ಮಹಿಳಾ ಪ್ರಧಾನ 'ತಪಸ್ವಿ'ಯಲ್ಲಿ ರವಿಚಂದ್ರನ್; ಮ್ಯಾಥ್ಯೂ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಪಾತ್ರವೇನು?

By Shriram Bhat  |  First Published Mar 20, 2024, 1:16 PM IST

ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾವಾಗಿರುವ ತಪಸ್ಸಿಯಲ್ಲಿ ಪ್ರಾಧ್ಯಾಪಕರಾಗಿ ಡಾಕ್ಟರ್ ವಿ ರವಿಚಂದ್ರನ್ ನಟಿಸ್ತಿದ್ದು, ಅಮ್ಮಯ್ರ ಗೋಸ್ವಾಮಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ವಿನಯ ಪ್ರಸಾದ್,  ಪ್ರಜ್ವಲ್, ಸಚಿನ್, ಅನುಷ ಕಿಣಿ, ಭಾಸ್ಕರ್..


ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಹೆಸರು ತಪಸ್ಸಿ. ಬೆಂಗಳೂರು ಮೂವೀಸ್ ಲಾಂಛನದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಸ್ಪೆನ್ಸರ್ ಮ್ಯಾಥ್ಯೂ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಪಸ್ಸಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ರವಿಚಂದ್ರನ್, 'ಇದು ಮಹಿಳಾ ಪ್ರಧಾನ ಸಿನಿಮಾ ಅಂದರೆ ರವಿಚಂದ್ರನ್ ಕರೆಯಬೇಕು ಅಲ್ವಾ ಅವರು? ಈ ಸಿನಿಮಾ ಮಾಡಿ ಮುಗಿಸಿದ್ದಾರೆ. ನನ್ನ ಭಾಗದ ಚಿತ್ರೀಕರಣವಷ್ಟೇ ಬಾಕಿ ಇದೆ. 

ಅದನ್ನು ಆರೇಳು ತಿಂಗಳಿನಿಂದ ನೀವೇ ಮಾಡಬೇಕು ಎಂಬ ಹಠ ಅವರದ್ದು. ಮ್ಯಾಥ್ಯೂ ನನಗೆ ತುಂಬಾ ಕ್ಲೋಸ್ ಫ್ರೆಂಡ್. ತುಂಬಾ ಶಿಸ್ತಿನಿಂದ ನಡೆದುಕೊಳ್ಳುವ ವ್ಯಕ್ತಿ. ರವಿ ಬೋಪಣ್ಣ ಸಿನಿಮಾದಿಂದ ನನಗೆ ಪರಿಚಯ. ಅದಕ್ಕೂ ಮುಂಚೆಯಿಂದಲೂ ಗಾಂಧಿನಗರದಲ್ಲಿ ಇದ್ದಾರೆ.  ಅವರೇ ಈ ಸ್ಟೋರಿ ಮಾಡಿದ್ದಾರೆ. ನೀವೇ ಮಾಡಬೇಕು. ಒಂದು ಸಾಮಾಜಿಕ ಸಂದೇಶ ಸಾರಬೇಕು. ತೂಕವಾದ ಪಾತ್ರ. ಇಡೀ ಸಿನಿಮಾಗೆ ನ್ಯಾಯ ಒದಗಿಸಲು ನನ್ನ ಸೆಲೆಕ್ಟ್ ಮಾಡಿದ್ದಾರೆ' ಎಂದರು.

Tap to resize

Latest Videos

ಅಮೀರ್ ಸರ್, ನಿಮ್ಮಿಂದ ಎರಡೇ ಫೀಟ್ ದೂರ ನಿಂತಿದ್ದೇನೆ; ಸಾಯಿ ಪಲ್ಲವಿ ಮಾತಿಗೆ ಅಮೀರ್ ಖಾನ್ ಶಾಕ್!

ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಮಾತನಾಡಿ, 'ರವಿಚಂದ್ರನ್ ಸರ್ ಅವರಿಂದಲೇ ಈ ಪ್ರಾಜೆಕ್ಟ್ ಶುರುವಾಗಿದೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಈ ಚಿತ್ರದಲ್ಲಿ ಸ್ಟ್ರಾಂಗ್ ಮೆಸೇಜ್ ಇದೆ. ಜನರಿಗೆ ಅದು ತಲುಪಬೇಕು ಎಂದರೆ ರವಿಚಂದ್ರನ್ ಸರ್ ಅಂತಹ ತಾಕತ್ತು ಇರುವ ವ್ಯಕ್ತಿ ಬಿಟ್ಟು ಬೇರೆ ಯಾರು ಇಲ್ಲ ಎನಿಸಿತು. ಇದು ಮಹಿಳಾ ಪ್ರಧಾನ ಸಿನಿಮಾ. ಇದ್ರಲ್ಲಿ ಒಂದು ಸ್ಟ್ರಾಂಗ್ ಮೆಸೇಜ್ ಇದೆ' ಎಂದರು.

ನೀವು ಸ್ಕೂಲ್ ಗರ್ಲ್ ಅಲ್ಲ, ದೊಡ್ಡವರಾಗಿದ್ದೀರಿ; ಸಮಂತಾಗೆ ಯಾಕೆ ಹೀಗಂದ್ರು ಸದ್ಗುರು ಜಗ್ಗಿ ವಾಸುದೇವ್!

ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾವಾಗಿರುವ ತಪಸ್ಸಿಯಲ್ಲಿ ಪ್ರಾಧ್ಯಾಪಕರಾಗಿ ಡಾಕ್ಟರ್ ವಿ ರವಿಚಂದ್ರನ್ ನಟಿಸ್ತಿದ್ದು, ಅಮ್ಮಯ್ರ ಗೋಸ್ವಾಮಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ವಿನಯ ಪ್ರಸಾದ್,  ಪ್ರಜ್ವಲ್, ಸಚಿನ್, ಅನುಷ ಕಿಣಿ, ಭಾಸ್ಕರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಮತ್ತೆ ಬಂದ್ರು ಮಧುಚಂದ್ರ; ಕಮಲ್ ಹಾಸನ್ ಬರ್ತಾರೆ ಅಂದ್ಬಿಟ್ಟು ಸಖತ್ ಗೂಸಾ ತಿಂದ್ರು!

ತಪಸ್ಸಿ ಸಿನಿಮಾಗೆ ವಿರೇಶ್ ಕ್ಯಾಮರಾ ಹಿಡಿಯುತ್ತಿದ್ದು, ಅರುಣ್ . ಪಿ.ಥಾಮಸ್  ಸಂಕಲನ, ಆರವ್ರಿಷಿಕ್  ಸಂಗೀತ ನಿರ್ದೇಶನವಿರಲಿದೆ. ಸ್ಪೆನ್ಸರ್ ಮ್ಯಾಥ್ಯೂ ನಿರ್ದೆಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದು, ಆರ್ ಗಂಗಾಧರ್ ಕಾರ್ಯಕಾರಿ ನಿರ್ಮಾಪಕನಾಗಿ ಸಾಥ್ ಕೊಟ್ಟಿದ್ದಾರೆ. ಬೆಂಗಳೂರು ಸುತ್ತಮುತ್ತ ‘ತಪಸ್ಸಿ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

click me!