
ದರ್ಶನ್-ಧನ್ವೀರ್ ಭೇಟಿ.. ಕುತೂಹಲ ಕೆರಳಿಸಿದ ಕೂಚಿಕೂ ಭೇಟಿ!
Darshan Thoogudeepa-Dhanveer Gowda Meet: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ಇಂದು, 28 ಜುಲೈ 2026ರಂದು ನಟ ದರ್ಶನ್ ಆಪ್ತ ಸ್ನೇಹಿತ, ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ಅವರು ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಈ ಮೊದಲು ಕೂಡ ಧನ್ವೀರ್ ಅವರು ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದರು.
ನಟ ಹಾಗೂ ತಮ್ಮ ಆಪ್ತ ದರ್ಶನ್ ಅವರನ್ನು ಭೇಟಿಯಾಗಲು ಇಂದು ನಟ ಧನ್ವೀರ್ ಗೌಡ ಅವರು ಒಂಟಿಯಾಗಿಯೇ ಬಂದಿದ್ದಾರೆ. ಅವರ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಾಗಲೀ ಅಥವಾ ಬೇರೆ ಸ್ನೇಹಿತರಾಗಲೀ ಬಂದಿಲ್ಲ. ಸಿಕ್ಕ ಮಾತುಕತೆ ಪ್ರಕಾರ- ನಟ ದರ್ಶನ್ ನೋಡಿ ಧನ್ವೀರ್ ಹಾಗೂ ಧನ್ವೀರ್ ನೋಡಿ ದರ್ಶನ್ ಪರಸ್ಪರ ಸಹಜವಾಗಿಯೇ ಖುಷಿಯಾಗಿದ್ದಾರೆ, ಕಣ್ಣೀರಾಗಿದ್ದಾರೆ. ಪ್ರೊಟೋಕಾಲ್ ಪಾಲನೆಯಲ್ಲೇ ಮಾತನ್ನಾಡಿದ ಈ ಇಬ್ಬರು ಸ್ನೇಹಿತರು ಹಾಗೂ ಸ್ಯಾಂಡಲ್‌ವುಡ್ ನಟರು, ತಮ್ಮ ಮಾತುಕತೆ ವೇಳೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಜೀವನದಲ್ಲಿ ಉಂಟಾಗಿರುವ ಈ ಅನಿರೀಕ್ಷಿತ ಆಘಾತಕ್ಕೆ ಸಹಜವಾಗಿಯೇ ಈ ಇಬ್ಬರಲ್ಲೂ ಆತಂಕ ಇದ್ದೇ ಇದೆ. 'ನಟ ದರ್ಶನ್ ಬಿಡುಗಡೆ ಯಾವಾಗ?' ಎಂಬ ಪ್ರಶ್ನೆ ಸಹಜವಾಗಿಯೇ ಈ ಇಬ್ಬರನ್ನೂ ಕಾಡುತ್ತಿದೆ.
ನಟ ದರ್ಶನ್ ಹಾಗೂ ಧನ್ವೀರ್ ಗೌಡ ಮಾತುಕತೆಯಲ್ಲಿ ನಿಖರವಾಗಿ ಚರ್ಚೆಯಾದ ಸಂಗತಿ ಯಾವುದೆಂದು ಅವರಿಬ್ಬರನ್ನು ಬಿಟ್ಟು ಉಳಿದವರಿಗೆ ಗೊತ್ತಾಗುವಂಥದ್ದು ಏನೂ ಇಲ್ಲ. ಸಹಜವಾಗಿಯೇ ಅದು ಸ್ನೇಹಿತರ ಭೇಟಿ. ಜೈಲಿನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಬಿಡುಗಡೆ ಬಗ್ಗೆ, ಆ ನಿಟ್ಟಿನಲ್ಲಿ ಹುಡುಕಬಹುದಾದ ದಾರಿಗಳ ಬಗ್ಗೆ ಮಾತುಕತೆ ಆಗಿರಬಹುದು. ಅದರಲ್ಲಿ ಹೊರಜಗತ್ತಿಗೆ ಹೇಳುವಂಥದ್ದು ಏನಿದೆ? ಹೀಗಾಗಿ ಸದ್ಯಕ್ಕೆ ನಟ ಧನ್ವೀರ್ ಗೌಡ ಇಂದು ಪರಪ್ಪನ ಅಗ್ರಹಾರಕ್ಕೆ ಒಂಟಿಯಾಗಿ ಹೋಗಿ ಒಂಟಿಯಾಗಿ ಬಂದಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಆ ಸುದ್ದಿಯೀಗ ವೈರಲ್ ಆಗಿದೆ.
ಒಟ್ಟಿನಲ್ಲಿ, ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್ ಅವರ ಕ್ಲೋಸ್ ಸರ್ಕಲ್‌ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೇಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ ‘ಸ್ನೇಹವೆಂದರೆ ಸ್ನೇಹ, ಪ್ರೀತಿ ಎಂದರೆ ಪ್ರೀತಿ-ನಮ್ಮಿಬ್ಬರ ನಡುವಿನ ಗೌರವಾದರ ಹಾಗೇ ಇದೆ’ ಎಂಬುದನ್ನು ಈ ಮೂಲಕ ಜಗತ್ತಿಗೆ ಹೇಳಿದ್ದಾರೆ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.