Latest Videos

ಸಿಎಂ ಸಿದ್ದುಗೆ ಬೈದ ಬೆನ್ನಲ್ಲೇ ಮತ್ತೆ ಹಿಂದುತ್ವವನ್ನು ಬೈದು ಪೋಸ್ಟ್ ಮಾಡಿದ ಚೇತನ್ ಅಹಿಂಸಾ!

By Shriram BhatFirst Published May 25, 2024, 3:19 PM IST
Highlights

ಇತ್ತೀಚೆಗಷ್ಟೇ ಬುದ್ದ ಜಯಂತಿಯಂದು ನಟ ಚೇತನ್, 'ದೇವರನ್ನು ಆರಾಧಿಸುವುದಕ್ಕಿಂತ ಸದಾಚಾರದ ನಿಯಮಗಳಿಗೆ ವಿಧೇಯತೆಯು ಉತ್ತಮವಾಗಿದೆ.’
- ಬುದ್ಧ' ಎಂದು ಪೋಸ್ಟ್ ಮಾಡಿದ್ದರು. 

ವಿವಾದಾತ್ಮಕ ವ್ಯಕ್ತಿ, ವಿವಾದ ಸೃಷ್ಟಿಸುವ ನಟ ಎಂದೇ ಕೆಲವರ ಪಾಲಿಗೆ ಗುರುತಿಸಿಕೊಂಡಿರುವ ನಟ ಚೇತನ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಮತ್ತೊಂದು ವಿವಾದ ಎಬ್ಬಿಸಬಲ್ಲ ಪೋಸ್ಟ್ ಹಾಕಿದ್ದಾರೆ. ಇಂದು ಪೋಸ್ಟ್ ಆಗಿರುವ ಚೇತನ್ ಬರೆದಿರುವ ಈ ಸಂದೇಶ, ಈಗಾಗಲೇ ಸಾಕಷ್ಟು ವೈರಲ್ ಆಗತೊಡಗಿದೆ. ಹಾಗಿದ್ದರೆ ನಟ ಚೇತನ್ ಏನಂತ ಬರೆದುಕೊಂಡಿದ್ದಾರೆ? ಇಲ್ಲಿದೆ ಈ ಬಗ್ಗೆ ವಿವರಣೆ..

1. ಹಿಂದುತ್ವವು ಕ್ರಿಶ್ಚಿಯನ್ಸ್‌ ಹಾಗೂ ಮುಸ್ಲಿಂ ಸಮುದಾಯವನ್ನು ವಿಲನ್‌ಗಳಾಗಿ (ಖಳನಾಯಕರು) ಮಾಡುತ್ತವೆ (ಧಾರ್ಮಿಕ ಅಲ್ಪಸಂಖ್ಯಾತರು)
{Hindutva makes Muslims and Christians villains: (religious minorities)}

2. ದೋಷಪೂರಿತ ಕನ್ನಡಪರ ಹೋರಾಟಗಾರರು ಮಾರ್ವಾಡಿಗಳು ಹಾಗೂ ಸಿಂಧಿಗಳನ್ನು ಖಳನಾಯಕರನ್ನಾಗಿ ಮಾಡುತ್ತವೆ (ಶ್ರೀಮಂತ ವಲಸಿಗರು)
{Defected Kannada activists make Marwadis and Sindhis villains: (Rich immigrants)}

3. ದೋಷಪೂರಿತ ಜಾತಿ ವಿರೋಧಿ ಹೋರಾಟಗಾರರು ಬ್ರಾಹ್ಮಣರನ್ನು ಖಳನಾಯಕರನ್ನಾಗಿ ಮಾಡುತ್ತವೆ (ಜಾತಿ ವ್ಯವಸ್ಥೆಯ ಶ್ರೇಷ್ಠರು) 
{Flawless anti-caste activists make Brahmins villains: (Elite of caste system)}

4. ನಾವು ಸಮಾನತಾವಾದಿಗಳು ಇಡೀ ಜಾತಿ ವ್ಯವಸ್ಥೆಯನ್ನು ವಿಲನ್‌ ಆಗಿ ಮಾಡಬೇಕು, ಯಾವುದೇ ಸಮುದಾಯವನ್ನಲ್ಲ.
{We equalists must make the whole system of inequality a villain—not any community.}

ಕಾಮ ಕೆರಳಿಸುವ ಸೆಕ್ಸಿ ಹೆಣ್ಣು ಟಬು ಎಂದಿದ್ದ ನಾಗಾರ್ಜುನ ಯಾಕೆ ಮದುವೆಯಾಗ್ಲಿಲ್ಲ?

ಹೀಗಂತ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಟ ಚೇತನ್ ಪೋಸ್ಟ್ ಮಾಡಿದ್ದು, ಇದಕ್ಕೆ ಹಲವರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹಲವರ ಪ್ರಕಾರ ಈ ಪೋಸ್ಟ್ ಎಂದಿನಂತೆ ಸಣ್ಣ ಚರ್ಚೆಯೊಂದನ್ನು ಹುಟ್ಟುಹಾಕಿ ಬಳಿಕ ತಣ್ಣಗಾಗುತ್ತದೆ. ಆದರೆ, ಈ ಪೋಸ್ಟ್ ಕಥೆ ಮುಂದಿನ ದಿನಗಳಲ್ಲಿ ಯಾವ ತಿರುವು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. 

ರೇಖಾ ಹಣೆಯಲ್ಲಿರುವುದು ಅಮಿತಾಭ್ ಹೆಸರಿನ ಕುಂಕುಮ; ಮದುವೆ ಆಗದಿರಲು ಕಾರಣವೇನು?

ಇತ್ತೀಚೆಗಷ್ಟೇ ಬುದ್ದ ಜಯಂತಿಯಂದು ನಟ ಚೇತನ್, 'ದೇವರನ್ನು ಆರಾಧಿಸುವುದಕ್ಕಿಂತ ಸದಾಚಾರದ ನಿಯಮಗಳಿಗೆ ವಿಧೇಯತೆಯು ಉತ್ತಮವಾಗಿದೆ.’
- ಬುದ್ಧ' ಎಂದು ಪೋಸ್ಟ್ ಮಾಡಿದ್ದರು. 

ಪಿಗ್ಗಿ ಮನೆಹಾಳಿ, ಶಾರುಖ್ ತಲೆ ಕೆಡಿಸಿದ್ದಾಳೆ, ಉದ್ಧಾರವಾಗಲ್ಲ ಅಂದಿದ್ರು ಗೌರಿ ಖಾನ್!

ಸಿಎಂ ಸಿದ್ದರಾಮಯ್ಯ ಒಂದು ವರ್ಷದಿಂದ ಸೋಮಾರಿ ಸಿದ್ದು ಆಗಿದ್ದಾರೆ. ತೇಪೆ ಹಚ್ಚೋ ಐದು ಗ್ಯಾರಂಟಿಗಳನ್ನು SESP, TSP,ದಲಿತ ಆದಿವಾಸಿಗಳ 11,000 ಕೋಟಿ ಹಣದಿಂದ ನಡೆಸ್ತಿದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ನಟ ಚೇತನ್ ಆಕ್ರೋಶ ಹೊರಹಾಕಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡಿತ್ತು.  

click me!