ಇದು ಜೋಡೆತ್ತು ಕಥೆ.. ಜೈಲಲ್ಲೂ ದರ್ಶನ್‌ಗೆ 'ಯಶ್‌' ಯೋಚ್ನೆನಾ? ರಕ್ಷಿತಾ ಬಳಿ 'ದಾಸ' ಕೇಳಿ ಪಡೆದ ಉತ್ತರವೇನು?

Published : Jul 28, 2026, 12:23 PM IST
Rakshitha Pream Darshan Yash

ಸಾರಾಂಶ

‘ಜೈಲಿನಲ್ಲಿ‌ ಇದ್ರೂ, ಯಾವಾಗ ಏನ್ ಆಗುತ್ತೋ ಅನ್ನೋ ಆತಂಕದ ನಡುವೆಯೂ ದರ್ಶನ್ ಸಿನಿಮಾ‌ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಸಿನಿಮಾ ಮಾಡಲ್ಲ, ಚಿತ್ರರಂಗದಿಂದ ದೂರ ಇರ್ತಾರೆ‌. ರಾಜಕೀಯಕ್ಕೆ ಹೋಗ್ತಾರೆ ‌ಹೀಗೆ ಹತ್ತು ಹಲವು ಅಯಾಮಗಳಲ್ಲಿ ಚರ್ಚೆ ಆಗ್ತಿದೆ’.. ಏನಿದು ಸ್ಟೋರಿ ನೋಡಿ..

ದರ್ಶನ್ ಜೈಲಿಂದ ಹೊರಗೆ ಬರೋ ಆಶಾ ಭಾವನೆ ಕಳೆದುಕೊಂಡಿಲ್ವಂತೆ!

ಕೊಲೆ ಆರೋಪದಲ್ಲಿ ನಟ ದರ್ಶನ್ (Darshan Thoogudeepa) ಜೈಲು ಸೇರಿ ಎರಡು ವರ್ಷಗಳು ಕಳೆದಿವೆ. ದರ್ಶನ್ ಜೈಲು ಸೇರಿದ ಬೆನ್ನಲ್ಲೆ ಸಾಕಷ್ಟು ಸಿನಿಮಾಗಳು ಕೈ ಬಿಟ್ಟು ಹೋಗಿವೆ. ಈ ಕೇಸ್ ನಲ್ಲಿ ದರ್ಶನ್ ಹೊರಗೆ ಬರ್ತಾರೆ ಇಲ್ವೋ ಅನ್ನೋದು ಯಾರಿಗೂ ತಿಳಿತಿಲ್ಲ. 'ಆದ್ರೆ ದರ್ಶನ್ ಜೈಲಿನಲ್ಲಿದ್ರು ನಂಬಿಕೆ ಕಳೆದುಕೊಂಡಿಲ್ಲ. ಜೊತೆಗೆ ಜೈಲಿನಲ್ಲಿದ್ರು ದಾಸನ ಸಿನಿಮಾ ಪ್ರೀತಿ ಕಮ್ಮಿಯಾಗಿಲ್ಲ. ತನ್ನನ್ನ ನೋಡಲು ಹೋದವರ ಬಳಿ ದಾಸ ಕೇಳೋದು ಚಿತ್ರರಂಗದ ಏನಾಗಿದೆ ಅನ್ನೋ ಪ್ರಶ್ನೆಯಂತೆ. ಅಷ್ಟೆ ಅಲ್ಲ ಯಶ್ (Yash) ನಟನೆಯ ಟಾಕ್ಸಿಕ್ ಸಿನಿಮಾ ಬಗ್ಗೆಯೂ ದಾಸ ವಿಚಾರಿಸ್ತಾರಂತೆ'.. ಈ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ..

ಜೈಲಿನಲ್ಲಿದ್ರೂ ನಟ ದರ್ಶನ್ ಗೆ ಕನ್ನಡ ಚಿತ್ರರಂಗದ್ದೇ ಚಿಂತೆ..!

ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿ ಎರಡು ವರ್ಷ ಆಗಿದೆ. ಈ ಕೊಲೆ ಆರೋಪದಿಂದ ಅದ್​ ಹೇಗೆ ಮುಕ್ತಿ ಪಡಿತಾರೋ ಗೊತ್ತಿಲ್ಲ. ಆದ್ರೆ ಜೈಲಿನಲ್ಲಿರೋ ದರ್ಶನ್ ತನ್ನ ವೃತ್ತಿ ಜೀವನದ ಬಗ್ಗೆ ಆಶಾಭಾವನೆ ಕಳೆದುಕೊಂಡಿಲ್ವಂತೆ. ಯಾಕಂದ್ರೆ ದರ್ಶನ್​​ರನ್ನ ಯಾರೇ ನೋಡೋಕೆ ಹೋದ್ರು ಅಲ್ಲಿ ಸಿನಿಮಾರಂಗದ ಆಗು ಹೋಗುಗಳು ನಿರೀಕ್ಷೆ ಇರೋ ಸಿನಿಮಾಗಳ ಬಗ್ಗೆಯೇ ಮಾತಾಡುತ್ತಾರಂತೆ..

ದರ್ಶನ್ ಕನ್ನಡ ಚಿತ್ರರಂಗದ ಬಾಕ್ಸ್ ಅಫೀಸ್ ಸುಲ್ತಾನ್ ... ದರ್ಶನ್ ಕಾಲ್ ಶೀಟ್ ಸಿಕ್ರೆ ಸಾಕು ಅಂತ ನಿರ್ಮಾಪಕರು ಕ್ಯೂ ನಿಂತ ದಿನವೂ ನೋಡಿದ್ದೀವಿ.. ಅದ್ರೆ ದರ್ಶನ್ ಮಾಡಿಕೊಂಡ ಎಡವಟ್ಟಿಗೆ ಇಂದು ಜೈಲು ಸೇರಿದ್ದಾರೆ. ಆದ್ರೆ ಜೈಲಿನಿಲ್ಲಿದ್ರೂ ದಾಸನಿಗೆ ಚಿತ್ರರಂಗದ್ದೇ ಚಿಂತೆಯಂತೆ..

ಚಿತ್ರರಂಗದ ಮೇಲೆ ದಾಸನ ಪ್ರೀತಿ.. ಆಪ್ತರ ಬಳಿ ಹಂಚಿಕೊಂಡ ರಕ್ಷಿತಾ..!

ದರ್ಶನ್ ಬದುಕು ಕೊಟ್ಟಿದ್ದ ಬಣ್ಣದ ಜಗತ್ತಿನ ಬಗ್ಗೆ ಎಷ್ಟು ಚಿಂತಿಸುತ್ತಿದ್ದಾರೆ ಅನ್ನೋದನ್ನ ದರ್ಶನ್​ಅವರನ್ನ ಮೊನ್ನೆಯಷ್ಟೆ ಜೈಲಿನಲ್ಲಿ ಭೇಟಿ ಆದ ನಟಿ ರಕ್ಷಿತಾ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಹೌದು ದರ್ಶನ್ ಜೈಲಿನಲ್ಲಿ ಇದ್ರು ಕನ್ನಡ ಚಿತ್ರರಂಗದ ಮೇಲಿನ ಅಭಿಮಾನ ಕನ್ನಡ ಸಿನಿಮಾಗಳ ಮೇಲಿನ‌ ಪ್ರೀತಿ ಕಮ್ಮಿಯಾಗಿಲ್ಲ. ಇತ್ತೀಚಿನ ದರ್ಶನ್ ರನ್ನ ಸ್ನೇಹಿತೆ ರಕ್ಷಿತಾ ಪ್ರೇಮ್ ಭೇಟಿ ಆಗಿದ್ರು. ಈ ವೇಳೆ ದರ್ಶನ್ ಆತ್ಮೀಯರ ಅರೋಗ್ಯ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದರ ಜೊತೆಗೆ ಕನ್ನಡ ಸಿನಿಮಾಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಯಶ್​ರ ಟಾಕ್ಸಿಕ್​ಸಿನಿಮಾ​ಬಗ್ಗೆ ಮಾತನಾಡಿದ ದರ್ಶನ್; ಟಾಕ್ಸಿಕ್ ಬಿಡುಗಡೆ ಬಗ್ಗೆ ದರ್ಶನ್ ಗೆ ಮಾಹಿತಿ ಕೊಟ್ಟ ರಕ್ಷಿತಾ

