
ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅಭಿಮಾನಿಗಳು ಜತೆಗೂಡಿ ಕಿಚ್ಚ ಸುದೀಪ್ ಸಾಂಸ್ಕೃತಿಕ ಪರಿಷತ್ ವತಿಯಿಂದ ‘ದೊಡ್ಮನುಷ್ಯ’ ಹೆಸರಿನಲ್ಲಿ 2021ರ ಹೊಸ ಕ್ಯಾಲೆಂಡರ್ ತಂದಿದ್ದಾರೆ.
ವಿಷ್ಣುದಾದಾ ಹಾಗೂ ಸುದೀಪ್ ಇಬ್ಬರ ಆಕರ್ಷಕ ಫೋಟೋಗಳನ್ನು ಒಳಗೊಂಡ ಈ ಕ್ಯಾಲೆಂಡರ್ ಅನ್ನು ನಿರ್ಮಾಪಕ ಸೂರಪ್ಪ ಬಾಬು ಬಿಡುಗಡೆ ಮಾಡಿದರು. ‘ಕ್ಯಾಲೆಂಡರ್ ತುಂಬಾ ಆಕರ್ಷಕವಾಗಿ ಮೂಡಿ ಬಂದಿದೆ.
ಜನಮೆಚ್ಚಿದ ಬಳೆಪೇಟೆ ಟೀಸರ್: ಭೂಗತ ಜಗತ್ತಿನ ಕಥೆ
ಅಭಿಮಾನಿಗಳೇ ಸೇರಿ ಮಾಡಿರುವುದರಿಂದ ಇದರ ಘತನೆ ಮತ್ತಷ್ಟುಹೆಚ್ಚಾಗಿದೆ. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಇಟ್ಟುಕೊಳ್ಳಬಹುದಾದ ಕಲರ್‌ಫುಲ್ ಕ್ಯಾಲೆಂಡರ್ ಇದಾಗಿದೆ’ ಎಂದು ಅಭಿಮಾನಿಗಳ ಈ ಸಾಹಸಕ್ಕೆ ಸೂರಪ್ಪ ಬಾಬು ಮೆಚ್ಚುಗೆ ಸೂಚಿಸಿದರು.
ಇತ್ತೀಚೆಗಷ್ಟೇ ಭರ್ಜರಿಯಾಗಿ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾಗಿತ್ತು. ಕಾರ್ಯಕ್ರಮದ ವಿಡಿಯೋ, ಫೋಟೋಗಳು ವೈರಲ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.