾಡಿಸಲು ಬಂದರೂ ಚಿನ್ನ, ರನ್ನ ಎಂದು ಕರೆದು ಪ್ರೀತಿ ತೋರಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಮುರಳಿಗಿರುವ ಅಭಿಮಾನಿಗಳ ಸಂಘ ಒಂದಾ? ಎರಡಾ?
ವಾರ ವಾರವೂ ಶ್ರೀಮುರಳಿ ಅಭಿಮಾನಿಗಳಿಗೆ ಗುಡ್ ಮೆಸೇಜ್ ನೀಡುತ್ತಾರೆ. ಸೋಮವಾರ ಹ್ಯಾಪಿ ವೀಕ್ ವಿಶ್ ಮಾಡುತ್ತಾ ಒಂದು ಒಳ್ಳೆ ಮೆಸೇಜ್ ನೀಡುತ್ತಾರೆ. 'ನಾವು ದ್ವೇಷ ಮಾಡುವುದು ಬೇಡ, ದ್ವೇಷ ಮಾಡುವುದರಿಂದ ನಮ್ಮ ಸಮಯ ವ್ಯರ್ಥ ಆಗುತ್ತದೆ. ಲೈಫ್ ತುಂಬಾ ಶಾರ್ಟ್ ಆಗಿದೆ, ಪ್ರೀತಿ ಹಂಚಿ,' ಎಂದು ಬರೆದುಕೊಂಡಿದ್ದಾರೆ.
ಉಮಾಪತಿ ನಿರ್ಮಾಣದ 'ಮದಗಜ' ಸಿನಿಮಾ ಚಿತ್ರೀಕರಣದಲ್ಲಿ ಶ್ರೀಮುರಳಿ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಅದ್ಧೂರಿ ಸೆಟ್‌ನಲ್ಲಿ ಇಂಟ್ರಡಕ್ಷನ್ ಸಾಂಗ್ ಶೂಟ್ ಮಾಡಿದ್ದಾರೆ. 2019ರಲ್ಲಿ 'ಭರಾಟೆ' ಸಿನಿಮಾ ರಿಲೀಸ್ ನಂತರ ಚಿತ್ರದ ಬಗ್ಗೆ ಯಾವ ಅಪ್ಡೇಟ್ ಇಲ್ಲದ ಕಾರಣ ಅಭಿಮಾನಿಗಳು ಮಾಹಿತಿಗಾಗಿ ಡಿಮ್ಯಾಂಡ್ ಮಾಡುತ್ತಿದ್ದಾರೆ. 'ಮದಗಜ' ನಂತರ 'ಭಗೀರ' ಸಿನಿಮಾ ಚಿತ್ರೀಕರಣ ಶುರು ಮಾಡಲಿದ್ದಾರೆ ರೋರಿಂಗ್ ಸ್ಟಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.