
ಪ್ರಿಯಾಂಕಾ ತಿಮ್ಮೇಶ್ ಏಕಕಾಲಕ್ಕೆ ನಟನೆಯಲ್ಲೂ, ಬಿಗ್ ಬಾಸ್‌ನಲ್ಲೂ ಗಮನ ಸೆಳೆದವರು. ಅವರಿನ್ನೂ ಬಿಗ್‌ಬಾಸ್ ಹ್ಯಾಂಗೋವರ್‌ನಿಂದ ಹೊರಬಂದಿಲ್ಲ. ಮನಸ್ಸಿನ ಮಾತುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
- ಲಾಕ್‌ಡೌನ್ ನಂತರ ಮತ್ತೆ ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್‌ಗೆ ಹೋದೆ. ಇಲ್ಲಿ ಕಳೆದ ಬಾರಿಗಿಂತ ಹೆಚ್ಚೆಚ್ಚು ಟಾಸ್ಕ್‌ಗಳಲ್ಲಿ ತೊಡಗಿಸಿಕೊಂಡೆ. ಈ ಬಾರಿಯ ನನ್ನ ಪರ್ಫಾರ್ಮೆನ್ಸ್‌ಅನ್ನು ಜನ ಹೆಚ್ಚು ಇಷ್ಟಪಟ್ಟರು. ತಮ್ಮ ಮನೆಯ ಹುಡುಗಿಯೇನೋ ಅನ್ನೋ ಹಾಗೆ ನನ್ನ ಬಳಿ ಮಾತಾಡ್ತಿದ್ದಾರೆ. ಬಹಳ ಖುಷಿ ಇದೆ.
- ಇನ್ನೂ ಬಿಗ್‌ಬಾಸ್ ಹ್ಯಾಂಗೋವರ್‌ನಿಂದ ಹೊರಬಂದಿಲ್ಲ. ರೆಸ್ಟ್‌ನಲ್ಲೆ ಇದ್ದೀನಿ. ಹೊಸ ಸಿನಿಮಾ ಒಪ್ಪಿಕೊಳ್ಳೋದಾಗಲೀ, ಹೊಸ ಕತೆ ಕೇಳೋದಾಗಲಿ ಮಾಡಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ನಡೆದುಕೊಂಡ ಚಂದ್ರಚೂಡ ಅವರ ನಡೆ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು. ಅದರ ಬಗ್ಗೆ ಅವರೇ ಮಾತನಾಡಬೇಕು.
- ಸದ್ಯಕ್ಕೀಗ ಫೋಟೋಶೂಟ್‌ಗೆ ರೆಡಿ ಆಗ್ತಿದ್ದೀನಿ.
- ಸದ್ಯಕ್ಕೆ ‘ಶುಗರ್‌ಲೆಸ್’, ‘ಅರ್ಜುನ್ ಗೌಡ’ ಸಿನಿಮಾ ರಿಲೀಸ್‌ಗೆ ರೆಡಿ ಇದೆ. ‘ಶುಗರ್‌ಲೆಸ್’ ಟೀಮ್ ಜೊತೆಗೇ ಇನ್ನೊಂದು ಸಿನಿಮಾ ಮಾತುಕತೆ ಹಂತದಲ್ಲಿದೆ. ಮಲಯಾಳಂ ರೀಮೇಕ್ ಸಿನಿಮಾವೂ ಮಾತುಕತೆ ಹಂತದಲ್ಲಿದೆ. ಯಾವುದೂ ಕನ್‌ಫಮ್‌ರ್ ಆಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.