ಜಿಮ್ ಟ್ರೇನರ್ ಪ್ರಶಾಂತ್‌ ಮೇಲೆ ನಡೆದ ಹಲ್ಲೆ ಬಗ್ಗೆ ನಟ ಧ್ರುವ ಸರ್ಜಾ ಹೇಳಿದ್ದೇನು?

By Shriram Bhat  |  First Published May 27, 2024, 2:12 PM IST

ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಆಗಿರುವ ಬನಶಂಕರಿ ಮೂಲದ ಪ್ರಶಾಂತ್ ಪೂಜಾರಿ ಎಂಬವರ ಮೇಲೆ ಅಪರಿಚಿತರಿಂದ ನಿನ್ನೆ ರಾತ್ರಿ ಹಲ್ಲೆಯಾಗಿದೆ. ನಟ ಧೃವ ಸರ್ಜ ನಿವಾಸದ ಪಕ್ಕದ ರಸ್ತೆಯಲ್ಲಿ ಘಟನೆ ನಡೆದಿದೆ. ಬನಶಂಕರಿಯ ಕೆ.ಆರ್. ರಸ್ತೆಯಲ್ಲಿ ನಿನ್ನೆ ರಾತ್ರಿ 10.30ರ ಸುಮಾರಿಗೆ ಬೈಕ್‌ನಲ್ಲಿ ಬಂದು ಜಿಮ್ ಟ್ರೈನರ್ ಪ್ರಶಾಂತ್


ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಖ್ಯಾತಿಯ ನಟ ದೃವ ಸರ್ಜಾರ ಜಿಮ್ ಟ್ರೈನರ್ ಮೇಲೆ ನಿನ್ನೆ ರಾತ್ರಿ ಹಲ್ಲೆ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿ, ನಡು ರಸ್ತೆಯಲ್ಲಿಯೇ ಬೈಕ್ ಸವಾರರು ಬಂದು ಅಡ್ಡಗಟ್ಟಿ ಗಂಭೀರವಾಗಿ ಹಲ್ಲೆ ಮಾಡಿ ಹೋಗಿರುವ ಘಟನೆ ನಡೆದಿದೆ.

ಧೃವ ಸರ್ಜಾ ಅವರ ಜಿಮ್ ಟ್ರೈನರ್ ಆಗಿರುವ ಬನಶಂಕರಿ ಮೂಲದ ಪ್ರಶಾಂತ್ ಪೂಜಾರಿ ಎಂಬವರ ಮೇಲೆ ಅಪರಿಚಿತರಿಂದ ನಿನ್ನೆ ರಾತ್ರಿ ಹಲ್ಲೆಯಾಗಿದೆ. ನಟ ಧೃವ ಸರ್ಜ ನಿವಾಸದ ಪಕ್ಕದ ರಸ್ತೆಯಲ್ಲಿ ಘಟನೆ ನಡೆದಿದೆ. ಬನಶಂಕರಿಯ ಕೆ.ಆರ್. ರಸ್ತೆಯಲ್ಲಿ ನಿನ್ನೆ ರಾತ್ರಿ 10.30ರ ಸುಮಾರಿಗೆ ಬೈಕ್‌ನಲ್ಲಿ ಬಂದು ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹೋಗಿದ್ದಾರೆ. ಈ ಬಗ್ಗೆ ಜಿಮ್ ಟ್ರೈನರ್ ಪ್ರಶಾಂತ್ ಅವರು ಹತ್ತಿರದ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು.

Tap to resize

Latest Videos

ಡಾ ರಾಜ್‌ಗೆ ಪದ್ಮಭೂಷಣ, ವಿಷ್ಣುವರ್ಧನ್‌ಗೆ ಚಪ್ಪಲಿ ಎಸೆತ; ಯಾಕಿಂಥ ಅನ್ಯಾಯ ನಡೆದಿತ್ತು? 

ಇಂದು ಠಾಣೆಗೆ ಬಂದು ಹಲ್ಲೆಯ ಬಗ್ಗೆ ವಿವರವಾಗಿ ದೂರು ದಾಖಲಿಸಿದ್ದು, ದೂರು ನೀಡಿದ ಬೆನ್ನಲ್ಲಿಯೇ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಟ ಧ್ರವ ಸರ್ಜಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಪ್ರಶಾಂತ್ ಹಲ್ಲೆ ಪ್ರಕರಣದ ಬಗ್ಗೆ ಮಾತನಾಡಿದ ನಟ ಧ್ರುವ ಸರ್ಜಾ 'ಅವ್ರ ಪರ್ಸನಲ್ ಏನಿರುತ್ತೋ ಗೊತ್ತಿಲ್ಲ, ಆದರೆ ಬಾಟಂ ಲೈನ್ ಅಂದ್ರೆ, ನನ್ ಜಿಮ್ ಟ್ರೇನರ್ ಪ್ರಶಾಂತ್ ನನ್ ಫ್ರೆಂಡ್‌. ಈ ಘಟನೆ ಪಕ್ಕದ ರೋಡ್ ನಲ್ಲಿ ಆಗಿರೋದು. ಯಾರೋ ಬಂದ್ರಂತೆ ಮಚ್ ನಲ್ಲಿ ಹೊಡೆದ್ರಂತೆ. ಯಾರು ಅಂತಾ ಗೊತ್ತಾಗಿಲ್ಲ. 

