Puneeth Rajkumar Death: ಪುನೀತ್‌ ರಾಜ್‌ಕುಮಾರ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

By Suvarna News  |  First Published Oct 29, 2021, 12:27 PM IST
  • ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್ ಕುಮಾರ್‌ಗೆ(Puneeth Rajkumar) ಹೃದಯಾಘಾತ(Heart Attack)
  • ಬೆಂಗಳೂರಿನ (Bengaluru)ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲು

ಬೆಂಗಳೂರು(ಅ.29): ಸ್ಯಾಂಡಲ್‌ವುಡ್(Sandalwood) ಪವರ್‌ಸ್ಟಾರ್ ನಟ ಪುನೀತ್ ರಾಜ್‌ ಕುಮಾರ್(Puneeth Rajkumar) ಲಘು ಹೃದಯಾಘಾತದಿಂದ(Heart attack) ಬೆಂಗಳೂರಿನ(Bengaluru) ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಾಗಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಗೆ ಅನಾರೋಗ್ಯವಾಗಿದ್ದು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ಗೆ ಲಘು  ಹೃದಯಾಘಾತ ಸಂಭವಿಸಿದ್ದು ವೈದ್ಯರು ಸದ್ಯ ಇಸಿಜಿ ಮಾಡುತ್ತಿದ್ದಾರೆ. ಸದ್ಯ ಯಾವುದೇ ಗಂಭೀರ ಸಮಸ್ಯೆ ಇಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.

Tap to resize

Latest Videos

undefined

ಭಜರಂಗಿ ಹವಾ... ವಿನೋದ್ ರಾಜ್, ಯಶ್ ಕೊಂಡಾಡಿದ ಶಿವಣ್ಣ

ಮನೆಯಲ್ಲಿರುವ ಜಿಮ್ ನಲ್ಲಿ (Gym)ವರ್ಕೌಟ್ ಮಾಡುವಾಗ ಆರೋಗ್ಯದಲ್ಲಿ ಏರು ಪೇರಾಗಿತ್ತು ಎಂದು ತಿಳಿದುಬಂದಿದೆ. ಜಿಮ್ ಮಾಡುವಾಗ ನಟ ಪುನೀತ್ ಅಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣ ಅವರ ಆಪ್ತ ಸಹಾಯಕರು ನಟನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ವಿಕ್ರಂ‌ ಆಸ್ಪತ್ರೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೋಮೆಂದು ಮುಖರ್ಜಿ, ಡಿಸಿಪಿ ಅನುಚೇತ್ ದೌಡಾಯಿಸಿದ್ದಾರೆ.

ಪೊಲೀಸರು(Police) ಹೇಳುತ್ತಿರುವ ಪ್ರಕಾರ ನಟನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ನಟ ದಾಖಲಾಗಿರುವ ಆಸ್ಪತ್ರೆಯ ಸುತ್ತ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗುತ್ತಿದೆ. ನಟನ ಅಭಿಮಾನಿಗಳು, ಆಪ್ತರು, ಸಿನಿ ಗಣ್ಯರು, ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ ಆಸ್ಪತ್ರೆ ಸುತ್ತ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದ್ದು ಮತ್ತಷ್ಟು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆತರಲಾಗಿದೆ.

"

ನಟ ಶಿವರಾಜ್ ಕುಮಾರ್ ಅವರು ಭಜರಂಗಿ 2 ಸಿನಿಮಾ ರಿಲೀಸ್ ಹಿನ್ನೆಲೆ ಥಿಯೇಟರ್‌ನಲ್ಲಿದ್ದರು. ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡಾ ಆಸ್ಪತ್ರೆಗೆ ಧಾವಿಸಿದ್ದಾರೆ. ನಟಿ ಶ್ರುತಿ ಆಸ್ಪತ್ರೆ ಬಳಿ ಧಾವಿಸಿದ್ದು ಕಣ್ಣೀರಿಟ್ಟಿದ್ದಾರೆ. 

ಬಹಳಷ್ಟು ಅಭಿಮಾನಿಗಳು ಆಸ್ಪತ್ರೆ ಹಾಗೂ ಪುನೀತ್ ನಿವಾಸದ ಬಳಿ ಜಮಾಯಿಸಿದ್ದಾರೆ. ಅವರ ಹಿರಿಯ ಪುತ್ರಿ ಅಮೆರಿಕದಲ್ಲಿದ್ದಾರೆ. ನಟನ ನಿವಾಸದ ಸುತ್ತ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅವರು ಭಜರಂಗಿ 2 ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಣ್ಣ ಶಿವರಾಜ್ ಕುಮಾರ್ ಸೇರಿದಂತೆ ಸಿನಿ ಗಣ್ಯರ ಜೊತೆ ಖುಷಿಯಾಗಿ ಸಮಯ ಕಳೆದಿದ್ದ ನಟನ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು.

ಸಾಮಾಜಿಕ ಜಾಲತಾಣದಲ್ಲಿ ಪುನೀತ್ 'ಜೇಮ್ಸ್' ಫೋಟೋ ವೈರಲ್

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದ ನಟ, ಎರಡನೇ‌ ಲಾಕ್ ಡೌನ್ ಬಳಿಕೆ ಎಲ್ಲಾ ಸಿನಿಮಾಗಳು ಒಳ್ಳೆ ಒಪನಿಂಗ್ ಪಡೆದಿವೆ. ಭಜರಂಗಿ2  ನಾಡಿದ್ದು 29ಕ್ಕೆ ಬಿಡುಗಡೆ‌ ಆಗುತ್ತಿದೆ. ನಾನು ಸಿನಿಮಾದ ಕ್ಲಿಪ್ಪಿಂಗ್ ಗಳನ್ನ  ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ಸಿನಿಮಾದ ಕಥೆ, ಕ್ವಾಲಿಟಿ ಅದ್ಭುತವಾಗಿದೆ. ನನಗೆ ಶಿವಣ್ಣನ ಎಲ್ಲಾ ಲುಕ್ ಗಳು ಇಷ್ಟವಾಗುತ್ತೆ. ಮರೆಯಲಾಗದ ಗೆಟಪ್ ಅಂದ್ರೆ ಮನ ಮೆಚ್ಚಿದ ಹುಡುಗಿ, ಜನುಮದ ಜೋಡಿ, ಕುರುಬನ ರಾಣಿ ಪಾತ್ರಗಳು ತುಂಬಾ ಇಷ್ಟ ಎಂದು ನೆನಪಿಸಿಕೊಂಡಿದ್ದರು.

ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌‌ನ ದೊಡ್ಮನೆ ಹುಡುಗ ಪುನೀತ್ ರಾಜ್‌ಕುಮಾರ್ (Puneeth Rajkumar) ಜೇಮ್ಸ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಚಿತ್ರದ ಸ್ಪೆಷಲ್ ಹಾಡಿನ ಚಿತ್ರೀಕರಣ ನಡೆದಿದ್ದು, ಪುನೀತ್ ಫೋಟೋ ಕೂಡಾ ವೈರಲ್ ಆಗುತ್ತಿದೆ.  

click me!