ದಿವಂಗತ ಶಂಕರ್‌ ನಾಗ್‌ ಬಗ್ಗೆ ಸಿಂಪಲ್‌ ಸ್ಟಾರ್ ಹೇಳಿದ್ದೇನು; ಯಾಕೆ ಶಾಕ್ ಆಗಿದ್ದಾರೆ ರಕ್ಷಿತ್ ಶೆಟ್ಟಿ?

By Shriram BhatFirst Published Mar 20, 2024, 3:51 PM IST
Highlights

ಡಾ ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಅಂಡರ್‌ವಾಟರ್ ಕ್ಯಾಮೆರಾ ಸಹ ಬಳಿಸಿ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು ಶಂಕರ್‌ನಾಗ್. 

ಸ್ಯಾಂಡಲ್‌ವುಡ್ 'ಸಿಂಪಲ್ ಸ್ಟಾರ್' ನಟ ರಕ್ಷಿತ್ ಶೆಟ್ಟಿ ದಿವಂಗತ ನಟ-ನಿರ್ದೇಶಕರಾದ ಶಂಕರ್‌ನಾಗ್ ಅವರನ್ನು ಸ್ಮರಿಸಿ ಮಾತನಾಡಿದ್ದಾರೆ. 'ಇಂದು ನಾವು ಸಿನಿಮಾದಿಂದ ಸರಿಯಾಗಿ ಬಿಸಿನೆಸ್ ಮಾಡಬಹುದು. ನಾವಿ ಈಗ ಸಿನಿಮಾ ಉದ್ಯಮದ ವಿಷಯದಲ್ಲಿ ಉತ್ತಮ ಲೆವಲ್‌ನಲ್ಲಿ ಇದ್ದೇವೆ. ಇಂದು ಶಂಕರ್‌ನಾಗ್ ಸರ್ ಇದ್ದಿದ್ರೆ ಯಾವ ರೀತಿ ಎಕ್ಸ್‌ಪೆರಿಮೆಂಟ್ ಮಾಡ್ತಾ ಇದ್ರು? ಸಿನಿಮಾ ಅಂದ್ರೆ ಸಿಂಪಲ್‌ ಆಗಿ ಹೇಳ್ಬೇಕು ಅಂದ್ರೆ ಟೆಲ್ಲಿಂಗ್ ಎ ಸ್ಟೋರಿ.

ಆದ್ರೆ, ಆ ಸಮಯದಲ್ಲಿ, ಅಂದ್ರೆ ಶಂಕರ್‌ ನಾಗ್ ಸರ್‌ ಇದ್ದ ಕಾಲದಲ್ಲಿ ನಮ್ಮ ಕನ್ನಡ ಚಿತ್ರರಂಗ ಉದ್ಯಮವಾಗಿ ಇಷ್ಟೊಂದು ಬೆಳೆದಿರಲಿಲ್ಲ. ಆದ್ರೂ ಸಹ ಕೇವಲ 11 ವರ್ಷಗಳಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿ, 15ಕ್ಕೂ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ್ದರು. ಮಾಲ್ಗುಡಿ ಡೇಸ್ ಸೀರಿಯಲ್‌ನ 35ಕ್ಕೂ ಹೆಚ್ಚು ಸಂಚಿಕೆಗಳನ್ನು ನಿರ್ದೇಶನವನ್ನೂ ಮಾಡಿದ್ದರುನಟ-ನಿರ್ದೇಶಕ ಶಂಕರ್‌ನಾಗ್. ಇದೆಲ್ಲಾ ಕೇವಲ 35 ವರ್ಷಕ್ಕೆ ಒಬ್ಬ ಮನುಷ್ಯನಿಂದ ಹೇಗೆ ಮಾಡಲು ಸಾಧ್ಯ? ನನಗಂತೂ ಇಮಾಜಿನ್ ಕೂಡ ಮಾಡಲು ಸಾಧ್ಯವಿಲ್ಲ' ಎಂದಿದ್ದಾರೆ ಕನ್ನಡದ ನಟ ರಕ್ಷಿತ್ ಶೆಟ್ಟಿ.

