ಅಬ್ಬಾ! ಧ್ರುವ ಸರ್ಜಾ ಯಾವುದಕ್ಕೆ ಹೆದರುತ್ತಾರೆ ಎಂದು ರಿವೀಲ್‌ ಮಾಡಿದ ಹರಿಪ್ರಿಯಾ!

Suvarna News   | Asianet News
Published : May 24, 2020, 01:44 PM IST
ಅಬ್ಬಾ! ಧ್ರುವ ಸರ್ಜಾ ಯಾವುದಕ್ಕೆ ಹೆದರುತ್ತಾರೆ ಎಂದು ರಿವೀಲ್‌ ಮಾಡಿದ ಹರಿಪ್ರಿಯಾ!

ಸಾರಾಂಶ

ಹರಿಪ್ರಿಯಾ ಬರೆಯುತ್ತಿರುವ 'ಬೇಬ್‌ನೋಸ್‌' ಬ್ಲಾಗ್‌ನಲ್ಲಿ ನಟ ಧ್ರುವ ಸರ್ಜಾ ಯಾವುದಕ್ಕೆ ಹೆದರುತ್ತಾರೆಂದು ರಿವೀಲ್‌ ಮಾಡಿದ್ದಾರೆ.....

'ಖರಾಬು ಬಾಸು ಖರಾಬು ಸುಮ್ನೆ ಓಡೋಗು' ಎಂದು ಹೇಳುತ್ತಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಸಿನಿಮಾ ಪೊಗರು. ಕನ್ನಡ ಚಿತ್ರರಂಗದ ಆಕ್ಷನ್‌ ಪ್ರಿನ್ಸ್  ಧ್ರುವ ಸರ್ಜಾ ಮಾಸ್‌ ಲುಕ್‌ಗೆ ಅಭಿಮಾನಿಗಳು ದಿನೇ ದಿನೇ  ಫಿದಾ ಆಗುತ್ತಿದ್ದಾರೆ ಅಷ್ಟೆ ಅಲ್ಲದೆ 'ಖರಾಬು' ಸಾಂಗ್ ಹಿಸ್ಟರಿ ಕ್ರಿಯೇಟ್‌ ಮಾಡುತ್ತಿದೆ.

ಬಾಲಿವುಡ್‌ನಲ್ಲಿಯೂ 'ಖರಾಬು' ಹವಾ; ಕ್ರಿಕೆಟ್ ಪ್ಲೇಯರ್‌ಗಳಿಗೂ ಇಷ್ಟವಾಯ್ತು!

ಸಿಕ್ಕಾಪಟ್ಟೆ ವರ್ಕೌಟ್‌ ಮಾಡಿ ಬಾಡಿ ಮೇನ್ಟೆನ್‌ ಮಾಡಿರುವ ಧ್ರುವ ಸರ್ಜಾ ಅಂಜನೇಯನ ಭಕ್ತ ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ. ಏನೇ ಇದ್ದರೂ ನೇರವಾಗಿ ಮಾತನಾಡುತ್ತಾ ಅಭಿಪ್ರಾಯ ವ್ಯಕ್ತ ಪಡಿಸುವ ವ್ಯಕ್ತಿತ್ವದವರು. ಆದರೆ ಧ್ರುವ ಸರ್ಜಾ ಬಗ್ಗೆ ಯಾರಿಗೂ ತಿಳಿದಿರದ ಸಂಗತಿವೊಂದನ್ನು ನಟಿ ಹರಿಪ್ರಿಯಾ ರಿವೀಲ್‌ ಮಾಡಿದ್ದಾರೆ....

ಲಾಕ್‌ಡೌನ್‌ ಪ್ರಾರಂಭದಲ್ಲಿ ನಟಿ ಹರಿಪ್ರಿಯಾ 'ಬೇಬ್‌ನೋಸ್‌' ಎಂದ ಬ್ಲಾಗ್  ಆರಂಭಿಸಿದರು. ಇದರಲ್ಲಿ ಅವರ ಜೀವನದಲ್ಲಾದ ಅನೇಕ ಸಂಗತಿಗಳನ್ನು ಬರೆದು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಒಂದರಲ್ಲಿ ನಟ ಧ್ರವ ಸರ್ಜಾ ಅವರಿಗೆ ಇರುವ ಒಂದು ಫಿಯರ್‌ ಬಗ್ಗೆಯೂ ಹೇಳಿದ್ದಾರೆ. 

