ಜನಮೆಚ್ಚಿದ ಬಳೆಪೇಟೆ ಟೀಸರ್‌: ಭೂಗತ ಜಗತ್ತಿನ ಕಥೆ

Kannadaprabha News   | Asianet News
Published : Feb 04, 2021, 09:28 AM ISTUpdated : Feb 04, 2021, 09:29 AM IST
ಜನಮೆಚ್ಚಿದ ಬಳೆಪೇಟೆ ಟೀಸರ್‌: ಭೂಗತ ಜಗತ್ತಿನ ಕಥೆ

ಸಾರಾಂಶ

ಮೆಜೆಸ್ಟಿಕ್‌ ಪಕ್ಕದ ಬಳೆಪೇಟೆಯನ್ನೇ ಟೈಟಲ್ಲಾಗಿಟ್ಟುಕೊಂಡು ರೌಡಿಸಂ ಕತೆ | ಟೀಸರ್‌ಗೆ ಭಾರೀ ಮೆಚ್ಚುಗೆ

ಮೆಜೆಸ್ಟಿಕ್‌ ಪಕ್ಕದ ಬಳೆಪೇಟೆಯನ್ನೇ ಟೈಟಲ್ಲಾಗಿಟ್ಟುಕೊಂಡು ರೌಡಿಸಂ ಕತೆ ಹೇಳಲು ಹೊರಟಿದೆ ರಿಷಿಕೇಶ್‌ ಆ್ಯಂಡ್‌ ಟೀಮ್‌. ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಲಾಂಚ್‌ ಆಗಿದ್ದು, ಈಗ ಸುಮಾರು 2 ಲಕ್ಷ ವೀಕ್ಷಣೆ ದಾಖಲಿಸಿದೆ.

‘ಒಂದು ದೊಡ್ಡ ಊರು. ಆ ಊರಿನ ತುಂಬ ಕತ್ತಲಿತ್ತು. ಆ ಕತ್ತಲಲ್ಲಿ ಒಬ್ಬ ರಾಜ ಬೆಳಕನ್ನು ಹುಡ್ಕೊಂಡು ಹೋಗ್ತಿದ್ದ..’ ಅನ್ನೋ ಇಂಟರೆಸ್ಟಿಂಗ್‌ ಸಾಲಿನ ಮೂಲಕ ಶುರುವಾಗೋ ಟ್ರೇಲರ್‌ ರೌಡಿಸಂ ಕತೆಯನ್ನು ಹೊಸದಾಗಿ ನಿರೂಪಿಸೋ ಹಾಗೆ ಕಾಣುತ್ತೆ.

ಸ್ಯಾಂಡಲ್‌ವುಡ್ ಒತ್ತಡಕ್ಕೆ ಮಣಿದ ಸರ್ಕಾರ: ಥಿಯೇಟರ್ ಹೌಸ್ ಫುಲ್‌ಗೆ ಅನುಮತಿ

‘ಸಿನಿಮಾದ ಪೂರ್ತಿ ಸ್ಕಿ್ರಪ್ಟ್‌ ರೆಡಿಯಾಗ್ತಿದ್ದದ್ದೇ ಸೆಟ್‌ನಲ್ಲಿ. ಹಾಗಾಗಿ ಇದು ಸಿದ್ಧ ಮಾದರಿಯ ಸಿನಿಮಾ ಅಲ್ಲ. ಬದಲಿಗೆ ಕ್ರಾಫ್ಟ್‌ವರ್ಕ್ ಥರ ಇಡೀ ಸಿನಿಮಾವನ್ನು ಹೆಣೆದಿದ್ದೇವೆ. ಡಾರ್ಕ್ ಕಾಮಿಡಿಯಲ್ಲಿ ರೌಡಿಸಂ ಕತೆ ಹೇಳ್ತೇವೆ’ ಅಂದರು ರಿಷಿಕೇಶ್‌.

ಅವರು ಈ ಸಿನಿಮಾದ ನಿರ್ದೇಶಕ ಕಮ್‌ ಸಿನಿಮಟೋಗ್ರಾಫರ್‌. ಕತೆ, ಚಿತ್ರಕತೆಯೂ ಇವರದೇ. ತಮ್ಮ ಕಲಾಕೃತಿಗಾಗಿ ರಾಷ್ಟ್ರಮಟ್ಟದ ಬಹುಮಾನ ಪಡೆದ ಕಲಾವಿದನೂ ಹೌದು. ಆ ಕಾರಣಕ್ಕೋ ಏನೋ ಟ್ರೇಲರ್‌ ಕೆಲವೆಡೆ ಅಸಂಗತ ಆರ್ಟ್‌ಪೀಸ್‌ ಥರ ಕಾಣುತ್ತೆ.

ರೊಚ್ಚಿಗೆದ್ದ ಹೆಣ್ಣಿನ ಪಾತ್ರದಲ್ಲಿ ಅನನ್ಯಾ ಭಟ್‌

ನ್ಯೂಸ್‌ ರೀಡರ್‌ ಆಗಿದ್ದ ಪ್ರಮೋದ್‌ ಬೋಪಣ್ಣ ಈ ಸಿನಿಮಾದ ಹೀರೋ. ಅನಿತಾ ಭಟ್‌ ಲೀಡ್‌ ಪಾತ್ರದಲ್ಲಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ಮೇಕಪ್‌ಲೆಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಮಯೂರ್‌ ಪಟೇಲ್‌ ಸೂಪರ್‌ ಕಾಪ್‌ ಆಗಿದ್ದಾರೆ. ಉಮೇಶ್‌ ಬಣಕಾರ್‌ ಮುಖ್ಯ ಪಾತ್ರದಲ್ಲಿದ್ದಾರೆ. ಆರ್‌ವಿಎಸ್‌ ಪ್ರೊಡಕ್ಷನ್‌ನಲ್ಲಿ ಬನಾನಾ ಶಿವರಾಮ್‌ ಚಿತ್ರ ನಿರ್ಮಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!