ನಟಿ ಹಾಗು ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಅವರು ಸ್ಯಾಂಡಲ್‌ವುಡ್ ಸಿನಿಮಾ, ಸೀರಿಯಲ್ ಹಾಗೂ ಬಿಗ್ ಬಾಸ್ ಹೀಗೆ ಹಲವು ಪ್ಲಾಟ್‌ಫಾರಂಗಳಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ಎಲ್ಲ ಕಡೆ ಹಲವಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ನಟಿ ಸಂಗೀತಾ ಶೃಂಗೇರಿ (Sangeetha Sringeri) ಮಾತನಾಡಿರುವ ವೀಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ 'ನಂಗೆ ಈಗ ಸಿಕ್ಕಿರೋ ಪ್ರೀತಿನಾ ಡೈಜೆಸ್ಟೇ ಮಾಡ್ಕೊಳ್ಳೊಕೆ ಆಗ್ತಾ ಇಲ್ಲ ನಂಗೆ.. ಈಗಷ್ಟೇ ನೋಡಿದೆ, ಒಬ್ರು ನನ್ನ ಮೇಲಿನ ಅಭಿಮಾನದಿಂದ ಅವ್ರ ಕೈಮೇಲೆ ನನ್ನ ಮುಖದ ಟ್ಯಾಟೂ ಹಾಕಿಸಿಕೊಂಡಿದಾರೆ. ನನ್ನ ಬಾಡಿ ಮೇಲೆ ಒಂದೇ ಒಂದು ಟ್ಯಾಟೂ ಇಲ್ಲ. ಯಾಕಂದ್ರೆ, ನಂಗೆ ಅಂಥದ್ದೇನೂ ನನ್ ಟಚ್ ಮಾಡಿಲ್ಲ. ಆದ್ರೆ, ಒಬ್ರು ವ್ಯಕ್ತಿ ತಮ್ಮ ಸ್ಕಿನ್ ಮೇಲೆ, ತಮ್ಮ ಕೈ ಮೇಲೆ ನನ್ನ ಹೆಸರು, ನನ್ನ ಫೋಟೋ ಹಾಕಿಸಿಕೊಂಡಿದಾರೆ ಅಂದ್ರೆ ಅವ್ರ ಅಭಿಮಾನಕ್ಕೆ ನಾನು ಏನೆನ್ನಬೇಕು? ಈ ಥರ ಪ್ರೀತಿ ಯಾವಾಗ ಮಾತ್ರ ಸಿಗುತ್ತೆ ಅಂದ್ರೆ ಒಬ್ರು ನಿಮ್ ಜತೆ ಕನೆಕ್ಟ್ ಆದಾಗ ಮಾತ್ರ.
ಅಂದ್ರೆ ಅವ್ರು ನನ್ ಜೊತೆ ಟ್ರಾವೆಲ್ ಮಾಡಿದಾರೆ, ಬದುಕಿದಾರೆ ನನ್ ಜೊತೆ. ಇದು ತುಂಬಾ ಗ್ರೇಟ್ ವಿಚಾರವೇ ಹೌದು. ಆದ್ರೆ, ನಾನು ಏನ್ ಹೇಳೋಕೆ ಇಷ್ಟಪಡ್ತೀನಿ ಅಂದ್ರೆ, 'ನಾನು ಸಹಿ ಮಾಡುವಾಗ ಕೂಡ ಅದನ್ನೇ ಹೇಳ್ತೀನಿ, ನೀವು ನನ್ನ ಅಟೋಗ್ರಾಫ್ ಅಥವಾ ಫೋಟೋವನ್ನು ದಯವಿಟ್ಟು ಟ್ಯಾಟೂ ಹಾಕಿಸ್ಕೋಬೇಡಿ ಅಂತ. ಬಟ್ ಆ ಪ್ರೀತಿನಾ ನೀವು ನಂಗೆ ಹೇಳ್ತೀರ ಅಲ್ವಾ, ಅಥವಾ ಹಗ್ ಕೊಡ್ತೀರಲ್ವಾ ಆಗ ನಂಗೆ ತುಂಬಾ ಖುಷಿಯಾಗುತ್ತೆ. ಟ್ಯಾಟೂ ಮಾಡಿಸ್ಕೊಂಡು, ನಿಜವಾಗಿ ಹೇಳ್ಬೇಕು ಅಂದ್ರೆ ನಿಮ್ಗೆ ನೋವಾಗೋದು ನಂಗೆ ಇಷ್ಟವಿಲ್ಲ. ಪ್ಲೀಸ್ ಅದನ್ನೆಲ್ಲಾ ಮಾಡೋಕೆ ಹೋಗ್ಬೇಡಿ. ಹಾಕ್ಕೊಳ್ಲೇಬೇಕು ಅಂತಿದ್ರೆ ನಿಮ್ ತಂದೆ-ತಾಯಿದು ಟ್ಯಾಟೂ ಹಾಕಿಸ್ಕೊಳ್ಳಿ' ಅಂದಿದ್ದಾರೆ ನಟಿ ಸಂಗೀತಾ ಶೃಂಗೇರಿ.
