ಮೂರು ತಿಂಗ್ಳು ಮುಂಚೆಯೇ ಶುರುವಾಯ್ತು 'ಕಿಚ್ಚೋತ್ಸವ'....!

Published : May 24, 2020, 09:41 PM IST
ಮೂರು ತಿಂಗ್ಳು ಮುಂಚೆಯೇ ಶುರುವಾಯ್ತು 'ಕಿಚ್ಚೋತ್ಸವ'....!

ಸಾರಾಂಶ

ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಕಿಚ್ಚ ಸುದೀಪ್​  ಸೆ. 2 ರಂದು ಸುದೀಪ್​ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೀಗ ಅವರ ಹುಟ್ಟು ಹಬ್ಬಕ್ಕೆ 100 ದಿನಗಳು ಬಾಕಿ ಇರುವಾಗ ಅಭಿಮಾನಿಗಳು ಸಂಭ್ರಮದಲ್ಲಿ ತೊಡಗಿದ್ದಾರೆ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ‘ಕಿಚ್ಚೋತ್ಸವ‘ ಶುರುವಾಗಿದೆ,

ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಬರ್ತ್ ಡೇ. ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇನ್ನೂ ನೂರು ದಿನಗಳು ಬಾಕಿ ಇವೆ. ಆಗಲೇ ಬರ್ತ್ ಡೇ ಕಿಚ್ಚೊತ್ಸವ ಸಂಭ್ರಮ ಎಲ್ಲೆಡೆ ಜೋರಾಗಿದೆ.

ಹೌದು...ಅಭಿಮಾನಿಗಳು ಅಭಿನಯ ಚಕ್ರವರ್ತಿಯ 47 ನೇ ಜನ್ಮ ದಿನ ಆಚರಣೆಯ್ನು ಅದ್ಧೂರಿಯಾಗಿ ಆಚರಿಸಲು ಭರ್ಜರಿ ಪ್ಲಾನ್​ ಮಾಡಿಕೊಂಡಿದ್ದಾರೆ. ಇದರ ಪೂರಕವೆಂಬಂತೆ ಟ್ರಲರ್ ರೀತಿಯಲ್ಲಿ ಶನಿವಾರದಂದು ಕಿಚ್ಚೋತ್ಸವ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. 

16 ವರ್ಷದ ಮಗಳಿಗೆ ಕಿಚ್ಚ ಸುದೀಪ್‌ ಕೊಟ್ಟ ಬಂಪರ್ ಗಿಫ್ಟ್!

‘ಕಿಚ್ಚೋತ್ಸವ 2020‘ ಬಿಡುಗಡೆ

ನಿರೂಪ್​ ಭಂಡಾರಿ ಅವರು ನಟ ಸುದೀಪ್​​ ಜನ್ಮ ದಿನದ ಅಂಗವಾಗಿ ವಿನ್ಯಾಸಗೊಳಿಸಿರುವ ‘ಕಿಚ್ಚೋತ್ಸವ 2020‘ ವಿಶೇಷ ಸಿಡಿಪಿಯನ್ನು ಮತ್ತು #100daysForKicchotsava ​ ಹ್ಯಾಶ್​ ಟ್ಯಾಗ್​ ಅನ್ನು ಬಿಡುಗಡೆ ಮಾಡಿದರು.

ಕಿಚ್ಚೋತ್ಸವಕ್ಕೆ ಚಾಲನೆ ದೊರೆತ ಕೆಲವೇ ಗಂಟೆಗಳಲ್ಲಿ #100daysForKicchotsava ಎಂಬ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಒಂದು ಮಿಲಿಯನ್​ಗೂ ಅಧಿಕ ಟ್ವೀಟ್​ಗಳನ್ನ ಮಾಡಲಾಗಿದೆ.  ಅಲ್ಲದೇ ಟ್ವಿಟ್ಟರ್​​ನಲ್ಲಿ #100daysForKicchotsava ಹ್ಯಾಶ್​ ಟ್ಯಾಗ್​ ಟ್ರೆಂಡಿಂಗ್​ನಲ್ಲಿದೆ.

ನಮ್ಮ ಕಡೆಯಿಂದಲೂ ಅಡ್ವಾನ್ಸ್ ಹ್ಯಾಪಿ  ಬರ್ತ್ ಡೇ ಕಿಚ್ಚ ಸುದೀಪ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