ರಮೇಶ್ ಅರವಿಂದ್(Ramesh Aravind) ನಟಿಸಿ, ನಿರ್ದೇಶನ ಮಾಡಿರುವ ‘100’ ಸಿನಿಮಾ(Cinema) ತೆರೆಗೆ ಬರುತ್ತಿದೆ. ನ.19ರಂದು ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ನಿರ್ಮಾಪಕ ರಮೇಶ್ ರೆಡ್ಡಿ ನಂಗ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಆ ಮೂಲಕ ಫ್ಯಾಮಿಲಿ ಪ್ರೇಕ್ಷಕರ ಹೀರೋ ಎನಿಸಿಕೊಂಡಿರುವ ರಮೇಶ್ ಅರವಿಂದ್ ಅವರು ತುಂಬಾ ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸದ್ಯ ‘ಶಿವಾಜಿ ಸುರತ್ಕಲ್ 2’ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ರಮೇಶ್ ಅರವಿಂದ್ ಅವರು ‘100’ ಚಿತ್ರದ ಬಿಡುಗಡೆ ಹಾಗೂ ಪ್ರಚಾರಕ್ಕೆ ಮುಂದಾಗಿದ್ದಾರೆ.
ಕನ್ನಡ ಚಿತ್ರರಂಗದ ಅಪೂರ್ವ ಸಹೋದರರು ಮನು- ವಿಕ್ರಮ್ ರವಿಚಂದ್ರನ್
ಬಿಡುಗಡೆಗೆ ಸಜ್ಜಾಗಿರುವ ಚಿತ್ರದ ಕುರಿತು ರಮೇಶ್ ಅರವಿಂದ್ ಉತ್ಸಾಹದಿಂದ ಮಾತನಾಡುತ್ತಾರೆ. ‘ಇದು ಸೈಬರ್ ಲೋಕದ ಕ್ರೈಮ್ ಸ್ಟೋರಿ. ಇವತ್ತಿನ ಜನರೇಷನ್ ನೋಡಲೇಬೇಕಾದ ಕತೆ. ಕೌಟುಂಬಿಕ ಸಿನಿಮಾ. ಸಾಕಷ್ಟುನೈಜ ಘಟನೆಗಳಿಗೆ ಈ ಸಿನಿಮಾ ಕನೆಕ್ಟ್ ಆಗುತ್ತದ. ಒಂದು ಒಳ್ಳೆಯ ಸಿನಿಮಾ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎನ್ನುವ ಖುಷಿ ಇದೆ’ ಎನ್ನುತ್ತಾರೆ.
ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ‘ನಮ್ಮ ಸೂರಜ್ ಪ್ರೊಡಕ್ಷನ್‌ನ ಮತ್ತೊಂದು ದೊಡ್ಡ ಸಿನಿಮಾ ಇದು.
ಹಾಡಲ್ಲೇ ಮೋಡಿ ಮಾಡಿದ್ದ ‘ಟಾಮ್ ಅಂಡ್ ಜೆರ್ರಿ’ ನವೆಂಬರ್ 12ಕ್ಕೆ ರಿಲೀಸ್
ಗಾಳಿಪಟ 2 ಶೂಟಿಂಗ್ ಮುಗಿಸಿರುವ ಬೆನ್ನಲ್ಲೇ ಈಗ 100 ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಎಲ್ಲ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ ಇದು. ರಮೇಶ್ ಅರವಿಂದ್ ಅವರ ಪೊಲೀಸ್ ಪಾತ್ರ, ರಚಿತಾ ರಾಮ್ ಹಾಗೂ ಪೂರ್ಣ ಅವರ ಕಾಂಬಿನೇಶನ್ ಚಿತ್ರದ ಹೈಲೈಟ್’ ಎಂಬುದು ನಿರ್ಮಾಪಕ ರಮೇಶ್ ರೆಡ್ಡಿ ನಂಗ್ಲಿ ಅವರ ಮಾತು.
ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್' (Shivaji Surathkal) ಸಿನಿಮಾ 2020 ರಲ್ಲಿ ಬಿಡುಗಡೆಯಾಗಿ ಸಿನಿಮಂದಿಯಿಂದ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ರಮೇಶ್ ಅರವಿಂದ್ (Ramesh Aravind) ಈ ಚಿತ್ರದಲ್ಲಿ ಡಿಟೆಕ್ಟಿವ್ (Detective) ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಚಿತ್ರದ ಮುಂದುವರಿದ ಭಾಗವಾಗಿ 'ಶಿವಾಜಿ ಸುರತ್ಕಲ್ 2' (Shivaji Surathkal 2) ಚಿತ್ರವನ್ನು ತೆರೆಗೆ ತರುವುದಾಗಿ ಇತ್ತಿಚೆಗಷ್ಟೇ ಚಿತ್ರದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.
'ಶಿವಾಜಿ ಸುರತ್ಕಲ್' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ರಮೇಶ್ ಅರವಿಂದ್ 'ಶಿವಾಜಿ ಸುರತ್ಕಲ್ 2' ಚಿತ್ರದಲ್ಲೂ ನಾಯಕನಾಗಿ ನಟಿಸುತ್ತಿದ್ದು, ರಮೇಶ್ ಅರವಿಂದ್ ಅವರೊಂದಿಗೆ ರಾಧಿಕಾ ನಾರಾಯಣ್ (Radhika Narayan), ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಮೊದಲ ಪಾರ್ಟ್ನಲ್ಲಿ ಇದ್ದ ಕಲಾವಿದರೇ ಈ ಚಿತ್ರತಂಡದಲ್ಲಿದೆ. ಇನ್ನು ಈ ಚಿತ್ರದಲ್ಲಿ ಇನ್ನಷ್ಟು ಹೊಸ ಪಾತ್ರಗಳು ಸೇರ್ಪಡೆಯಾಗಿದ್ದು, ಅದರಲ್ಲಿ ನಟಿ ಮೇಘನಾ ಗಾಂವ್ಕರ್ (Meghana Gaonkar) ಎಂಟ್ರಿ ಕೊಟ್ಟಿದ್ದಾರೆ.
'ಶಿವಾಜಿ ಸುರತ್ಕಲ್ 2' ರಮೇಶ್ ಅರವಿಂದ್ ನಟನೆಯ 103ನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಆಕಾಶ್ ಶ್ರಿವತ್ಸ ಅವರು ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನು 'ಶಿವಾಜಿ ಸುರತ್ಕಲ್' ಮೊದಲ ಪಾರ್ಟ್ಗೆ 'ದಿ ಕೇಸ್ ಆಫ್ ರಣಗಿರಿ ರಹಸ್ಯ' (The Case of Ranagiri Rahasya) ಎಂಬ ಟ್ಯಾಗ್ಲೈನ್ ಇತ್ತು. ಈಗ ಎರಡನೇ ಪಾರ್ಟ್ಗೆ 'ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ' (the Mysterious Case of Mayavi) ಎಂಬ ಟ್ಯಾಗ್ಲೈನ್ ಇದೆ. ಹಲವು ಗೆಟಪ್ಗಳಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಳ್ಳಲಿದ್ದಾರೆ.
ಕೊರೋನಾ ನಿಯಮಗಳನ್ನು ಪಾಲಿಸಿ ಎಂದು ಮೊದಲಿನಿಂದಲೂ ಹೇಳಿಕೊಂಡು ಬರಲಾಗಿದೆ. ನಟ ರಮೇಶ್ ಅರವಿಂದ್ ಮನವಿ ಮಾಡಿಕೊಂಡಿದ್ದು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕೋರಿದ್ದರು. ಮಾರಕ ಕೊರೋನಾ ವಿರುದ್ಧ ಹೋರಾಡಲು ಇರುವ ಏಕೈಕ ಮಾರ್ಗ ಅದು ಲಸಿಕೆ. ದಯವಿಟ್ಟು ಎಲ್ಲರೂ ಲಸಿಕೆ ಹಾಕಿಕೊಂಡು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದರು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು ನಟ.