ಹೊಸ ದಾಖಲೆ ಬರೆದ Action Prince ಧ್ರುವ ಸರ್ಜಾ; ಇದು ಪೊಗರು ಕತೆ!

ನಟಿ ಹರಿಪ್ರಿಯಾಗೆ ಜಿರಳೆ ಕಂಡ್ರೆ ತುಂಬಾ ಭಯವಂತೆ ಹಾಗೆ ಧ್ರುವ ಸರ್ಜಾಗೆ ಹೈಟ್‌ ಅಂದ್ರೆ ಭಯವಂತೆ. ಹೌದು! ಆಕ್ಷನ್ ಪ್ರೀನ್ಸ್‌ಗೆ ಎತ್ತರದ ಪ್ರದೇಶ/ಸ್ಥಳಗಳು ಅಂದ್ರೆ ತುಂಬಾನೇ ಭಯವಂತೆ. ಶೂಟಿಂಗ್ ಮಾಡುವಾಗ ಸಹ ಎತ್ತರ ಇರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲವಂತೆ, ತಿಳಿಯುತ್ತಿದ್ದಂತೆ ಹಿಂದೇಟು ಹಾಕುತ್ತಾರೆ. 

'ಭರ್ಜರಿ' ಚಿತ್ರದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ಮಿಂಚಿದ್ದ  ಹರಿಪ್ರಿಯಾ ಸ್ಲೊವೇನಿಯಾದಲ್ಲಿ ಶೂಟಿಂಗ್ ಮಾಡುವಾಗ  ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲಿ ಒಂದು ಕೋಟೆಯ ಮೇಲೆ ನಿಂತುಕೊಂಡು ಶಾಟ್‌ ತೆಗೆಯಬೇಕಿತ್ತು, ಹರಿಪ್ರಿಯಾ ಸಿದ್ಧರಾಗಿ ನಿಂತುಕೊಂಡರಂತೆ ಆದರೆ ಧ್ರುವ ಭಯಪಟ್ಟುಕೊಂಡಿದ್ದನ್ನು  ನೋಡಿ ನಕ್ಕಿದ್ದಾರೆ. 

ಧ್ರುವಸರ್ಜಾ- ಪ್ರೇರಣಾ ವೆಡ್ಡಿಂಗ್‌ ಸ್ಪೆಶಲ್‌ ವಿಡಿಯೋ; ಹೇಗಿದೆ ನೋಡಿ

ಇತ್ತೀಚಿಗೆ ಧ್ರುವ ಜೊತೆ ಫೋನ್‌ನಲ್ಲಿ ಮಾತನಾಡುತ್ತಾ  ಹರಿಪ್ರಿಯಾ ರೇಗಿಸುತ್ತದ್ದರಂತೆ ಆಗ ಧ್ರುವ ನಾನು ಬಾಡಿ ಬಿಲ್ಡಿಂಗ್ ಮಾಡಿದ್ದೀನಿ ಯಾವುದಕ್ಕೂ ಹೆದರುವುದಿಲ್ಲ ಎಂದರೆ ಹರಿಪ್ರಿಯಾ ಹಾಗಿದ್ದರೆ ಪತ್ನಿ ಪ್ರೇರಣಾಳನ್ನು ಕರೆದುಕೊಂಡು ಬಾ ನಂದಿ ಬೆಟ್ಟಕ್ಕೆ ಹೋಗೋಣ ಎಂದು ಹೇಳಿದ್ದಕ್ಕೆ  ಅಯ್ಯೋ ಆಗಲ್ಲಪ್ಪಾ ಎಂದರಂತೆ....

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