ದರ್ಶನ್‌ಗೇ ಚಾಲೆಂಜ್.. ಬೇಲ್‌ಗಾಗಿ ಪದೇ ಪದೇ ಅರ್ಜಿ ಹಾಕ್ತಿದ್ರೂ 'ವಜಾ' ಆಗ್ತಿರೋದ್ಯಾಕೆ?

Published : Jul 06, 2026, 10:00 PM IST
Darshan Thoogudeepa Renukaswamy

ಸಾರಾಂಶ

ದಾಸ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಹೋಗುವ ಮೊದಲೇ ರಿಜೆಕ್ಟ್ ಆಗಿದೆ. ಈ ಪ್ರಕರಣದ ಟ್ರಯಲ್ ಅನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.

ಸ್ಯಾಂಡಲ್​ವುಡ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ಪಟ್ಟಕ್ಕೇರಿದ್ದ ದರ್ಶನ್ (Darshan Bail), ನನಗೆ ಚಾಲೆಂಜ್ ಹಾಕೋರು ಯಾರು ಇಲ್ಲ ಅಂತ ಮರೆಯುತ್ತಿದ್ರು. ಅದು ರೀಲ್​ಮೇಲೆ ಮಾತ್ರ. ಆದ್ರೆ ರಾಯಲ್ ಆಗಿರಬೇಕಿದ್ದ ದಾಸನ ರಿಯಲ್ ಲೈಫ್​ನಲ್ಲಿ ಎದುರಾಗಿರೋ ಚಾಲೆಂಜ್​ಗಳು ಒಂದೆರೆಡಲ್ಲ. ಬೇಲ್ ಪಡೆದು ಜೈಲಿನಿಂದ ಹೊರ ಬರೋದಕ್ಕೆ ಮತ್ತೆ ಮತ್ತೆ ಪ್ರಯತ್ನ ಪಟ್ಟರೂ ದರ್ಶನ್ ಡಿಬಾರ್ ಆಗುತ್ತಿದ್ದಾರೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.

ನಟ ದರ್ಶನ್ ಬದುಕು ಕೊಲೆ ಆರೋಪದ ಬವಣೆಯಲ್ಲೇ ಬಳಲಿ ಬೆಂಡಾಗಿದೆ. ಪರಪ್ಪನ ಅಗ್ರಹಾರ ಜೈಲು ದಾಸನ ಆವಾಸ ಸ್ಥಾನ ಆಗಿ ಎರಡು ವರ್ಷ ಆಗುತ್ತಿದೆ. ಜೈಲು ಹಕ್ಕಿ ಆಗಿರೋ ಸ್ಯಾಂಡಲ್​ವುಡ್​ನ ಈ ಬಣ್ಣದ ಹಕ್ಕಿ ಈಗ ಹೊರ ಬರೋದಕ್ಕೆ ಏನೆಲ್ಲಾ ದಾರಿಗಳಿವೆಯೋ ಎಲ್ಲವನ್ನೂ ಹುಡುಕುತ್ತಿದ್ದಾರೆ.

ಬೇಲ್​​ಗಾಗಿ ಪದೇ ಪದೇ ಅರ್ಜಿ.. ದರ್ಶನ್ ಡಿಬಾರ್.!

ದಾಸನ ಅರ್ಜಿ.. ನ್ಯಾಯ ಪೀಠಕ್ಕೆ ಯೋಗ್ಯವಲ್ಲ ಎಂದ ರಿಜಿಸ್ಟರ್..!

ಹೌದು, ನಟ ದರ್ಶನ್ ಬೇಲ್ ಪಡೆಯೋಕೆ ಸುಪ್ರಿಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಆದ್ಮೇಲೆ ಇನ್ನೊಂದು ವರ್ಷದಲ್ಲಿ ಈ ಕೊಲೆ ಪ್ರಕರಣದ ವಿಚಾರಣೆ ಮುಗಿಸಿ ಅಂತ ಸುಪ್ರೀಂ ಕೋರ್ಟ್​ ನ್ಯಾಯಪೀಠ ಹೇಳಿತ್ತು. ಆದ್ರೆ ಈ ಆದೇಶದಲ್ಲಿ ಪ್ರಕರಣ ಸ್ವರೂಪ, ವಿಚಾರಣೆಯ ಅವಧಿಯಲ್ಲಿ ಒಂದಷ್ಟು ಮಾರ್ಪಾಡು ತರಬೇಕೆಂದು ಅಂತ ದರ್ಶನ್ ಪರ ವಕೀಲರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ರು. ಅಲ್ಲೂ ಈಗ ದಾಸನಿಗೆ ಶಾಕ್ ಆಗಿದೆ.

