
ಕನ್ನಡದ ನಟಿ ಅದಿತಿ ಪ್ರಭುದೇವ (Aditi Prabhudeva) ಆಗಾಗ ಯೂಟ್ಯೂಬ್ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮಗಳ ಆಕ್ಟಿವಿಟಿಗಳಲ್ಲಿ ಭಾಗಿಯಾಗುತ್ತಾರೆ. ಹೀಗೆ ರಾಪಿಡ್ ರಶ್ಮಿ ಇಂಟರ್‌ವ್ಯೂದಲ್ಲಿ ಕಾಣಿಸಿಕೊಂಡಿರುವ ನಟಿ ಆದಿತಿ ಪ್ರಭುದೇವ, 'ಮೋಟಿವೇಶನಲ್ ಸ್ಪೀಚ್' ಮಾಡುತ್ತ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ತಮ್ಮ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬಂದಿದ್ದ ಕಾಮೆಂಟ್‌ಗಳ ಬಗ್ಗೆಯೂ ಮಾತನಾಡಿದ್ದಾರೆ.
ಆದಿತಿ ಪ್ರಭುದೇವ 'ನಾನು ಮಗಳು ಹುಟ್ಟಿದ ನಾಲ್ಕೇ ತಿಂಗಳಿಗೆ ಕೆಲಸಕ್ಕೆ ಬಂದೆ. ಅದಕ್ಕಾಗಿ ಬಹಳಷ್ಟು ಜನರು ಸೋಷಿಯಲ್ ಮೀಡಿಯಾಗಳಲ್ಲಿ ನಟನಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಆದರೆ, ಗಾರೆ ಕೆಲಸ, ಬಂಡೆ ಕುಟ್ಟುವ ಕೆಲಸ, ರಸ್ತೆ ಮಾಡುವ ಕೆಲಸ ಹೀಗೆ ಶ್ರಮವಹಿಸಿ ಮಾಡುವ ಅದೆಷ್ಟೂ ಕಾಯ ಮಾಡುವ ಹೆಣ್ಣುಮಕ್ಕಳು ತಮ್ಮ ಎರಡು ತಿಂಗಳ ಮಗುವನ್ನು ಮರಕ್ಕೆ ಜೋಳಿ ಮಾಡಿ ಕಟ್ಟಿ, ಟೊಂಕ ಕಟ್ಟಿ ಕೆಲಸ ಮಾಡುತ್ತಾರೆ. ಅವರ ಮುಂದೆ ನಾನು ಏನೂ ಅಲ್ಲ' ಎಂದಿದ್ದಾರೆ ನಟ ಅದಿತಿ ಪ್ರಭುದೇವ.
ಹೀರೋ ಮಕ್ಕಳ ವಿರುದ್ಧ ವಿಲನ್ ಮಕ್ಕಳು ತೊಡೆ ತಟ್ಟಿದ್ರಾ? ದರ್ಶನ್ 'ನವಗ್ರಹ' ಬಂದಿದ್ದು ಹೀಗಾ?!
ಜೊತೆಗೆ, 'ನನ್ ತಂದೆಗೆ, ತಾಯಿಗೆ ನಾನು ತುಂಬಾ ಥ್ಯಾಂಕ್ಸ್ ಹೇಳ್ತೀನಿ.. ಯಾಕಂದ್ರೆ, ಅವ್ರು ನಮಗೆ ಆಸ್ತಿ ಮಾಡ್ಲಿಲ್ಲ, ನಮ್ಮನ್ನೇ ಆಸ್ತಿ ತರ ಬೆಳೆಸಿಬಿಟ್ರು.. ಒಂದು ರೂಪಾಯಿ ಇದ್ರೂ ನೂರು ರೂಪಾಯಿ ಇದ್ರೂ ಹೆಂಗೆ ಬದುಕ್ಬೇಕು ಅಂತ ಗೊತ್ತು. ಕಷ್ಟ ಬಂದಾಗ ಹೇಗೆ ಸಹಿಸ್ಕೋಬೇಕು, ಏನ್ ಮಾಡ್ಬೇಕು ಅಂತ ಗೊತ್ತು. ಅದೇರೀತಿ, ಸುಖ ಬಂದಾಗ ಅದನ್ನು ತಲೆಗೆ ಏರಿಸಿಕೊಳ್ಳದೇ ಹೇಗೆ ನಾರ್ಮಲ್ ಆಗಿ ಜೀವನ ನಡೆಸ್ಬೇಕು ಅಂತ ಗೊತ್ತು..' ಎಂದಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಧೈರ್ಯಂ, ರಂಗನಾಯಕಿ, ತೋತಾಪುರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಆದಿತಿ ಪ್ರಭುದೇವ, ಮದುವೆ ಬಳಕ ಸಿನಿಮಾರಂಗದಿಂದ ಕೊಂಚ ದೂರ ಇದ್ದಾರೆ. ಯಶಸ್ ಮದುವೆಯಾಗಿ ಇದೀಗ ಮುದ್ದಿನ ಮಗುವೊಂದಕ್ಕೆ ಅಮ್ಮನಾಗಿರುವ ಅದಿತಿ ಪ್ರಭುದೇವ, ಜೀವನದಲ್ಲಿ ಬಹಳಷ್ಟು ಅನುಭವಸ್ಥೆಯಂತೆ ಮಾತನಾಡುತ್ತಾರೆ. ಅವರಿಗೆ ಕನ್ನಡ ಚಿತ್ರರಂಗದ ಸಿನಿಪ್ರೇಕ್ಷರಲ್ಲಿ ಸಾಕಷ್ಟು ಅಭಿಮಾನಿಗಳೂ ಸಹ ಇದ್ದಾರೆ. ಈಗಂತೂ ಮಗುವಿನ ತಾಯಿಯಾಗಿ ಹೊಸ ಅನುಭವದೊಂದಿಗೆ ಮಾತನಾಡುತ್ತಾರೆ.
ಕೆಜಿಎಫ್ ಹೆಸರು ಹೇಳಿ ಪ್ರಚಾರ ಮಾಡ್ತಿದ್ಯಾ ಪುಷ್ಪ-2 ತಂಡ: ಯಶ್ ಮೇಲೆ ಹೊಟ್ಟೆ ಉರಿನಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.