ಚಿತ್ರಮಂದಿರಗಳಲ್ಲಿ ಶೇ.100 ಸೀಟು ಅವಕಾಶ: ಇಂದು ಮಹತ್ವದ ಸೂಚನೆ ನಿರೀಕ್ಷೆ

Published : Feb 03, 2021, 03:29 PM ISTUpdated : Feb 03, 2021, 06:41 PM IST
ಚಿತ್ರಮಂದಿರಗಳಲ್ಲಿ ಶೇ.100 ಸೀಟು ಅವಕಾಶ: ಇಂದು ಮಹತ್ವದ ಸೂಚನೆ ನಿರೀಕ್ಷೆ

ಸಾರಾಂಶ

ರಿಲೀಸ್ ಆಗಲಿವೆ ಸಾಲು ಸಾಲು ಬಹು ನಿರೀಕ್ಷಿತ ಸಿನಿಮಾಗಳು | ಥಿಯೇಟರ್‌ಗಳಲ್ಲಿ ಶೇ 100 ಸೀಟು ಭರ್ತಿಗೆ ಹೆಚ್ಚಿದ ಒತ್ತಡ | ಇಂದು ಮಹತ್ವದ ನಿರ್ಧಾರ..?

ರಾಜ್ಯ ಸರ್ಕಾರದಿಂದ ಚಿತ್ರಮಂದಿರಕ್ಕೆ ಶೇ 50% ಮಾತ್ರ ಅವಕಾಶ ನೀಡಲಾಗಿದ್ದು, 100% ಅವಕಾಶ ಕೊಡುವಂತೆ ನಟ, ಶಾಸಕ ಕುಮಾರ್ ಬಂಗಾರಪ್ಪನವರಿಗೆ ಚಿತ್ರರಂಗದದಿಂದ ಮನವಿ ಮಾಡಲಾಗಿದೆ.

ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಕುಮಾರ್ ಬಂಗಾರಪ್ಪ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದೆ. ಶೇಕಡ 100 ಸೀಟು ಬರ್ತಿಗೆ ಅವಕಾಶ ಮಾಡಿಕೊಡುಂತೆ ಸರ್ಕಾರ‌ ಗಮನಕ್ಕೆ ತನ್ನಿ ಎಂದು ಮನವಿ ಮಾಡಲಾಗಿದೆ.

"

ಗುಬ್ಬಿ ಜಯರಾಜ್, ನಿರ್ಮಾಪಕ‌ ಸೂರಪ್ಪ ಬಾಬು, ಉಮೇಶ್ ಬಣಕಾರ್ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಬಂಗಾರಪ್ಪ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ.

ಸರ್ಕಾರದಿಂದ ಶೇಕಡ 50% ಮಾತ್ರ ಅವಕಾಶ ನೀಡಿರೋದು ಬೇಸರದ ಸಂಗತಿ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ನೂರರಷ್ಟು ಅವಕಾಶ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ. ಆದಷ್ಟು ಬೇಗ ಈ ಬಗ್ಗೆ ಪುನರ್ ಪರಿಶೀಲನೆ ಮಾಡಿ ಎಂದು ಕೇಳುತ್ತೇವೆ. ಸದ್ಯ ಮುಖ್ಯಮಂತ್ರಿಗಳ ಕಾಲಾವಕಾಶ ಸಿಕ್ಕಿಲ್ಲ ಎನ್ನಲಾಗಿದೆ.

"

ಎಲ್ಲಾ ರಾಜ್ಯದಲ್ಲಿಯೂ 100%ಅವಕಾಶ ನೀಡಿದ್ದಾರೆ ನಮಗೆ ಮಾತ್ರ 50% ಯಾಕೆ ಗೊತ್ತಾಗುತ್ತಿಲ್ಲ. ಬೆಳಗ್ಗೆ ಪೊಗರು ಸಿನಿಮಾ ನಿರ್ಮಾಪಕರು ಕರೆ ಮಾಡಿದ್ದರು. ಅವರಿಗೂ ಸಮಸ್ಯೆ ಆಗಿದೆ. ಈಗಾಗಲೇ ಮುಖ್ಯಮಂತ್ರಿಗಳ‌ ಗಮನಕ್ಕೆ ಈ‌ವಿಚಾರ ತಂದಿದ್ದೇವೆ ಎನ್ನಲಾಗಿದೆ.

ಸಿಎಂ ಅವಕಾಶ ಕೊಟ್ಟರೆ ಕಲಾವಿದರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಮೊದಲಿಗೆ ಅವರ ಸಮಯಾವಕಾಶ ಸಿಗಬೇಕು. ಅದಕ್ಕಾಗಿ ಕಾಯುತ್ತಿದ್ದೇವೆ. ಈ ಬಗ್ಗೆ ಸಿಎಂ ಜೊತೆ ನಿನ್ನೆಯೇ ಚರ್ಚೆಸಿದ್ದೇನೆ‌‌. ಸಿನಿಮಾಗಳನ್ನ ನೋಡೋರಿಗೆ ಶೇಕಡ ನೂರರಷ್ಟು ಅವಕಾಶ ಕಲ್ಪಿಸುತ್ತೇವೆ. ಸಿಎಂ ಕೂಡ ಭರವಸೆ ನೀಡಿದ್ದಾರೆ.‌ ಇವತ್ತು ಸಂಜೆ ಒಳಗೆ ಗೊಂದಲ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

"

ಹೋರಾಟಕ್ಕೆ ಸಜ್ಜಾದ ಕನ್ನಡ ಚಿತ್ರರಂಗದ ಪ್ರಮುಖ ಕಲಾವಿದರು ಈಗಾಗಲೇ ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ. ಸರ್ಕಾರ ಮನವಿಗೆ ಒಪ್ಪದಿದ್ದಲ್ಲಿ ಸ್ಟಾರ್ ನಟರೆಲ್ಲಾ ಸೇರಿ ಹೋರಾಟ ಮಾಡುತ್ತೇವೆ. ಹೋರಾಟಕ್ಕೆ ಸಾಥ್ ನೀಡಲು ಸ್ಟಾರ್ ನಟರು ಒಪ್ಪಿದ್ದಾರೆ ಎಂದು ಶಿವರಾಜ್ ಕುಮಾರ್ , ದುನಿಯಾ ವಿಜಿ, ಧೃವ ಸರ್ಜಾ, ಡಾಲಿ  ಧನಂಜಯ್ ಜೊತೆ ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್