ಹೌದು, ನಟ ದರ್ಶನ್ ಹಾಗು ಯಶ್​ಜೋಡೆತ್ತುಗಳು ಅಂತಲೇ ಫೇಮಸ್! ಸುಮಲತಾ ಎಲೆಕ್ಷನ್ ಗೆಲುವಿನಲ್ಲಿ ಇಬ್ಬರು ಜೋಡೆಂತಿನಂತೆ ದುಡಿದು ಗೆಲ್ಲಿಸಿದ್ರು. ಸುಮಲತಾ ಬರ್ತ್​ಡೇ ಪಾರ್ಟಿಯಲ್ಲೂ ಈ ಇಬ್ಬರೂ ಒಟ್ಟೊಟ್ಟಿಗೆ ಇದ್ರು. ಅಂಬರೀಶ್​ರ ಆಪ್ತ ಬಳಗದಲ್ಲಿ ಇಬ್ಬರೂ ಇದ್ದವರು. ಅದರಲ್ಲೂ ನಟ ದರ್ಶನ್ ಯಶ್​ಗೆ ಹೀರೋ ಅಂತಲೇ ಕರೀತಾ ಇದ್ರು.. ಈಗ ಈ ಹೀರೋನಾ ಟಾಕ್ಸಿಕ್ ಸಿನಿಮಾ ಬರ್ತಾ ಇದೆ. ಈ ಸಿಮಾ ಬಗ್ಗೆಯೂ ರಕ್ಷಿತಾ ಬಳಿ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರಂತೆ..

ರಕ್ಷಿತಾ ಜೊತೆ ಕುಶಲೋಪರಿ ಮಾತಾಡ್ತಿದ್ದ ದರ್ಶನ್ ಯಶ್​ರ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಯ್ತಾ ಅಂತ ಕೇಳಿದ್ರಂತೆ. ಅಷ್ಟೆ ಅಲ್ಲ ಡಾಲಿ ಧನಂಜಯ ಅಭಿನಯಿಸಿ ನಿರ್ಮಾಣ ಮಾಡಿರುವ 'ಮದರ್ ಪ್ರಾಮಿಸ್' ಸಿನಿಮಾ ಗೆಲ್ತಾ ಅಂತೆಲ್ಲಾ ಧನಂಜಯ್​ಬಗ್ಗೆಯೂ ವಿಚಾರಿಸಿದ್ರಂತೆ. ಆ ಚಿತ್ರಕ್ಕೆ ಒಳ್ಳೆದಾಗಬೇಕು ಅಂದ್ರಂತೆ. ಕನ್ನಡ ಸಿನಿಮಾಗಳು ಚೆನ್ನಾಗಿ ಓಡಬೇಕು, ಕನ್ನಡ ಚಿತ್ರರಂಗಕ್ಕೆ ಒಳ್ಳೆಯಾಗಬೇಕು ಎಂದು ಭಾವುಕರಾಗಿ ಮಾತನಾಡಿದ್ರಂತೆ.

ಜೈಲಿನಲ್ಲಿ‌ ಇದ್ರೂ ಯಾವಾಗ ಏನ್ ಆಗುತ್ತೆ ಅನ್ನೋ ಆತಂಕದ ನಡುವೆಯೂ ದರ್ಶನ್ ಸಿನಿಮಾ‌ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಸಿನಿಮಾ ಮಾಡಲ್ಲ, ಚಿತ್ರರಂಗದಿಂದ ದೂರ ಇರ್ತಾರೆ‌. ರಾಜಕೀಯಕ್ಕೆ ಹೋಗ್ತಾರೆ ‌ಹೀಗೆ ಹತ್ತು ಹಲವು ಅಯಾಮಗಳಲ್ಲಿ ಚರ್ಚೆ ಆಗ್ತಿದೆ. ಅದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ದರ್ಶನ್ ಮನಸ್ಥಿತಿ ಸಿನಿಮಾ ಬಿಟ್ಟು ಬೇರೇನೂ ಬಯಸ್ತಿಲ್ಲ ಅನ್ನೋ ವಿಚಾರ ರಕ್ಷಿತಾರಿಂದ ರಿವಿಲ್ ಆಗಿದೆ.

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮತ್ತೊಮ್ಮೆ ಲವರ್‌ಬಾಯ್‌ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ
ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಅಮೃತಾ ಅಯ್ಯಂಗಾರ್! ನಟಿ ವಯಸ್ಸೆಷ್ಟು?