
ಡಾ. ರಾಜಕುಮಾರ್ ಅವರು ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಗಾಂಧಿನಗರ'. ಹಲವು ವರ್ಷಗಳ ಬಳಿಕ ಅದೇ ಹೆಸರಿನ (Gandhi Nagara) ಚಿತ್ರ ಆರಂಭವಾಗಿದೆ. ಇತ್ತೀಚಿಗೆ ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಇಬ್ಬನಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಕನ್ನಡ ಚಿತ್ರರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ಹಾಗೂ ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್ ನ ರೂವಾರಿಗಳೂ ಆಗಿರುವ ಎಸ್. ಹೆಚ್ ನಾಗೇಶ್ ರೈತ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈ ಬಗ್ಗೆ ನಿರ್ದೇಶಕರಾದ ನಾಗೇಶ್ ರೈತ ಅವರು 'ಇದೇ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ಕಲಿತಿರುವ ಬಾಲಾಜಿ ರಾವ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಗಳೇ ಈ ಚಿತ್ರದ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರರಂಗದ ಕಾರ್ಯಕ್ಷೇತ್ರವಾಗಿರುವ ಗಾಂಧಿನಗರಕ್ಕೂ ನಮ್ಮ ಚಿತ್ರ 'ಗಾಂಧಿನಗರ'ಕ್ಕೂ ಯಾವುದೇ ಸಂಬಂಧವಿಲ್ಲ. ಇದು ನಿರುದ್ಯೋಗ ಸಮಸ್ಯೆಯ ಸುತ್ತ ಹೆಣೆದಿರುವ ಕಥಾಹಂದರ ಹೊಂದಿರುವ ಚಿತ್ರ.
ಲಾಕ್‌ಡೌನ್ ವೇಳೆಯಲ್ಲೇ ವಕ್ಕರಿಸಿದ ಕ್ಯಾನ್ಸರ್, ಸೈಕಲ್ ತುಳಿದಿದ್ದೇಕೆ ನಟ ಸಂಜಯ್ ದತ್..?
ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾತ್ಮ ಗಾಂಧಿ ಅವರ ಹೆಸರಿನ 'ಗಾಂಧಿನಗರ' ಎಂಬ ಊರಿನಲ್ಲಿ ವಾಸವಿರುವ ವಿದ್ಯಾವಂತರು ಕೆಲಸ ಸಿಗಿದೆ ನಿರುದ್ಯೋಗಿಗಳಾಗಿದ್ದಾಗ ಏನೆಲ್ಲಾ ಆಗುತ್ತದೆ? ಎಂಬುದೆ ಕಥಾ ಸಾರಾಂಶ. 'ಇಲ್ಲಿ ಯಾರು ಗಾಂಧಿಗಳಿಲ್ಲ'ಎಂಬ ಅಡಿಬರಹ ಈ ಚಿತ್ರಕ್ಕಿದೆ. ನಾನು ಕೆಲವು ವರ್ಷಗಳಿಂದ ಅಭಿನಯ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಹಲವು ವಿಭಾಗಗಳ ಬಗ್ಗೆ ತರಭೇತಿ ನೀಡುವ ಎನ್ ಆರ್ ಫಿಲಂ ಇನ್ಸ್ಟಿಟ್ಯೂಟ್ ಅನ್ನು ನಡೆಸುತ್ತಿದ್ದೇನೆ. ಹಲವಾರು ವಿದ್ಯಾರ್ಥಿಗಳು ಇಲ್ಲಿ ಕಲಿತಿದ್ದಾರೆ.
ನಾವಿಬ್ಬರೂ ಒಟ್ಟಿಗೇ ಇರಬೇಕೆಂದು ಪೋಷಕರನ್ನೂ ದೂರ ಮಾಡಿದ್ವಿ; ಕಾಜೋಲ್ ದೇವಗನ್
ಈ ಚಿತ್ರದಲ್ಲಿ ಸಂಪೂರ್ಣವಾಗಿ ನಮ್ಮ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಗಳೆ ಅಭಿನಯಿಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳು ಹಾಗೂ ಮೂರು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ ಎಂದು ನಿರ್ದೇಶಕ ಎಸ್ ಹೆಚ್ ನಾಗೇಶ್ ರೈತ ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.