'ಅಭಿಮಾನಿಗಳು ತೋರಿಸುವ ಪ್ರೀತಿ ಗೌರವದಲ್ಲಿ ಒಂದು ಪರ್ಸೆಂಟ್ ನಾನು ಬಂದಿರೋದು. ನಾವು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡೋದಕ್ಕೆ ಇವರೇ ಕಾರಣ. ನನ್ನ ಹೆಸರಿಗೆ ಕಳಂಕ ತರುವ ಯಾವ ಕೆಲಸಾನೂ ಇವರು ಮಾಡಿಲ್ಲ. ..
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ದಿನ ಬಿಲ್ಲ ರಂಗ ಬಾಷದ ಹೊಸ ಅಪ್ಡೇಟ್ ಕೊಟ್ಟಿದ್ದಾರೆ ನಟ ಸುದೀಪ್. ಅನೂಪ್ ಭಂಡಾರಿ ಜೊತೆ ಹೊಸ ಮೂವಿ ಅಪ್ಡೇಟ್ ಕೊಟ್ಟ ಸುದೀಪ್, ತಮ್ಮ ಮುಂದಿನ ಸಿನಿಮಾ ಬಗ್ಗೆ ಅಫೀಶಿಯಲ್ ಅನೌನ್ಸ್‌ಮೆಂಟ್ ಮಾಡಿದ್ದಾರೆ.
ಈ ಸಮಯದಲ್ಲಿ ನಟ ಕಿಚ್ಚ ಸುದೀಪ್ ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಶಾಸಕ ಸಿಕೆ ರಾಮಮೂರ್ತಿ ಅವರಿಗೆ ತಮ್ಮ ಹುಟ್ಟುಹಬ್ಬದ ಸಂಭ್ರಮಕ್ಕೆ ಏರ್ಪಾಟು ಮಾಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ ಕಿಚ್ಚ ಸುದೀಪ್. 'ಪ್ರತಿ ಹುಟ್ಟು ಹಬ್ಬದಲ್ಲಿ ರಾತ್ರಿ ಬಾಗಿಲು ಓಪನ್ ಮಾಡುವಾಗ ಒಂದಿಷ್ಟು ಕ್ಯಾಮರಾ ಇರುತ್ತೆ, ಅದರಲ್ಲಿ ಗೊತ್ತಾಗುತ್ತೆ ಎಷ್ಟು ಅಭಿಮಾನ ಇಟ್ಟಿದ್ದೀರಾ ಅಂತ' ಎಂದಿದ್ದಾರೆ ಕಿಚ್ಚ ಸುದೀಪ್.
ಸುದೀಪ್ ಹುಟ್ಟುಹಬ್ಬಕ್ಕೆ ಮಗಳು ಸಾನ್ವಿಯಿಂದ ವಿಶೇಷ ಗಿಫ್ಟ್
'ಅಭಿಮಾನಿಗಳು ತೋರಿಸುವ ಪ್ರೀತಿ ಗೌರವದಲ್ಲಿ ಒಂದು ಪರ್ಸೆಂಟ್ ನಾನು ಬಂದಿರೋದು. ನಾವು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡೋದಕ್ಕೆ ಇವರೇ ಕಾರಣ. ನನ್ನ ಹೆಸರಿಗೆ ಕಳಂಕ ತರುವ ಯಾವ ಕೆಲಸಾನೂ ಇವರು ಮಾಡಿಲ್ಲ. ಪ್ರತಿಯೊಬ್ಬ ಕಲಾವಿದರು ಸಿನಿಮಾ ಮಾಡ್ತಾರೆ. ವ್ಯಕ್ತಿತ್ವದಲ್ಲಿ ದೊಡ್ಡವರಾಗೋದು ಇಂಪಾರ್ಟೆಂಟ್. ಎಲ್ಲರೂ ನನ್ನ ಜೀವನದಲ್ಲಿ ಚೆನ್ನಾಗಿದ್ದಾರೆ.
ಹಾಗಾಗಿ ನಾನೂ ಚೆನ್ನಾಗಿದ್ದೇನೆ. ಮನೆ ಹತ್ರ ಏರ್ಪಾಡು ಮಾಡಿಸೋಕೆ ಸಾಧ್ಯ ಆಗಿಲ್ಲ, ಕ್ಷಮೆ ಇರಲಿ ಎಂದು ಅಭಿಮಾನಿಗಳ ಬಳಿ ಕಿಚ್ಚ ಸುದೀಪ್ ಕ್ಷಮೆ ಕೇಳಿದ್ದಾರೆ. ಈಗಷ್ಟೇ 28 ದಾಟಿ ಇಪ್ಪತ್ತೊಂಬತ್ತಕ್ಕೆ ಕಾಲಿಟ್ಟಿದ್ದೀನಿ ಎಂದು ತಮಾಷೆ ಕೂಡ ಮಾಡಿದ್ದಾರೆ ಕಿಚ್ಚ ಸುದೀಪ್. ಮ್ಯಾಕ್ಸ್ ಸಿನಿಮಾ ಟ್ರೇಲರ್ ಸ್ವಲ್ಪ ತಡ ಆಯ್ತು. ಇನ್ನೊಂದು ಸಿನಿಮಾ ಆದಷ್ಟು ಬೇಗ ಇಡ್ತೀನಿ. ಬೆಳಗ್ಗೆ ಎದ್ದು ಮೇಕಪ್ ಹಾಕೊಳೋದೆ ನಿಮಗೋಸ್ಕರ..'ಎಂದಿದ್ದಾರೆ ಕಿಚ್ಚ ಸುದೀಪ್.
ನಾವು ಮಾಡೋ ಪ್ರತಿಯೊಂದು ಕೆಲ್ಸ ನಮ್ ಬಗ್ಗೆ ಪ್ರಪಂಚಕ್ಕೆ ಮೆಸೇಜ್ ಕೊಡುತ್ತೆ; ರಮೇಶ್ ಅರವಿಂದ್!
'ನೀವು ಎಲ್ಲಿಯವರೆಗೆ ನೋಡೋಕೆ ಇಷ್ಟ ಪಡ್ತೀರೋ ಅಲ್ಲಿಯವರೆಗೆ ಕೆಲಸ ಮಾಡ್ತೀನಿ. ಸಪ್ಟೆಂಬರ್ ಒಂದರ 12 ಗಂಟೆ ರಾತ್ರಿ ಬರೋ ನಿಮ್ಮ ಕೂಗು ವರ್ಷ ಇಡೀ ಹುಮ್ಮಸ್ಸು ಕೊಡುತ್ತೆ...' ಎಂದು ತಮ್ಮ ಅಭಿಮಾನಿಗಳು ಅಮೋಘ, ಅಪೂರ್ವ ಅಭಿಮಾನಕ್ಕೆ ಕಿಚ್ಚ ಸುದೀಪ್ ಅವರು ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಹಾಗೇ, 'ಎಲ್ಲರಿಗೂ ಥ್ಯಾಂಕ್ಯೂ ಸೋ ಮಚ್' ಎಂದು ಸುದೀಪ್ ಫ್ಯಾನ್ಸ್ ಕೂಡ ಹೇಳಿದ್ದಾರೆ.