ತಮಿಳು ಸಿನಿಮಾದಲ್ಲಿ ಕನ್ನಡದ ಬಿಗ್ ಬಾಸ್ ವಿನ್ನರ್ ರೂಪೇಶ್ ಎಂಟ್ರಿ; ಯಾವ ಸಿನಿಮಾಗೆ ಫಿಕ್ಸ್ ಆದ್ರು ನೋಡಿ!

ಇಂದು ಕನ್ನಡ ಚಿತ್ರರಂಗದಲ್ಲಿ ದಿವಗಂತ ಶಂಕರ್‌ನಾಗ್ ಅವರಿಗೆ ನಟ ರಕ್ಷಿತ್ ಶೆಟ್ಟಿ ಅವರನ್ನು ಹೋಲಿಸಿ ಮಾತನಾಡಲಾಗುತ್ತದೆ ಎಂಬುದನ್ನು ಇಲ್ಲಿ ಸ್ಮರಿಸಿಬಹುದು. ಡಾ ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಅಂಡರ್‌ವಾಟರ್ ಕ್ಯಾಮೆರಾ ಸಹ ಬಳಿಸಿ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು ಶಂಕರ್‌ನಾಗ್.

ಮಹಿಳಾ ಪ್ರಧಾನ 'ತಪಸ್ವಿ'ಯಲ್ಲಿ ರವಿಚಂದ್ರನ್; ಮ್ಯಾಥ್ಯೂ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಪಾತ್ರವೇನು?

ಶಂಕರ್‌ನಾಗ್ ಅವರು ಆಕ್ಷನ್‌ ಹೀರೋ ಆಗಿ ಪ್ರಸಿದ್ಧರಾದಷ್ಟೇ ರೊಮ್ಯಾಂಟಿಕ್ ಹೀರೋ ಆಗಿಯೂ ಕೂಡ ಮಿಂಚಿದ್ದರು. ಗೀತಾ ಚಿತ್ರದಲ್ಲಿ ರೊಮ್ಯಾಂಟಿಕ್‌ ನಾಯಕರಾಗಿ ಇತಿಹಾಸ ಸೃಷ್ಟಿಸಿದ್ದರೆ, ಅಂತ, ನಿಷ್ಕರ್ಷ ಮುಂತಾದ ಸಿನಿಮಾಗಳ ಮೂಲಕ ಆಕ್ಷನ್‌ನಲ್ಲಿ ಸಹ ಸಖತ್ ಮಿಂಚಿದ್ದರು. ಒಟ್ಟಿನಲ್ಲಿ, ನಟ ರಕ್ಷಿತ್ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ದಿವಂಗತ ನಟ-ನಿರ್ದೇಶಕ ಶಂಕರ್‌ನಾಗ್ ಅವರನ್ನು ಸ್ಮರಿಸಿ, ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ್ದಾರೆ.

ಮತ್ತೆ ಬಂದ್ರು ಮಧುಚಂದ್ರ; ಕಮಲ್ ಹಾಸನ್ ಬರ್ತಾರೆ ಅಂದ್ಬಿಟ್ಟು ಸಖತ್ ಗೂಸಾ ತಿಂದ್ರು!

ಅದನ್ನು ಮೆಚ್ಚುಗೆ ಎನ್ನುವುದಕ್ಕಿಂತ ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಶಂಕರ್‌ನಾಗ್ ಅವರ ಕೊಡುಗೆ ಎಂದು ರಕ್ಷಿತ್ ಶೆಟ್ಟಿ ವಿವರಿಸಿದ್ದಾರೆ. ಜತೆಗೆ, ಅಷ್ಟು ಚಿಕ್ಕ ಪ್ರಾಯ 35ರಲ್ಲಿ ನಿಧನ ಹೊಂದಿದ್ದರೂ ಅಷ್ಟರೊಳಗೇ ಇಷ್ಟೊಂದು ಸಾಧನೆ ಮಾಡಿರುವ ಬಗ್ಗೆ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ. 

ನೀವು ಸ್ಕೂಲ್ ಗರ್ಲ್ ಅಲ್ಲ, ದೊಡ್ಡವರಾಗಿದ್ದೀರಿ; ಸಮಂತಾಗೆ ಯಾಕೆ ಹೀಗಂದ್ರು ಸದ್ಗುರು ಜಗ್ಗಿ ವಾಸುದೇವ್!

click me!