ಇತ್ತೀಚೆಗೆ ನಟ ದರ್ಶನ್ ದುಬೈ ಪ್ರವಾಸಕ್ಕೆ ಹೋಗಿದ್ರು. ಅಲ್ಲಿ ಪ್ರವಾಸದ ವೇಳೆ ವಿನೀಶ್ ತಂದೆ ಜತೆ ಟೈಮ್ ಸ್ಪೆಂಡ್ ಮಾಡ್ತಾ ಇದ್ರು.. ಈ ಸಮಯದಲ್ಲಿ ವಿನೀಶ್ ಕುದುರೆ ಸವಾರಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಚಕ್ಕಡಿ ಗಾಡಿ ಏರಿ ವಿನೀಶ್...
ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)ಮಗ ವಿನೀಶ್ (Vineesh)ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ (Social Media)ವೈರಲ್ ಆಗಿದೆ. ದರ್ಶನ್ ಮಗ ವಿನೀಶ್ ಭವಿಷ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುವ ಸೂಚನೆ ಇದು ಎನ್ನಬಹುದಾ ಎಂದು ವೀಡಿಯೋ ನೋಡಿದ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಈ ಮೊದಲೊಮ್ಮೆ ದರ್ಶನ್ ಅವರಿಗೆ ಮಗನ ಸಿನಿಮಾ ಎಂಟ್ರಿ ಕುರಿತು ಕೇಳಿದ್ದ ಪ್ರಶ್ನೆಗೆ 'ಮೊದಲು ಮಣ್ಣು ಹೊರುವುದು ಕಲಿಯಲಿ; ಆಮೇಲೆ ನೋಡೋಣ' ಎಂದು ದರ್ಶನ್ ತನ್ನ ಮಗನ ಸಿನಿಮಾ ಎಂಟ್ರಿ ಕುರಿತು ಹೇಳಿದ್ದರು.
ಇತ್ತೀಚೆಗೆ ನಟ ದರ್ಶನ್ ದುಬೈ ಪ್ರವಾಸಕ್ಕೆ ಹೋಗಿದ್ರು. ಅಲ್ಲಿ ಪ್ರವಾಸದ ವೇಳೆ ವಿನೀಶ್ ತಂದೆ ಜತೆ ಟೈಮ್ ಸ್ಪೆಂಡ್ ಮಾಡ್ತಾ ಇದ್ರು.. ಈ ಸಮಯದಲ್ಲಿ ವಿನೀಶ್ ಕುದುರೆ ಸವಾರಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಚಕ್ಕಡಿ ಗಾಡಿ ಏರಿ ವಿನೀಶ್ ತಮ್ಮ ತಂದೆ ದರ್ಶನ್ ಜೊತೆ 'ನೈಟ್ ಔಟ್' ಕೂಡ ಹೋಗಿದ್ದ ವಿಡಿಯೋಗಳು ಕೂಡ ಸಖತ್ ಸೌಂಡ್ ಮಾಡಿದ್ದವು. ಮರುಭೂಮಿಯಲ್ಲಿ ವಿನೀಶ್ ಕುದುರೆ ಸವಾರಿ ಮಾಡಿರುವ ವಿಡಿಯೋವನ್ನು ನಟ ದರ್ಶನ್ ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.
ಕೊನೆಗೂ ಶ್ರೀದೇವಿ ಸಾವಿನ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್; ದುಬೈ ಬಾತ್‌ಟಬ್‌ನಲ್ಲೇ ಬೋರಲಾಗಿ ಬಿದ್ದಿದ್ದು ಯಾಕೆ?
ನಟ ದರ್ಶನ್ ಅವರಿಗೆ ಪ್ರಾಣಿಗಳು, ಪಕ್ಷಿಗಳು ಹಾಗು ಪರಿಸರದ ಬಗ್ಗೆ ಇರುವ ಕಾಳಜಿ ಎಲ್ಲರಿಗೂ ಗೊತ್ತು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಇಡಿ ಅಂತ ದರ್ಶನ್ ಒಮ್ಮೆ ಹೇಳಿದ್ದ ಮಾತಿಗೆ ಅವರ ಸಾವಿರಾರು ಜನ ಅಭಿಮಾನಿಗಳು ಆ ಕೆಲಸವನ್ನು ಇಂದಿಗೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ನಟ ದರ್ಶನ್ ಅವರಿಗೆ ಕುದುರೆ ಅಂದ್ರೆ ಬಹಳ ಅಚ್ಚುಮೆಚ್ಚು, ಜೊತೆಗೆ ಅವರು ಅದ್ಭುತ ಕುದುರೆ ಸವಾರರು ಹೌದು.
ಸಾಯುವ ಮೊದಲು ಅದೆಂಥಾ ಲೈಪ್ ಲೆಸನ್ ಟಿಪ್ಸ್ ಕೊಟ್ಟು ಹೋಗಿದ್ದಾರೆ ನೋಡಿ ಸುಶಾಂತ್ ಸಿಂಗ್ ರಜಪೂತ್!
ತಮ್ಮ ಫಾರ್ಮ್‌ಹೌಸ್‌ನಲ್ಲಿ ಕುದುರೆಗಳನ್ನ ಸಾಕುತ್ತಿರುವ ದರ್ಶನ್, ಆಗಾಗ ಅವುಗಳ ಜತೆ ಒಡನಾಡುತ್ತಾರೆ. ಈಗ ಅಂಥ ದರ್ಶನ್ ಮಗ ತಂದೆಯ ಹಾಗೆಯೇ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಂದರೆ, ದರ್ಶನ್ ಅವರು ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಟೈಮ್ ಬಂತಾ ಎಂದು ಜನರು ಮಾತಾಡ್ತಾ ಇದಾರೆ. ಈಗಾಗಲೇ ವಿನೀಶ್ ದರ್ಶನ್ ನಟನೆಯ 'ಮಿ ಐರಾವತ' ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಹಾಗೂ 'ಯಜಮಾನ'ದಲ್ಲಿ ಕೂಡ ನಟಸಿದ್ದಾರೆ.
ಆರತಿಗೇಕೆ ಪ್ರಚಾರವೆಂದರೆ ಅಲರ್ಜಿ; ಅಮೆರಿಕಾದಿಂದ ಗುಟ್ಟಾಗಿ ಪದೇಪದೇ ಬರುವುದೇಕೆ, ಮತ್ತೆ ಹೋಗುವುದೇಕೆ?
ಈಗ ಕುದುರೆ ಸವಾರಿ, ಮುಂದೆ ಬೇರೆ ಬೇರೆ ರೀತಿಯ ತರಬೇತಿಕೊಟ್ಟು ಮಗನನ್ನು ಸಿನಿಮಾರಂಗಕ್ಕೆ ಪರಿಚಯಿಸಲು ನಟ ದರ್ಶನ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಸುತ್ತುತ್ತಿರುವ ಸುದ್ದಿ ನಿಜವೇ ಅಥವಾ ಸುಳ್ಳೇ ಎಂಬುದನ್ನು ಕಾಲವೇ ನಿರ್ಧರಿಸಬೇಕು.