ಲೂನಾದಲ್ಲಿ ಓಡಾಡ್ತಾ ಇದ್ದವ್ನ ಲ್ಯಾಂಬೋರ್ಗಿನಿ ಹತ್ತಿಸಿದ್ರಿ; ಮಂಡ್ಯ ಫ್ಯಾನ್ಸ್‌ ರಿಯಾಕ್ಷನ್ ನೋಡಿ!

By Shriram Bhat  |  First Published Dec 24, 2023, 2:44 PM IST

ಕಾಟೇರ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದು, ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ ನಟಿಸಿದ್ದಾರೆ.


ನಟ ದರ್ಶನ್ ನಟನೆಯ 'ಕಾಟೇರ' ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ವಾರ ಹುಬ್ಬಳ್ಳಿಯಲ್ಲಿ ಟ್ರೈಲರ್ ರಿಲೀಸ್ ಮಾಡಿ ಅಬ್ಬರಿಸಿದ್ದ ಟೀಮ್ ನಿನ್ನೆ ಮಂಡ್ಯದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಪ್ರೀ-ರಿಲೀಸ್ ಈವೆಂಟ್ ನಡೆಸಿತು. ಇದೇ ತಿಂಗಳು 29ರಂದು (29 ಡಿಸೆಂಬರ್ 2023) ಬಿಡುಗಡೆ ಆಗಲಿರುವ ಕಾಟೇರ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಮನೆ ಮಾಡಿದೆ. ಈ ಮೊದಲು ದರ್ಶನ್ ನಾಯಕತ್ವದಲ್ಲಿ ತೆರೆಗೆ ಬಂದಿದ್ದ ಕ್ರಾಂತಿ ಅಂದುಕೊಂಡಷ್ಟು ಸಕ್ಸಸ್ ಆಗಿರಲಿಲ್ಲ. ಈ ಕಾರಣವೂ ಸೇರಿದಂತೆ ಹಲವು ಕಾರಣಗಳಿಂದ ಕಾಟೇರ ನಿರೀಕ್ಷೆ ಮಿತಿಮೀರಿದೆ. 

ನಿನ್ನೆ ಮಂಡ್ಯದಲ್ಲಿ ದರ್ಶನ್ ನೋಡಲು ಜನ ಕಿಕ್ಕಿರಿದು ಸೇರಿದ್ದರು. ಕಾಟೇರ ಬಿಡುಗಡೆಗೂ ಮೊದಲು ಪ್ರಮೋಶನ್ ಉದ್ದೇಶಕ್ಕೆ ಮಂಡ್ಯದಲ್ಲಿ ಈವೆಂಟ್ ಆಯೋಜಿಸಲಾಗಿತ್ತು, ಈ ವೇಳೆ ಅಲ್ಲಿ ವೇದಿಕೆ ಮೇಲೆ ಬಿಳಿ ಪಂಚೆ ಹಾಗೂ ಬಣ್ಣಬಣ್ಣದ ಅಂಗಿ ತೊಟ್ಟಿದ್ದ ಹಲವು ರೈತರು ಬಂದು ಡಾನ್ಸ್‌ ಮಾಡಿದರು, ಈ ವೇಳೆ ನಟ ದರ್ಶನ್ ಬಗ್ಗೆ ಜೈ ಘೋಷ ಮೊಳಗಿತು. ಸಾವಿರಾರು ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ಆರಾಧ್ಯ ದೈವವನ್ನು ಕಣ್ತುಂಬಿಕೊಂಡು ಖುಷಿ ಪಟ್ಟರು. 

Tap to resize

Latest Videos

ಸಲಾರ್ ಮುಂದೆ ಮಂಡಿಯೂರಿದ ಶಾರುಖ್ ಖಾನ್ ಡಂಕಿ; ಸೌತ್ ಸಿನಿಮಾ ಹವಾ ನೋಡಿ ಕಂಗೆಟ್ಟ ಬಾಲಿವುಡ್!

ಮಂಡ್ಯ ಈವೆಂಟ್‌ನಲ್ಲಿ ಮಾತನಾಡಿದ ನಟ ದರ್ಶನ್ 'ಲೂನಾದಲ್ಲಿ ಓಡಾಡ್ತಾ ಇದ್ದವ್ನ ಲ್ಯಾಂಬೋರ್ಗಿನಿ ಮೇಲೆ ಓಡಾಡೋ ಹಾಗೆ ಮಾಡಿದೀರಾ. ನಿಮ್ ಋಣಾನಾ ನಾನು ಈ ಜನ್ಮದಲ್ಲಿ ತೀರಿಸೋದಕ್ಕೆ ಆಗುತ್ತಾ? ಎಲ್ಲರಿಗೂ ನಮಸ್ಕಾರ, ಧನ್ಯವಾದಗಳು' ಎಂದು ಭಾವನಾತ್ಮಕವಾಗಿ ಹೇಳಿದರು. ನೆರೆದಿದ್ದ ಸಾವಿರಾರು ಅಭಿಮಾನಿಗಳು ನಟ ದರ್ಶನ್ ಮಾತು ಕೇಳಿ ಕಣ್ಣೀರಿಟ್ಟರು, ಆನಂದಭಾಷ್ಪ ಹರಿಸಿದರು. ಒಟ್ಟಿನಲ್ಲಿ, ಕಾಟೇರ ಈವೆಂಟ್ ಅದ್ದೂರಿಯಾಗಿ ಆಯೋಜನೆಗೊಂಡು ಸಂಭ್ರಮದಿಂದ ಮುಗಿಯಿತು.

ಮುಂಬೈನಲ್ಲಿ ಹೊಟೆಲ್ ವೇಟರ್ ಆಗಿದ್ದವನ ಮಗ ಬಾಲಿವುಡ್ ನಿರ್ಮಾಪಕ, ಸ್ಟಾರ್ ಡೈರೆಕ್ಟರ್! 

ಅಂದಹಾಗೆ, ಕಾಟೇರ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದು, ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ ನಟಿಸಿದ್ದಾರೆ. ಆರಾಧಾನಾಗೆ ಇದು ಮೊದಲ ಚಿತ್ರವಾಗಿದ್ದು, ಭಾರೀ ಸಂಭ್ರಮ ಮನೆಮಾಡಿದೆ. ಬಹುಭಾಷಾ ನಟ ಜಗಪತಿ ಬಾಬು ಈ ಚಿತ್ರದಲ್ಲಿ ದೇವರಾಯ ಹೆಸರಿನ ವಿಲನ್ ರೋಲ್‌ನಲ್ಲಿ ನಟಿಸಿದ್ದಾರೆ. 

ವಿನಯ್ ಗೌಡ ಬಾಲ ಕಟ್‌; ತಕ್ಕ ಶಾಸ್ತಿ ಆಯ್ತು, ವಿನಯ್ ಕಥೆ ಮುಗಿತು ಅಂತಿದಾರಲ್ಲ ನೆಟ್ಟಿಗರು!

click me!