Puneeth Rajkumar Death ನಮ್ಮನ್ನು ಅಗಲಿದ ಪ್ರೀತಿಯ ರಾಜಕುಮಾರ

Suvarna News   | Asianet News
Published : Oct 29, 2021, 02:23 PM ISTUpdated : Oct 29, 2021, 06:04 PM IST
Puneeth Rajkumar Death ನಮ್ಮನ್ನು ಅಗಲಿದ ಪ್ರೀತಿಯ ರಾಜಕುಮಾರ

ಸಾರಾಂಶ

'ಪವರ್' ಕಳೆದುಕೊಂಡ ಸ್ಯಾಂಡಲ್‌ವುಡ್(Sandalwood) ಕನ್ನಡ ಚಿತ್ರರಂಗದ ಅಭಿಮಾನಿಗಳ ಪ್ರೀತಿಯ ಅಪ್ಪು ಇನ್ನಿಲ್ಲ(Puneeth Rajkumar)  

ಬೆಂಗಳೂರು(ಅ.29): ಸ್ಯಾಂಡಲ್‌ವುಡ್(Sandalwood) ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ(Death). 46 ವರ್ಷದ ನಟ ತಮ್ಮ ಮನೆಯಲ್ಲಿ ಜಿಮ್(Gym) ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಿಸಿ ಚಿಕಿತ್ಸೆ(Treatment) ನೀಡಲಾಗುತ್ತಿತ್ತು.

"

ಮನೆಯಲ್ಲಿಯೇ ನಟ ಜಿಮ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ. ನಟನನ್ನು ಆಪ್ತರು ಬೆಂಗಳೂರಿನ(bengaluru) ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ನಟ ಶಿವರಾಜ್ ಕುಮಾರ್ ಅವರು ಭಜರಂಗಿ 2(Bhajarangi 2) ಸಿನಿಮಾ ರಿಲೀಸ್ ಹಿನ್ನೆಲೆ ಥಿಯೇಟರ್‌ನಲ್ಲಿದ್ದರು. ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಸೇರಿದಂತೆ ಬಹಳಷ್ಟು ಗಣ್ಯರು ಆಸ್ಪತ್ರೆಗೆ ಆಗಮಿಸಿದ್ದಾರೆ. ಬಹಳಷ್ಟು ಜನ ಅಭಿಮಾನಿಗಳು ನಟ ದಾಖಲಾಗಿದ್ದ ಆಸ್ಪತ್ರೆ ಬಳಿ ಸೇರಿದ್ದರು. ನಟನಿಗೆ ಗುರುವಾರ ರಾತ್ರಿಯೇ ಸುಸ್ತು ಇತ್ತು ಎನ್ನಲಾಗಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ನಟನನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ನಂತರ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ನಟ ಪತ್ನಿ ಗೀತಾ ಅಶ್ವಿನಿ ರೇವಂತ್ ಹಾಗೂ ಇಬ್ಬರು ಪುತ್ರಿಯರಾದ ಧೃತಿ, ವಂದಿತಾ ಮತ್ತು ಕುಟುಂಬ, ಸ್ನೇಹಿತರು ಸೇರಿ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ. ನಟನ ಹಿರಿಯ ಪುತ್ರಿ ಅಮೆರಿಕದಲ್ಲಿ ವಾಸಿಸುತ್ತಿದ್ದು ಅವರು ಅಲ್ಲಿಂದ ಬರಬೇಕಾಗಿದೆ.

ನೇತ್ರದಾನ ಮಾಡಿದ ಪವರ್‌ಸ್ಟಾರ್:

ದಾನ, ಸಹಾಯಗಳಲ್ಲಿ ಮುಂದೆ ಇದ್ದ ನಟ ಪವರ್‌ಸ್ಟಾರ್ ತಂದೆಯಂತೆಯೇ ತಮ್ಮ ನೇತ್ರಗಳನ್ನು ದಾನ ಮಾಡಿದ್ದಾರೆ. ಅವರ ತಂದೆ ವರನಟ ಡಾ. ರಾಜ್‌ಕುಮಾರ್ ಅವರೂ ನೇತ್ರದಾನ ಮಾಡಿದ್ದರು. ಅವರ ಸಾವಿನಂದೇ ಮಕ್ಕಳೂ ನೇತ್ರದಾನ ಮಾಡುವ ನಿರ್ಧಾರ ಮಾಡಿದ್ದರು.

ಬಾಲನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಪುನೀತ್:

ಪುನೀತ್ ಅವರ ಮೂಲ ಹೆಸರು ಆಗ ಲೋಹಿತ್ ಎಂದಾಗಿತ್ತು. ಚೆನ್ನೈನಲ್ಲಿ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ಗೆ ಜನಿಸಿದ ಪುನೀತ್ ಐದನೇ ಮಗು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಅವರ ತಂದೆ ನಟನನ್ನು ಮತ್ತು ಅವನ ಸಹೋದರಿ ಪೂರ್ಣಿಮಾ ಅವರನ್ನು ಹತ್ತು ವರ್ಷ ವಯಸ್ಸಿರುವಾಗಲೇ ಅವರ ಚಲನಚಿತ್ರ ಸೆಟ್‌ಗಳಿಗೆ ಕರೆತರುತ್ತಿದ್ದರು. ಅವರ ಹಿರಿಯ ಸಹೋದರ ಶಿವ ರಾಜ್‌ಕುಮಾರ್ ಜನಪ್ರಿಯ ನಟ.

ಅದ್ಭುತ ಗಾಯಕ:

ಪುನೀತ್, ಅವರ ತಂದೆಯಂತೆಯೇ, ವೃತ್ತಿಪರ ಗಾಯನದಲ್ಲಿಯೂ ಮಿಂಚಿದ ಕೆಲವೇ ಕೆಲವು ನಟರಲ್ಲಿ ಒಬ್ಬರು ಅಪ್ಪು. ಅವರು ಅಪ್ಪುವಿನಲ್ಲಿ ಏಕಾಂಗಿಯಾಗಿ ಹಾಡಿದ್ದರು. ವಂಶಿಯವರ "ಜೊತೆ ಜೊತೆಯಲಿ" ಯುಗಳ ಗೀತೆಯನ್ನು ಹಾಡಿದ್ದಾರೆ. ಅವರು ಜಾಕಿಯಲ್ಲಿ ಸ್ಪೀಡ್ ಸಾಂಗ್ ಹಾಡಿದರು. ಲವ ಕುಶ ಮತ್ತು ಮೈಲಾರಿ ಚಿತ್ರಗಳಲ್ಲಿ ಹಾಡಿದರು.ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಅಕಿರಾ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರು "ಕಣ್ಣ ಸಣ್ಣೆ ಇಂದಲೇನೆ" ಹಾಡನ್ನು ಹಾಡಿದ್ದಾರೆ. ಅವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳ ಸಂಭಾವನೆ ದಾನಕ್ಕೆ ಹೋಗುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಮತ್ತೆ ಒಂದಾದ ಪುನೀತ್ ರಾಜ್‌ಕುಮಾರ್ ಮತ್ತು ಸಂತೋಷ್ ಆನಂದ್‌ರಾಮ್!

ಕನ್ನಡ ಸಿನಿರಂಗದ ವರನಟ ಡಾ. ರಾಜ್‌ಕುಮಾರ್‌ (Dr. Rajkumar)ಅವರ ಕಿರಿಯ ಪುತ್ರ ಪುನೀತ್‌ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಯುವರತ್ನ(Yuvarathna) ಸಿನಿಮಾ ಭಾರೀ ಹಿಟ್ ಆಗಿತ್ತು. ಚಿತ್ರ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಸಾವಿನ ನಂತರ ಅವರ ಮನೆಯ ಸುತ್ತ ಭದ್ರತೆಯನ್ನು(Security) ಹೆಚ್ಚಿಸಲಾಗಿದೆ. ಹಾಗೆಯೇ ವಿಕ್ರಮ್ ಆಸ್ಪತ್ರೆಯ ಸುತ್ತಲೂ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಅವರ ಅನಾರೋಗ್ಯದ ಸುದ್ದಿ ಹೊರಬಿದ್ದ ತಕ್ಷಣ ಗುರುದತ್, ರವಿಚಂದ್ರನ್ ಸೇರಿದಂತೆ ಉದ್ಯಮದ ಎಲ್ಲಾ ದಿಗ್ಗಜರು ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಪುನೀತ್ ಸಹೋದರ ಶಿವರಾಜಕುಮಾರ್ ಕೂಡ ಆಸ್ಪತ್ರೆಗೆ ಧಾವಿಸಿದ್ದಾರೆ. ಶಿವಣ್ಣ ಅಭಿನಯದ ಭಜರಂಗಿ 2 ಚಿತ್ರ ಇಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಹಿಟ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?