ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ಬಂದ ನಟ ರಕ್ಷಿತ್ ಶೆಟ್ಟಿ, ಬಳಿಕ ನಿರ್ದೇಶಕರಾಗಿಯೂ ತಮ್ಮ ಕೈಚಳಕ ತೋರಿಸಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ ಇಂದು ಸಕ್ಸಸ್‌ಫುಲ್..
ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರು 'ಸಪ್ತಸಾಗರದಾಚೆ ಎಲ್ಲೋ' ಹ್ಯಾಂಗ್ ಓವರ್‌ನಿಂದ ಹೊರಬಂದು ಹೊಸ ಸಿನಿಮಾದ ಕೆಲಸದಲ್ಲಿ ಇನ್‌ವಾಲ್ವ್ ಆಗಿದ್ದಾರಂತೆ. ತಮ್ಮ ಮುಂಬರುವ 'ರಿಚರ್ಡ್ ರಿಚರ್ಡ್ ಆ್ಯಂಟನಿ' ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಕ್ಕಾಗಿ ತಮ್ಮ ಹೋಂ ಟೌನ್ ಉಡುಪಿಗೆ ರಕ್ಷಿತ್ ಹೋಗಿದ್ದಾರೆ ಎನ್ನಲಾಗಿದೆ. 'ಅವನೇ ಶ್ರೀಮನ್ನಾರಾಯಣ' ಬಳಿಕ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಕೈ ಗೆತ್ತಿಕೊಂಡು ಮಗಿಸಿ ಪ್ರೇಕ್ಷಕರ ಮುಂದಿಟ್ಟಿದ್ದ ರಕ್ಷಿತ್, ಸದ್ಯ ಮುಂಬರಲಿರುವ 'ರಿಚರ್ಡ್ ಆಂಟನಿ (Richard Anthony)' ಗೆ ಸದ್ಯ ತಮ್ಮ ಟೈಮ್ ಮೀಸಲಿಟ್ಟಿದ್ದಾರಂತೆ.
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು 'ಒನ್ ಟೈಮ್ ಒನ್ ವರ್ಕ್' ಪಾಲಿಸಿ ಅನುಸರಿಸುತ್ತಾರೆ ಎನ್ನಲಾಗುತ್ತದೆ. ಎರಡು-ಮೂರು ಪ್ರಾಜೆಕ್ಟ್‌ಗಳಲ್ಲಿ ಅವರು ಒಮ್ಮೆಗೇ ತೊಡಗಿಸಿಕೊಂಡು ಒದ್ದಾಡುವುದಿಲ್ಲ ಎಂಬ ಮಾತಿದೆ. ಸಾಮಾನ್ಯವಾಗಿ ನಟನಟಿಯರಷ್ಟೇ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ನಿರ್ದೇಶಕರಾಗಿದ್ದು, ಅದೇ ಸಿನಿಮಾಗೆ ನಾಯಕರೂ ಆಗಿರುವವರು ಒಟ್ಟಿಗೇ ಎರಡು ಪ್ರಾಜೆಕ್ಟ್ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯೇ. ರಕ್ಷಿತ್ ಅವರಂತೂ ಯಾವತ್ತು ಕೂಡ ಹಾಗೆ ಮಾಡುವುದಿಲ್ಲ ಎನ್ನಲಾಗುತ್ತದೆ.
ಮದುವೆ ಬಗ್ಗೆ ಕೋಪಗೊಂಡಾಗ ಪ್ರಭಾಸ್ ಅಮ್ಮನನ್ನು ಹ್ಯಾಂಡಲ್ ಮಾಡೋದು ಹೀಗಂತೆ ನೋಡಿ!
ಅವನೇ ಶ್ರೀಮನ್ನಾರಾಯಣ ಚಿತ್ರವು ನಿರೀಕ್ಷೆಗೆ ತಕ್ಕಂತೆ ಗಳಿಕೆ ಮಾಡಲಿಲ್ಲ. ಸಪ್ತ ಸಾಗರದಾಚೆ ಸಿನಿಮಾ ಸೈಡ್ ಎ, ಸೈಡ್ ಬಿ ಎಂಬ ಎರಡು ವಿಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬಂದು ಒಂದು ಲೆವಲ್‌ಗೆ ರೀಚ್ ಆಗಿದೆ ಎನ್ನಬಹುದು. ಸದ್ಯ ಮುಂಬರುವ 'ರಿಚರ್ಡ್ ರಿಚರ್ಡ್ ಆ್ಯಂಟನಿ' ಬಗ್ಗೆ ಸ್ಯಾಂಡಲ್‌ವುಡ್ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಯಿಟ್ಟು ಕಾಯುತ್ತಿದ್ದಾರೆ. ಅದೇನಾಗುತ್ತೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಷ್ಟೇ!
17ನೇ ವಯಸ್ಸಲ್ಲೇ ಅಸು ನೀಗಿದ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕನ್ನಡದಲ್ಲೂ ನಟಿಸಿದ್ದರು!
ಒಟ್ಟಿನಲ್ಲಿ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ಬಂದ ನಟ ರಕ್ಷಿತ್ ಶೆಟ್ಟಿ, ಬಳಿಕ ನಿರ್ದೇಶಕರಾಗಿಯೂ ತಮ್ಮ ಕೈಚಳಕ ತೋರಿಸಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ ಇಂದು ಸಕ್ಸಸ್‌ಫುಲ್ ನಟ-ನಿರ್ದೇಶಕರು ಎನಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ತಮ್ಮ ಮುಂಬರಲಿರುವ 'ರಿಚರ್ಡ್ ರಿಚರ್ಡ್ ಆ್ಯಂಟನಿ' ಸಿನಿಮಾವನ್ನು ಪ್ರೇಕ್ಷಕರಿಗೆ ಅದೆಷ್ಟು ಇಷ್ಟವಾಗುವಂತೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಡಾ ರಾಜ್ 'ಕಮಲಾ.. ಕಮಲಾ...' ಎಂದು ಕೂಗುತ್ತಾ ಸಾಯುತ್ತಿದ್ದರೆ ನಟಿ ಜಯಂತಿ ಬಿಕ್ಕಿಬಿಕ್ಕಿ ಅತ್ತಿದ್ದರಂತೆ!