ನಟಿ ಹಾಗು ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಅವರು ಸ್ಯಾಂಡಲ್‌ವುಡ್ ಸಿನಿಮಾ, ಸೀರಿಯಲ್ ಹಾಗೂ ಬಿಗ್ ಬಾಸ್ ಹೀಗೆ ಹಲವು ಪ್ಲಾಟ್‌ಫಾರಂಗಳಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ಎಲ್ಲ ಕಡೆ ಹಲವಾರು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಬಿಗ್ ಬಾಸ್‌ನಲ್ಲಿ ಕೂಡ ಆಲ್‌ಮೋಸ್ಟ್ ಆಲ್ ಫೈನಲ್‌ವರೆಗೆ ತಲುಪಿ ಬಳಿಕ ಎಲಿಮೆನೇಟ್ ಆಗಿದ್ದಾರೆ. ಸಂಗೀತಾ ಶೃಂಗೇರಿ ಅವರು ನಟ ರಕ್ಷಿತ್ ಶೆಟ್ಟಿ ಜತೆ 'ಚಾರ್ಲಿ' ಸಿನಿಮಾದಲ್ಲಿ ನಟಿಸಿದ್ದಾರೆ. ಪೌರಾಣಿಕ ಸೀರಿಯಲ್‌ನಲ್ಲಿ ಸತಿಯಾಗಿ, ಅಂದರೆ ಪಾರ್ವತಿಯಾಗಿ ನಟಿಸಿ ಕೂಡ ಗಮನಸೆಳೆದಿದ್ದಾರೆ.
ಅಂದಹಾಗೆ, ಸಂಗೀತಾ ಶೃಂಗೇರಿ ಹೆಸರಿನಲ್ಲೇ ತಿಳಿಯುವ ಹಾಗೆ ಮಲೆನಾಡು ಶೃಂಗೇರಿಯವರು. ಅವರು ಫಿಟ್‌ನೆಸ್ ಹಾಗೂ ಧ್ಯಾನದ ಬಗ್ಗೆ ಕೂಡ ಮೀಡಿಯಾ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ಕಡೆ ಮಾತನಾಡಿದ್ದಾರೆ. ಬಿಗ್ ಬಾಸ್ ಬಳಿಕ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಕಪ್ ಗೆಲ್ಲದಿರುವ ಬಗ್ಗೆ ಸಹಜವಾಗಿಯೇ ನಿರಾಸೆ ಇದ್ದರೂ ಕೂಡ ಅದನ್ನು ಡೈಜೆಸ್ಟ್ ಮಾಡಿಕೊಂಡು ಮುಂದೆ ಹೆಜ್ಜೆ ಹಾಕುತ್ತಿದ್ದಾರೆ ನಟಿ ಸಂಗೀತಾ ಶೃಂಗೇರಿ. ಒಟ್ಟಿನಲ್ಲಿ, ಜೀವನವನ್ನು ಬಂದ ಹಾಗೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಿರುವ ಸಂಗೀತಾ ಶೃಂಗೇರಿ, ಸದ್ಯ ಕೆರಿಯರ್‌ನಲ್ಲಿ ಸೂಕ್ತ ಅವಕಾಶದ ಹುಡುಕಾಟದಲ್ಲಿದ್ದಾರೆ ಎನ್ನಬಹುದು.