ನಟ ರವಿಚಂದ್ರನ್ ಭಾರೀ ಗರಂ, ಹರಿಹಾಯ್ದಿದ್ದು ಯಾಕೆ, ಹೇಳಿದ್ದೇನು ನೋಡಿ!

ತನಿಖೆ ನಡಿತಿದೆ. ಸದ್ಯ ಪ್ರಶಾಂತ್ ಚೆನ್ನಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ತಗೊತಿದ್ದಾರೆ. ಈ ಬಗ್ಗೆ ಎಫ್ ಐಆರ್ ಆಗಿದೆ. ಕಾನೂನು ರೀತಿಯಲ್ಲಿ ತನಿಖೆ ನಡಿಯುತ್ತೆ. ಮೊನ್ನೆ ಮಂತ್ರಾಲಯಕ್ಕೆ ಹೋಗಿ ಬರ್ತೀನಿ ಅಂತ ಹೇಳಿದ್ರು, ಕಳಿಸಿಕೊಟ್ಟಿದ್ದೆ. ಮುಡಿನೂ ಕೊಟ್ಟು ಬಂದಿದ್ರು. ನಿನ್ನೆ ಕೂಡ ನನ್ ಜೊತೆನೇ ಸಾಕಷ್ಟು ಸಮಯ ಇದ್ರು. ಇನ್ನೇನು ಅರ್ಧ ಮುಕ್ಕಾಲು ಗಂಟೆ ಡಿಸ್ಜಾರ್ಜ್ ಆಗ್ತಾರೆ. ಪ್ರಶಾಂತ್ ಔಟ್ ಆಫ್ ಡೇಂಜರ್. ಬೆಂಗಳೂರಲ್ಲಿ ಮಚ್ಚು ಹಿಡ್ಕೊಂಡು ಓಡಾಡೋರು ಆರಾಮವಾಗಿ ಓಡಾಡ್ತಿದ್ದಾರೆ. ಒಬ್ಬ ಸಿಟಿಜನ್ ಆಗಿ ಹೇಳೋದಾದ್ರೆ ನಮ್ ಫ್ರೆಂಡ್ ಅಷ್ಟೇ ಅಲ್ಲ, ಬೇರೆ ಯಾರಿಗೂ ಈ ತರ ಆಗ್ಬಾರ್ದು..' ಎಂದಿದ್ದಾರೆ ನಟ ಧ್ರವ ಸರ್ಜಾ. 

ಮಗಳೇ ಎಂದು ಕರೆದಿದ್ದವಳನ್ನೇ ಮದುವೆಯಾಗಿ ಮಕ್ಕಳನ್ನು ಕೊಟ್ಟ ಸೈಫ್ ಅಲಿ ಖಾನ್!

 ಈ ಬಗ್ಗೆ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ಮಾತನಾಡಿ, ಬನಶಂಕರಿ ಠಾಣಾ ವ್ಯಾಪ್ತಿಯ 32 ವರ್ಷದ ಯುವಕ ಪ್ರಶಾಂತ್ ಮೇಲೆ ಹಲ್ಲೆಯಾಗಿದೆ. ನಿನ್ನೆ ರಾತ್ರಿ 10.30 ರ ಸುಮಾರಿಗೆ ಮನೆಗೆ ಹೋಗುವಾಗ ಕೆ.ಆರ್ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಸದ್ಯ ಯಾರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಾಕಾಗಿ ಹಲ್ಲೆ ನಡೆದಿದೆ ಎನ್ನುವ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯಿಲ್ಲ. ಜಿಮ್ ಟ್ರೈನರ್ ಹಾಗೂ ಬೇರೊಂದು ಕಡೆ ಇವರು ಕೆಲಸ ಮಾಡುತ್ತಿದ್ದರು. ಘಟನೆ ಸಂಬಂಧ ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾರೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಅಭಿಷೇಕ್‌ ಲವ್ ಮಾಡಿದ್ರು, ಐಶೂಗೆ ಮನಸ್ಸಿರಲಿಲ್ಲ; ಹೀಗಿದ್ರೂ ಮ್ಯಾರೇಜ್‌ ಆಗಿರೋ ಮಹಾ ಮ್ಯಾಜಿಕ್ ರಿವೀಲ್!

ಉಲ್ಟಾ ಹೊಡೆದ ಜಿಮ್ ಟ್ರೈನರ್: ಇನ್ನು ನಟ ಧೃವ ಸರ್ಜಾ ಅವರ ಜಿಮ್ ಟ್ರೈನರ್ ಪ್ರಶಾಂತ್ ಅವರು ಘಟನೆಯ ಬಗ್ಗೆ ಉಲ್ಟಾ ಹೊಡೆದಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿ, ನನ್ನ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳದೇ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬಂತೆ ಗೋಚರವಾಗುತ್ತಿದೆ. ಆದರೆ, ಹಲ್ಲೆಗೊಳಗಾದ ಪ್ರಶಾಂತ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಡಿಸಿಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೂ ಪ್ರಶಾಂತ್ ತಮ್ಮ ಮೇಲೆ ಹಲ್ಲೆಯಾಗಿಲ್ಲ ಎಂದು ಹೇಳುವುದರ ಹಿಂದೆ ಬೇರಾವ ಉದ್ದೇಶವಿದೆ ಎಂಬುದು ಮಾತ್ರ ತಿಳಿಯುತ್ತಿಲ್ಲ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ!

click me!