ನಟ ಅಹಿಂಸಾ ಚೇತನ್ ಅವರು ಮುಖ್ಯಮಂತ್ರಿ ಅವರಿಗೆ ಸಿಎಂ ಸೋಮಾರಿ ಸಿದ್ದು ಎಂದು ಹೀಗಳೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರು (ಮೇ 19): ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಒಂದು ವರ್ಷ ಆಟಳಿತ ಪೂರ್ಣಗೊಳಿಸಿದ ಸಂತಸದಲ್ಲಿದ್ದರೆ ಮತ್ತೊಂದೆಡೆ ನಟ ಅಹಿಂಸಾ ಚೇತನ್ ಅವರು ಮುಖ್ಯಮಂತ್ರಿ ಅವರಿಗೆ ಸಿಎಂ ಸೋಮಾರಿ ಸಿದ್ದು ( CM ‘Somari’ (lazy) Siddu) ಎಂದು ಹೀಗಳೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಯೊಗೆ ಬಂದಂತೆ ಬೈದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಫೇಸ್‌ಬುಕ್‌ನಲ್ಲಿ 'ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ಗಳಿಗೆ ಬಾಬಾಸಾಹೇಬ್ ಅವರ 'ಅನೀಹಿಲೇಷನ್ ಆಫ್ ಕಾಸ್ಟ್ "ಕೃತಿಯ ಪ್ರತಿಯನ್ನು ಉಡುಗೊರೆಯಾಗಿ ಸಿಎಂ ‘ಸೋಮಾರಿ’ ಸಿದ್ದು ನೀಡಿದ್ದಾರೆ. ಎಷ್ಟು ವಿಪರ್ಯಾಸ.
ಜೈ ಶ್ರೀರಾಮ ಎನ್ನುತ್ತಿದೆ ಸಿದ್ದು ಸರ್ಕಾರ: ಸಿಎಂ ವಿರುದ್ಧ ಹರಿಹಾಯ್ದ ಚೇತನ್
ಅಂಬೇಡ್ಕರ್ ಅವರ ಕಾಲದಲ್ಲಿ ಅವರ ಅತಿದೊಡ್ಡ ರಾಜಕೀಯ ಶತ್ರು ಕಾಂಗ್ರೆಸ್ ಪಕ್ಷ (ರಾಜಕೀಯ ಹಿಂದೂ ಧರ್ಮ); ಇಂದಿನ ಕಾಂಗ್ರೆಸ್ ಪಕ್ಷ (ಅದೇ ಮನುವಾದ) ಅಂಬೇಡ್ಕರ್ ಅವರನ್ನು ಚುನಾವಣಾ ಲಾಭಕ್ಕಾಗಿ ಅಪಹರಿಸಲು ಪ್ರಯತ್ನಿಸುತ್ತಾರೆ. ಗಾಂಧಿಯವರ 36 ಬ್ರಾಹ್ಮಣ್ಯದ ಪುಸ್ತಕಗಳಲ್ಲಿ ಒಂದನ್ನು ಸಿಎಂ ಈ ಇಬ್ಬರು ವಿದ್ಯಾರ್ಥಿಗಳಿಗೆ ನೀಡಬೇಕಿತ್ತು; ಇದು ಸೈದ್ಧಾಂತಿಕವಾಗಿ ಹೆಚ್ಚು ಪ್ರಾಮಾಣಿಕವಾದ ಉಡುಗೊರೆಯಾಗಿರುತ್ತಿತ್ತು' ಎಂದು ಬರೆದುಕೊಂಡಿದ್ದಾರೆ.
