
ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ಪ್ರಾಣಿಪ್ರಿಯರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿ. ಇತ್ತೀಚೆಗೆ ಮರಣ ಹೊಂದಿದ್ದ ಆನೆ ಅರ್ಜುನ್ ಸಮಾಧಿ (Arjuna Burial) ನಿರ್ಮಾಣಕ್ಕೆ ನಟ ದರ್ಶನ್ ಕಲ್ಲುಗಳನ್ನು ಕಳುಹಿಸಿದ್ದರು. ದರ್ಶನ್ ಅಭಿಮಾನಿಗಳಲ್ಲಿ ಕೆಲವರು ಹಣವನ್ನೂ ಕಳುಹಿಸಿದ್ದರು ಎನ್ನಲಾಗಿದೆ. ಅದನ್ನೀಗ ಅರಣ್ಯ ಇಲಾಖೆ ವಾಪಸ್ ಕಳುಹಿಸಿದೆ ಎನ್ನಲಾಗಿದೆ. ನಟ ದರ್ಶನ್ ಕಲ್ಲು ಕಳುಹಿಸಿದ್ದು, ಅದಕ್ಕೆ ಪ್ರತಿಯಾಗಿ ಅರಣ್ಯ ಇಲಾಖೆ ಹಣ ವಾಪಸ್ ಕಳುಹಿಸಿದ್ದು ಯಾಕೆ ಎಂಬುದನ್ನು ಮುಂದೆ ನೋಡಿ..
ಆನೆ ಅರ್ಜುನ್ ಮರಣವನ್ನಪ್ಪಿದ ದಿನವೇ ನಟ ದಶ್ನ್ ಅದಕ್ಕಾಗಿ ತುಂಬಾ ಮರುಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಪೋಸ್ಟ್ ಕೂಡ ಹಾಕಿ ಅರ್ಜುನ್ ಸಮಾಧಿ ನಿರ್ಮಿಸಬೇಕೆಂಬ ಕೋರಿಕೆಯನ್ನು ಸಹ ಇಟ್ಟಿದ್ದರು. ಅದಕ್ಕಾಗಿ ತಾವು ಸರ್ಕಾರಕ್ಕೆ ತಮ್ಮಿಂದಾದ ಸಹಾಯ ಮಾಡುವುದಾಗಿಯೂ ನಟ ದಶ್ನ್ ಹೇಳಿದ್ದರು. ಅದರಂತೆ ದರ್ಶನ್ ಅರ್ಜುನ್ ಸಮಾಧಿ ನಿರ್ಮಾಣಕ್ಕೆ ಕಲ್ಲುಗಳನ್ನು ಕಳುಹಿಸಿ ತಮ್ಮ ಮಾತಿನಂತೆ ನಡೆದುಕೊಂಡಿದೆ. ಆದರೆ, ಈಗ ತಡವಾಗಿ ಸರ್ಕಾರ ಎಂಬ ಎಚ್ಚರಗೊಂಡಿದೆ. ದರ್ಶನ್ ಕಳುಹಿಸಿರುವ ಕಲ್ಲುಗಳಿಗೆ ಪ್ರತಿಯಾಗಿ ದರ್ಶನ್ ಸ್ನೇಹಿತರ ಅಕೌಂಟ್‌ಗೆ ಹಣವನ್ನು ಕಳಹಿಸಿದೆ ಎನ್ನಲಾಗಿದೆ.
ಪಿಗ್ಗಿ ಮನೆಹಾಳಿ, ಶಾರುಖ್ ತಲೆ ಕೆಡಿಸಿದ್ದಾಳೆ, ಉದ್ಧಾರವಾಗಲ್ಲ ಅಂದಿದ್ರು ಗೌರಿ ಖಾನ್!
ಸರ್ಕಾರದ ಈ ನಡೆಗೆ ಕಾರಣವೇನು ಎಂದರೆ, ಅರಣ್ಯ ಇಲಾಖೆಯ ಅನುಮತಿ ಪಡೆಯದೇ ನಟ ದರ್ಶನ್ ಅಭಿಮಾನಿ ಸ್ನೇಹಿತರು ಸಮಾಧಿ ನಿರ್ಮಾಣಕ್ಕೆ ಕಲ್ಲುಗಳನ್ನು ಕಳುಹಿಸಿದ್ದರು. ಅದಕ್ಕೇ ಸರ್ಕಾರ ಈ ಹಣವನ್ನು ವಾಪಸ್ ಕಳುಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಈಗ ಸಕಲೇಶಪುರದ ದಬಳ್ಳಿಕಟ್ಟೆ ಬಳಿಯ ಅರಣ್ಯ ವಲಯದಲ್ಲಿ, ಮರಣ ಹೊಂದಿರುವ ಅರ್ಜುನ್ ಸಮಾಧಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಸಕಲ ಏರ್ಪಾಟು ಮಾಡಿಕೊಂಡಿದೆ.
ಪ್ಯಾಂಟ್ ಬಿಚ್ಚಿರುವಾಗಲೇ ಮೇಕಪ್ ವ್ಯಾನ್‌ಗೆ ಪರಿಣೀತಿ ಚೋಪ್ರಾ ಬರ್ತಾರೆ; ಹೀಗಂದ್ರಾ ರಣವೀರ್ ಸಿಂಗ್ ?
ಒಟ್ಟಿನಲ್ಲಿ, ಪ್ರಾಣಿಪ್ರಿಯರಾದ ನಟ ದರ್ಶನ್ ಹಾಗೂ ಸ್ನೇಹಿತರು ಅರ್ಜುನ್ ಸಮಾಧಿಗೆ ಕಳುಹಿಸಿರುವ ಕಲ್ಲುಗಳ ಬದಲಾಗಿ ಅದರ ಹಣವನ್ನು ಸರ್ಕಾರ ವಾಪಸ್ ಮಾಡಿದೆ. ಹೀಗಾಗಿ ದರ್ಶನ್ ಕಳುಹಿಸಿದ ಕಲ್ಲನ್ನೇ ಸರ್ಕಾರ ಈ ಮೂಲಕ ಖರೀದಿ ಮಾಡಿದಂತಾಗಿದೆ. ಅದೇನೇ ಇರಲಿ, ಸಮಾಧಿ ಕೆಲಸ ಆದಷ್ಟು ಬೇಗ ಶುರುವಾಗಿ ಶೀಘ್ರವಾಗಿ ಮುಗಿದು, ಅರ್ಜುನ್ ಸಮಾಧಿ ದರ್ಶನಕ್ಕೆ ಸರ್ಕಾರ ಅನುಮತಿ ಕಲ್ಪಿಸುವಂತಾಗಲಿ ಎಂದು ದರ್ಶನ್, ಅಭಿಮಾನಿಗಳು ಹಾಗೂ ಅರ್ಜುನ್ ಅಭಿಮಾನಿಗಳು ಮನಸ್ಸಿನಲ್ಲೇ ಹರಕೆ ಹೊತ್ತಿದ್ದಾರೆ ಎನ್ನಬಹುದು.
A ಸೀಕ್ವೆಲ್‌ಗೆ ಸಜ್ಜಾದ ಚಾಂದಿನಿ-ಗುರುಕಿರಣ್‌ಗೆ ಟೆನ್ಷನ್, ಉಪೇಂದ್ರ ಹೂಂ ಅಂತಾರಾ ಇಲ್ವಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.