ನಟ-ನಿರ್ದೇಶಕ ಉಪೇಂದ್ರ ಮಾತನಾಡುತ್ತ 'ಈ ಚಿತ್ರವನ್ನು ನಾನು ಕೇವಲ ಚಿತ್ರಕತೆಯಲ್ಲಿ ಆಟವಾಡಿದ್ದೇನೆ ಎನ್ನಬಹುದು. ನಿಜವಾಗಿಯೂ ಹೇಳಬೇಕೆಂದರೆ, ಅಂದು ನನ್ನ ಈ ಎ ಸಿನಿಮಾವನ್ನು ನೋಡಿದ ಹಲವರು ನಿಮ್ಮ ಸಿನಿಮಾ ನೋಡಿ..
ರಿಯಲ್ ಸ್ಟಾರ್ ಉಪೇಂದ್ರ ನಟನೆ (Upendra) ಹಾಗೂ ನಿರ್ದೇಶನದ A ಸಿನಿಮಾ ಮತ್ತೆ ರಿಲೀಸ್ ಆಗಿದೆ. ಬರೋಬ್ಬರಿ 25 ವರ್ಷಗಳ ಬಳಿಕ ರೀರಿಲೀಸ್ ಕಂಡಿರುವ ಈ ಚಿತ್ರಕ್ಕೆ ಅಭೂತಪೂರ್ವ ಎನಿಸುವ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾದಲ್ಲಿ ನಟ ಉಪೇಂದ್ರ ಮೊಟ್ಟಮೊದಲ ಬಾರಿಗೆ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಎ ಚಿತ್ರದ ಮರುಬಿಡುಗಡೆ ವೇಳೆ, ಹಲವು ಮಾಧ್ಯಮಗಳ ಸಂದರ್ಶನಗಳಲ್ಲಿ ನಟ ಉಪೇಂದ್ರ ಈ ಚಿತ್ರದ ಬಗ್ಗೆ ಹಾಗೂ ಈಗ ಬರುತ್ತಿರುವ ಒಪಿನಿಯನ್ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ನಟ-ನಿರ್ದೇಶಕ ಉಪೇಂದ್ರ ಮಾತನಾಡುತ್ತ 'A ಚಿತ್ರವನ್ನು ನಾನು ಕೇವಲ ಚಿತ್ರಕತೆಯಲ್ಲಿ ಆಟವಾಡಿದ್ದೇನೆ ಎನ್ನಬಹುದು. ನಿಜವಾಗಿಯೂ ಹೇಳಬೇಕೆಂದರೆ, ಅಂದು ನನ್ನ ಈ ಎ ಸಿನಿಮಾವನ್ನು ನೋಡಿದ ಹಲವರು ನಿಮ್ಮ ಸಿನಿಮಾ ನೋಡಿ ನಮಗೆ ನಟನಾಗಬೇಕು, ನಿರ್ದೇಶಕನಾಗಬೇಕು ಎನಿಸಿದೆ ಅಂದಿದ್ದರು. ಅದು ನನಗೆ ಸಿಕ್ಕ ದೊಡ್ಡ ಬಹುಮಾನ ಎನ್ನಬಹುದು. ಜೊತೆಗೆ, ಹಲವರು ಈ ಸಿನಿಮಾದಲ್ಲಿ ನನ್ನ ನಟನೆಯನ್ನೂ ಒಪ್ಪಿಕೊಂಡು ಹರಿಸಿರುವುದು ಇಂದಿಗೂ ನಾನು ನಟನಾಗಿ ಸಿನಿರಂಗದಲ್ಲಿ ಇರಲು ಸಹಾಯ ಮಾಡಿದೆ.
ಭಾರೀ ಮೊತ್ತಕ್ಕೆ ಸೇಲ್ ಆಯ್ತು ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಡಿಜಿಟಲ್ ರೈಟ್ಸ್!