ಮುಂದುವರೆದು ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ನಟ ಚೇತನ್ ಕುಮಾರ್ ಅಹಿಂಸಾ ಅವರು, 'ಕಳೆದ ಮೂರು ವಾರಗಳಿಂದ ಪ್ರಧಾನಿ ಮೋದಿ ಮಾಧ್ಯಮಗಳ ಮುಂದೆ ತಮ್ಮನ್ನು ತಾವು ಮೂರ್ಖರನ್ನಾಗಿ ಮಾಡಿಕೊಳ್ಳುತ್ತಿರುವಾಗ, ಸಿ.ಎಂ. ಸಿದ್ದು ಪ್ರಸ್ತುತ ಸ್ನೂಜ್ ಮನಸ್ಥಿತಿಯಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು ಪತ್ರಿಕಾ ಗೋಷ್ಠಿಗಳನ್ನು ನೀಡುವುದು ಮತ್ತು ಅವುಗಳ ಪ್ಯಾಚ್ವರ್ಕ್ 5 ಗ್ಯಾರಂಟಿಗಳನ್ನು ಹೊರತಾಗಿ ಗಣನೀಯವಾಗಿ ಏನನ್ನೂ ಸಾಧಿಸಿಲ್ಲ. 'ಸೋಮಾರಿ ಸಿದ್ದು' ಎಂಬುದು ನಮ್ಮ ಏನೂ ಮಾಡದೇರೋ ಸಿಎಂಗೆ ಅತ್ಯಂತ ಸೂಕ್ತವಾದ ಹೆಸರು' ಎಂದು ಪುನಃ ಮುಖ್ಯಮಂತ್ರಿಗೆ ಹೀಗಳೆದಿದ್ದಾರೆ.
ಮೊದಲು ಬಿಜೆಪಿ ಹೇಳಿಕೆ ಪ್ರತಿಬಿಂಬಿಸುತ್ತಿದ್ದ ಚೇತನ್:
ಈ ಮೊದಲು ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಟೀಕೆ ಮಾಡಲು ಬಳಸುತ್ತಿದ್ದ ಸೋಮಾರಿ ಸಿದ್ದ ಎಂಬ ಪದವನ್ನು ಉಲ್ಲೇಖ ಮಾಡಿ ಟೀಕೆ ಮಾಡುತ್ತಿದ್ದೆರು. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ.. 'ಮೋದಿಯನ್ನು 'ಕೆಲಸಗಾರ' ಎಂದು ಕರೆದ ಕರ್ನಾಟಕದ ಬಿಜೆಪಿ, ಸಿದ್ದರಾಮಯ್ಯ ಅವರನ್ನು' ಸೋಮಾರಿ' ಎಂದು ಟೀಕಿಸಿದ್ದಾರೆ. ಮೋದಿ ಮತ್ತು ಸಿದ್ದು ಇಬ್ಬರೂ ನಿಷ್ಪರಿಣಾಮಕಾರಿ ನಾಯಕರು- ಒಂದೇ ವ್ಯತ್ಯಾಸವೆಂದರೆ ಮೋದಿ ಅವರಿಗೆ ಮಾಧ್ಯಮಗಳ ಮುಂದೆ ಹೋಗಲು ಧೈರ್ಯವಿಲ್ಲ ಮತ್ತು ಸಿದ್ದರಾಮಯ್ಯ ಅವರಿಗೆ ಪ್ರತಿದಿನ ಕ್ಯಾಮರಾ ಮುಂದೆ ವಾಕ್ಚಾತುರ್ಯವನ್ನು ಹೊರಹಾಕುತ್ತಾರೆ. ಈ ಅಜ್ಞಾನದ ಪ್ರಧಾನಿ ಮತ್ತು ಏನೂ ಮಾಡದ ಮುಖ್ಯಮಂತ್ರಿಯನ್ನು ಬದಲಾಯಿಸಬೇಕು' ಎಂದು ಪೋಸ್ಟ್ ಮಾಡಿದ್ದರು. ಆದರೆ, ಈಗ ನೇರವಾಗಿ ಸೋಮಾರಿ ಸಿದ್ದು ಎಂದು ಟೀಕೆ ಮಾಡಿದ್ದಾರೆ.