ಬೆನ್ನು ಮೂಳೆ ಸಮಸ್ಯೆ, ಮಲಬದ್ಧತೆ ಸಮಸ್ಯೆಯಿದೆ. ಕೆಳಗೆ ಕೂರಲು ಆಗುವುದಿಲ್ಲ. ಶೌಚಾಲಯಕ್ಕೆ ಸರ್ಜಿಕಲ್ ಚೇರ್ ನೀಡುವಂತೆ ಡಿಐಜಿ ಮುಂದೆ ನಟ ದರ್ಶನ್ ಮನವಿ ಮಾಡಿಕೊಂಡಿದ್ದರು.
ಬಳ್ಳಾರಿ (ಸೆ.02): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತ ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹ ಸೇರಿ 4 ದಿನಗಳು ಕಳೆದಿದ್ದು, ನಟನ ಬೇಡಿಕೆಯಂತೆ ಶೌಚಾಲಯಕ್ಕೆ ಸರ್ಜಿಕಲ್ ಚೇರ್ ನೀಡುವ ಕುರಿತು ಜೈಲಿನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬೆನ್ನು ಮೂಳೆ ಸಮಸ್ಯೆ, ಮಲಬದ್ಧತೆ ಸಮಸ್ಯೆಯಿದೆ. ಕೆಳಗೆ ಕೂರಲು ಆಗುವುದಿಲ್ಲ. ಶೌಚಾಲಯಕ್ಕೆ ಸರ್ಜಿಕಲ್ ಚೇರ್ ನೀಡುವಂತೆ ಡಿಐಜಿ ಮುಂದೆ ನಟ ದರ್ಶನ್ ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಬೆಂಗಳೂರಿನಿಂದ ನಟನ ಆರೋಗ್ಯ ವರದಿ ಬಂದಿದ್ದು, ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಭಾನುವಾರವೂ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಸೋಮವಾರ ನಟನಿಗೆ ಸರ್ಜಿಕಲ್ ಚೇರ್ ನೀಡುವ ಸಾಧ್ಯತೆಯಿದೆ.
Repoters Dairy: ದರ್ಶನ್‌ಗೆ ಕಾಡುತ್ತಿದೆ ‘ದುರ್ಯೋಧನ ಗ್ರಹಣ’: ಇದೇಕೆ ಹೀಗೆ ಸಾಲು ಸಾಲು ಕಂಟಕ?
ಮೂಲಗಳ ಪ್ರಕಾರ ನಟ ದರ್ಶನ್ ಜೈಲಿನ ಊಟಕ್ಕೆ ಒಗ್ಗಿಕೊಂಡಿದ್ದಾರೆ. ಭಾನುವಾರ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಮಾಡಿದ್ದಾರೆ. ಶನಿವಾರ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಭೇಟಿ ಕೊಟ್ಟಾಗ ನೀಡಿದ್ದ ಬೇಕರಿ ತಿಂಡಿಗಳನ್ನು ದರ್ಶನ್ ಸೇವಿಸಿದ್ದಾರೆ. ಜೈಲಿನ ಬ್ಯಾರಕ್ ಆವರಣದಲ್ಲಿಯೇ ವಾಕಿಂಗ್ ಮಾಡುತ್ತಿದ್ದಾರೆ. ರಾತ್ರಿ 9 ಗಂಟೆಯೊಳಗೆ ನಿದ್ರೆಗೆ ಜಾರುತ್ತಿದ್ದಾರೆ ಎಂದು ತಿಳಿದುಬಂದಿದೆ.
* ಬಳ್ಳಾರಿ ಜೈಲಿನಲ್ಲಿ ದರ್ಶನ್ ಕುಟುಂಬಸ್ಥರು ನೀಡಿದ ವೈದ್ಯಕೀಯ ವರದಿ ಪರಿಶೀಲಿಸಿದ ವೈದ್ಯರು.
* ಬೆನ್ನುಮೂಳೆಯ ನೋವು ಕೈ ನೋವು ಇರೋದಾಗಿ ಡಿಐಜಿ ಮುಂದೆ ಹೇಳಿದ್ದ ದರ್ಶನ್..
* ಸ್ಟಾಪ್ ನರ್ಸ್ ಗಳು ಹಾಗೂ ಡ್ಯೂಟಿ ವೈದ್ಯರಿಂದ ಆರೋಗ್ಯ ತಪಾಸಣೆ
ದರ್ಶನ್ ಸಿಗರೆಟ್ ಫೋಟೋ ಎಫೆಕ್ಟ್: ಬೆಳಗಾವಿಯಲ್ಲಿ ಕೈದಿಗಳಿಂದ ಬೀಡಿ, ತಂಬಾಕಿಗಾಗಿ ಧರಣಿ!
( ಜನರಲ್ ಚೆಕ್ ಅಪ್)
* ಬಿಪಿ ಹಾಗೂ ಶುಗರ್ ಸೇರಿದಂತೆ ಇತರೆ ಸಣ್ಣಪುಟ್ಟ ವಿಚಾರದ ಬಗ್ಗೆ ಪರಿಶೀಲನೆ
* ನಾಳೆಯೂ ಹಿರಿಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ
* ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಮುಂದಿಟ್ಟುಕೊಂಡು ಆರೋಗ್ಯ ತಪಾಸಣೆ ನಡೆಯಲಿದೆ