ಇತ್ತೀಚೆಗೆ, ಎ ಸಿನಿಮಾದ ರೀರಿಲೀಸ್‌ಗೆ ಸಂಬಂಧಿಸಿ ಮಾತನಾಡುತ್ತ ನಟ ಧ್ರುವ ಸರ್ಜಾ, 'ಸರ್, ನಿಮ್ಮ ಎ ಸಿನಿಮಾ ಮತ್ತೆ ಮರುಬಿಡುಗಡೆ ಆಗುತ್ತಿರುವುದು ನಿಜವಾಗಿಯೂ ಸಂತೋಷದ ಸಂಗತಿ. ಹಾಗೇ, ನಿಮ್ಮ ಎಲ್ಲಾ ಸಿನಿಮಾಗಳನ್ನೂ ಸೀಕ್ವೆಲ್ (ಪಾರ್ಟ್ 2) ಮಾಡ್ಬಹುದು, ಮಾಡುವಂತೆ ಎಲ್ಲವೂ ಎಂಡ್ ಆಗಿವೆ' ಅಂದ್ರು. ನಟ ಧ್ರುವ ಸರ್ಜಾರ (Dhruva Sarja) ಅನಿಸಿಕೆಯ ಪ್ರಾಮಾಣಿಕ ಮಾತಿಗೆ ಧನ್ಯವಾದಗಳು. ಹೌದು, ನನ್ನ ಸಿನಿಮಾಗಳ ಮುಂದಿನ ಭಾಗವನ್ನು ಮಾಡಲು ನಾನೂ ಕೂಡ ಉತ್ಸುಕನಾಗಿದ್ದೇನೆ. ಆದರೆ ಅದು ಸಾಧ್ಯವಾಗುವುದು ಯಾವಾಗ ಎಂಬುದೇ ಯೋಚನೆಯಾಗಿದೆ.
ನಮ್ಮಿಬ್ಬರಲ್ಲಿ ಹತ್ತು ವರ್ಷಗಳ ಅಂತರವಿದೆ; ಪ್ರಿಯಾಂಕಾ ಮಾತಿಗೆ ಗುಸುಗುಸು ಶುರುವಾಗಿದ್ದೇಕೆ?
ಏಕೆಂದರೆ, ಸದ್ಯಕ್ಕೆ U/I (ಯು/ಐ)' ಚಿತ್ರದ ಕೆಲಸ ಹಾಗು ಬಿಡುಗಡೆಯ ಪ್ಲಾನ್ ಮಾಡುತ್ತಿದ್ದೇನೆ. ಬಳಿಕ, ನಾನು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ನಟನೆಯ ಶೂಟಿಂಗ್ ಮುಗಿಸಬೇಕಿದೆ. ಅದಾದ ಬಳಿಕವಷ್ಟೇ ನಾನು ನನ್ನ ಹಳೆಯ ಸಿನಿಮಾಗಳ 'ಪಾರ್ಟ್ 2' ಹೊಸ ಸಿನಿಮಾ ನಿರ್ದೇಶನದ ಬಗ್ಗೆ ಯೋಚನೆ, ಯೋಜನೆ ಕೈಗೆತ್ತಿಕೊಳ್ಳಬೇಕು. ಹಾಗೆ ನಾನು ನನ್ನ ಮೊದಲಿನ ಸಿನಿಮಾದ ಸೀಕ್ವೆಲ್ ಮಾಡುವ ಮೊದಲು ನಾನಾ ಆಯಾ ಸಿನಿಮಾದ ಕಾಲಘಟ್ಟದ ಮೆಂಟಾಲಿಟಿಗೆ ಹೋಗಬೇಕು.
ಪವಿತ್ರಾ ಜಯರಾಂಗೆ ನೀನು ಆರನೆಯವನು, ಹೀಗಂತ ಚಂದುಗೆ ಸತ್ಯ ಹೇಳಿದ್ದೆ; ಶಿಲ್ಪಾ ಪ್ರೇಮಾ
ಇವೆಲ್ಲ ಕಾರಣಕ್ಕೆ, ನನ್ನ ಸಿನಿಮಾಗಲಳ ಸೀಕ್ವೆಲ್ ಯೋಜನೆ ಕಾರ್ಯರೂಪಕ್ಕೆ ಬರಲು ಸ್ವಲ್ಪ ತಡವಾಗಬಹುದು' ಎಂದಿದ್ದಾರೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ. ಒಟ್ಟಿನಲ್ಲಿ, ಉಪೇಂದ್ರ ನಟನೆ-ನಿರ್ದೇಶನದ ಎ ಚಿತ್ರವನ್ನು ಈಗಿನ ಜನರೇಶನ್ ಮೊದಲ ಬಾರಿಗೆ ನೋಡಿ ಇಷ್ಟಪಟ್ಟು ಮತ್ತೆಮತ್ತೆ ನೋಡುತ್ತಿದ್ದಾರೆ, ಎಂಜಾಯ್ ಮಾಡುತ್ತಿದ್ದಾರೆ. ದಿನದಿನಕೂ ಎ ಚಿತ್ರವು ಹೆಚ್ಚು ಹೆಚ್ಚು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಕಾಣುತ್ತಿದೆ.