ಶೆಡ್‌ನಲ್ಲಿ ಕೂಡಿಹಾಕಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಡುವಾಗ ನಟ ದರ್ಶನ್ ಹೇಳಿದ್ದೇನು?

By Contributor Asianet  |  First Published Jun 12, 2024, 12:18 PM IST

ಯಾವಾಗ ರೇಣುಕಾಸ್ವಾಮಿ ಸಾವು ಸಂಭವಿಸಿತೋ ಆಗ ನಟ ದರ್ಶನ್‌ಗೆ ಸುದ್ದಿ ಮುಟ್ಟಿಸಿ ಎಲ್ಲರೂ ಗಾಬರಿಯಾಗಿದ್ದಾರೆ. ತಕ್ಷಣ ಅವರದೇ ಆದ ರೀತಿಯಲ್ಲಿ ಪ್ಲಾನ್ ಮಾಡಿ ದರ್ಶನ್ ಅವರನ್ನು ಈ ಕೇಸಿನಿಂದ ಪಾರು ಮಾಡಲು ನಿರ್ಧರಿಸಿ..


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಇರುವುದು ಗೊತ್ತಿದೆ. ಕೊಲೆ ಕೇಸಿನ ಮುಖ್ಯ ಆರೋಪಿ ಹಾಗೂ ನಟ ದರ್ಶನ್ ಸ್ನೇಹಿತೆ ನಟಿ ಪವಿತ್ರಾ ಗೌಡ ಕೂಡ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟೂ 13 ಜನರನ್ನು ಪೊಲೀಸ್ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಅಲ್ಲಿ ದರ್ಶನ್ ಪೊಲೀಸರ ಮುಂದೆ ಹೇಳಿರುವುದು ಅಂದುಕೊಂಡಿದ್ದೇ ಒಂದು, ಆಗಿದ್ದೇ ಮತ್ತೊಂದು ಎಂದು. ಆದರೆ ಅದು ನಿಜವೇ? ದರ್ಶನ್ ಕಾಂಟ್ರೋವರ್ಸಿಗಳನ್ನು ನೋಡಿದರೆ ಅವರ ಮಾತನ್ನು ನಂಬಲು ಸಾಧ್ಯವೇ? 

ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಪದೇಪದೇ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ರೇಣುಕಾ ಸ್ವಾಮಿಗೆ ಬುದ್ಧಿ ಕಲಿಸಲೆಂದು ಅವನನ್ನು ಕಿಡ್ನಾಪ್ ಮಾಡಿಸಿಕೊಂಡು ಕರೆತಂದಿದ್ದರು. ಶೆಡ್ ಒಂದರಲ್ಲಿ ಕೂಡಿ ಹಾಕಿಟ್ಟುಕೊಂಡು, ಪವಿತ್ರಾ ಗೌಡ ಎದುರಿಗೇ ಅವನಿಗೆ ದರ್ಶನ್ ಸೇರದಂತೆ 12 ಜನರ ಟೀಮ್ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದೆ. ಸ್ವಲ್ಪ ಹೊತ್ತಿನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಶೆಡ್‌ನಿಂದ ಹೊರಟು ಹೋಗಿದ್ದಾರೆ. ಉಳಿದವರು ರೇಣುಕಾ ಸ್ವಾಮಿ ಬಳಿಯೇ ಇದ್ದಾರೆ. ಅವರೆಲ್ಲ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ.

Tap to resize

Latest Videos

ರಿಯಲೀ ಅದೊಂದೇ ಕಾರಣ, ನಮ್ಮಿಬ್ಬರ ಡಿವೋರ್ಸ್‌ಗೆ ಮತ್ತೇನೂ ಕಾರಣವಿರಲಿಲ್ಲ; ಚಂದನ್ ಶೆಟ್ಟಿ

ಆದರೆ, ನಟ ದರ್ಶನ್ ಪೊಲೀಸ್ ವಿಚಾರಣೆ ವೇಳೆ ಹೇಳಿರುವಂತೆ, ಹೋಗುವ ಮೊದಲು 'ಇನ್ನು ಹೀಗೆಲ್ಲಾ ಮಾಡ್ಬೇಡ' ಎಂದು ಬುದ್ಧಿ ಹೇಳಿ, ಉಳಿದವರ ಬಳಿ ಅವನಿಗೆ ಊಟ ಕೊಟ್ಟು ಊರಿಗೆ ಕಳಿಸಿ' ಎಂದು ಹೇಳಿ ಹೋಗಿದ್ದಾರಂತೆ. ಆದರೆ, ಯಾವಾಗ ದರ್ಶನ್ ಹೊರಟುಹೋದರೋ ಆಗ ಉಳಿದವರು ರೇಣುಕಾ ಸ್ವಾಮಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಮನಸೋ ಇಚ್ಛೆ ಥಳಿಸಿ, ಆತನ ಮರ್ಮಾಂಗಕ್ಕೆ ಒದೆ ಕೊಟ್ಟಿದ್ದಾರೆ. ಬೀಳಬಾರದ ಜಾಗಕ್ಕೆ ಪೆಟ್ಟು ಬಿದ್ದಿದ್ದೇ ತಡ, ರೇಣುಕಾ ಸ್ವಾಮಿ ಪ್ರಾಣಪಕ್ಷಿ ಹಾರಿಹೋಗಿದೆ. 

ಕೋಟಿ ಚಿತ್ರದ ತಾರಾಬಳಗ ಹೇಳ್ತಿರೋದೇನು? ಸತ್ಯ ಗೊತ್ತಾಗೋದಕ್ಕೆ ಕೆಲವೇ ದಿನ ಬಾಕಿ!

ಯಾವಾಗ ರೇಣುಕಾಸ್ವಾಮಿ ಸಾವು ಸಂಭವಿಸಿತೋ ಆಗ ನಟ ದರ್ಶನ್‌ಗೆ ಸುದ್ದಿ ಮುಟ್ಟಿಸಿ ಎಲ್ಲರೂ ಗಾಬರಿಯಾಗಿದ್ದಾರೆ. ತಕ್ಷಣ ಅವರದೇ ಆದ ರೀತಿಯಲ್ಲಿ ಪ್ಲಾನ್ ಮಾಡಿ ದರ್ಶನ್ ಅವರನ್ನು ಈ ಕೇಸಿನಿಂದ ಪಾರು ಮಾಡಲು ನಿರ್ಧರಿಸಿ ಮುಂದಿನ ಕೆಲಸ ಮಾಡಿದ್ದಾರೆ. ಆದರೆ, ಯಾವುದೂ ವರ್ಕೌಟ್ ಆಗಿಲ್ಲ, ಕೇಸ್‌ ವಿಚಾರಣೆ ವೇಳೆ ದರ್ಶನ್ ಸೇರಿದಂತೆ ಎಲ್ಲರೂ ಸಿಕ್ಕಿಹಾಕಿಕೊಂಡಿದ್ದಾರೆ. ಆರು ದಿನಗಳು ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳಾಗಿ ವಿಚಾರಣೆ ಎದುರಿಸಬೇಕಾಗಿದೆ. ಕಾನೂನು ಪ್ರಕಾರ ಮುಂದಿನ ಶಿಕ್ಷೆ ಆಗಲಿದೆ. 

ಮಾಲಾಶ್ರೀ ಮೇನಿಯಾಗೆ ಫುಲ್ ಸ್ಟಾಪ್ ಹಾಕಿದ್ಯಾರು; ಕನಸಿನ ರಾಣಿ ತೆರೆಮರೆಗೆ ಸರಿತಾರಾ?

click me!