ದಾಸ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಹೋಗುವ ಮೊದಲೇ ರಿಜೆಕ್ಟ್ ಆಗಿದೆ. ಈ ಪ್ರಕರಣದ ಟ್ರಯಲ್ ಅನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ, ಆ ಸಂದರ್ಭದಲ್ಲಿ ಮತ್ತೆ ಜಾಮೀನಿಗೆ ಸಂಬಂಧಿಸಿದಂತೆ ದರ್ಶನ್ ಅರ್ಜಿ ಸಲ್ಲಿಸಬಹುದೆಂಬ ಅವಕಾಶವನ್ನೂ ಸೂಚಿಸಿತ್ತು. ಆದರೂ ದಾಸ ಮತ್ತೆ ಅರ್ಜಿ ಸಲ್ಲಿಸಿದ್ದು ಆ ಅರ್ಜಿ

ಕೋರ್ಟ್ ನಲ್ಲಿ ಡಿಬಾರ್ ಆಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳು ನೇರವಾಗಿ ನ್ಯಾಯಮೂರ್ತಿಗಳ ಮುಂದೆ ಹೋಗುವುದಿಲ್ಲ. ಮೊದಲು ರಿಜಿಸ್ಟ್ರಾರ್ ಹಂತದಲ್ಲಿ ಅವುಗಳ ತಾಂತ್ರಿಕ ಹಾಗೂ ಕಾನೂನುಪರ ಪರಿಶೀಲನೆ ನಡೆಯುತ್ತದೆ. ಅರ್ಜಿಯಲ್ಲಿ ತುರ್ತು, ಗಂಭೀರ ಅಥವಾ ಮರುಪರಿಶೀಲನೆಗೆ ಅಗತ್ಯವಾದ ಅಂಶಗಳಿದ್ದರೆ ಮಾತ್ರ ಅದು ನ್ಯಾಯ ಪೀಠಕ್ಕೆ ವಿಚಾರಣೆಗೆ ಬರುತ್ತೆ. ದರ್ಶನ್ ಸಲ್ಲಿಸಿದ್ದ ಅರ್ಜಿಯಲ್ಲಿ ಅಂತಹ ವಿಶೇಷ ಅಂಶಗಳಿಲ್ಲ ಹಿನ್ನೆಲೆ ಪೀಠದ ಮುಂದೆ ಇಡದೇ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ. ಒಟ್ನಲ್ಲಿ ದಾಸ ಪರಪ್ಪನ ಅಗ್ರಹಾರ ಬಾಹುಬಂಧನಲ್ಲಿ ಇನ್ನೊಂದು ವರ್ಷ ಗಟ್ಟಿಯಾಗಿ ಇರಬೇಕಿದೆ.

ಹೆಚ್ಚಿನ ಮಾಹಿತಿಗಾಗಿ 'ಸಿನಿಮಾ ಹಂಗಾಮ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡೈರೆಕ್ಟರ್‌ಗೆ ಹೆದರಿ ಹಲೋ-ಹಾಯ್ ಬಿಟ್ಟರೆ ಮಾತೇ ಇರಲಿಲ್ಲ: ಸಮಂತಾ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ ಸುದೀಪ್
ಕನ್ನಡದ 'ಮಹಾಕವಿ'ಗೆ ಜಾಗತಿಕ ಮನ್ನಣೆ: ಹಾಲಿವುಡ್ ಚಿತ್ರೋತ್ಸವದಲ್ಲಿ ಬರಗೂರರ ಸಿನಿಮಾ