ಡಾ ರಾಜ್‌ಗೆ ಪದ್ಮಭೂಷಣ, ವಿಷ್ಣುವರ್ಧನ್‌ಗೆ ಚಪ್ಪಲಿ ಎಸೆತ; ಯಾಕಿಂಥ ಅನ್ಯಾಯ ನಡೆದಿತ್ತು?

By Shriram Bhat  |  First Published May 27, 2024, 1:47 PM IST

ನಟ ವಿಷ್ಣುವರ್ಧನ್‌ ಅವರಿಗೆ ಹೀಗೆ ಅವಮಾನ ಆದಾಗಲೆಲ್ಲ ಡಾ ರಾಜ್‌ಕುಮಾರ್ ತುಂಬಾ ಮರುಕ ಪಟ್ಟಿದ್ದರಂತೆ. ಆದರೂ ಕೂಡ ಅಂತಹ ಘಟನೆ ಪದೇ ಪದೇ ನಡೆಯುತ್ತಲೇ ಇತ್ತು. ಕನ್ನಡ ಸಿನಿಮಾ ನಟರಲ್ಲಿ ವಿಷ್ಣುವರ್ಧನ್ ಅನುಭವಿಸಿದಷ್ಟು ಅವಮಾನ ಬೇರೆ ಯಾರೂ ಅನುಭವಿಸಿಲ್ಲ.


ಸ್ಯಾಂಡಲ್‌ವುಡ್ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರಿಗೆ ಬಹಳಷ್ಟು ಬಾರಿ ಅವಮಾನ ಆಗಿದೆ. ಹೇಳುತ್ತಾ ಹೋದರೆ ಆಗಿರುವ ಅವಮಾನಗಳ ಪಟ್ಟಿ ದೊಡ್ಡದಿದೆ. ಇಲ್ಲಿ ಹೇಳಹೊರಟಿರುವುದು ಒಂದು ಘಟನೆ, ಅದು ನಟ ವಿಷ್ಣುವರ್ಧನ್ ಮೇಲೆ ಚಪ್ಪಲಿ ಎಸೆದಿದ್ದು. ಆ ಘಟನೆ ನಡೆದಾಗ ಡಾ ರಾಜ್‌ಕುಮಾರ್ (Dr Rajkumar) ಸಹ ಜೊತೆಯಲ್ಲೇ ಇದ್ದರು ಎಂಬುದು ವಿಶೇಷ. ಹಾಗಿದ್ದರೆ, ನಟ ವಿಷ್ಣುವರ್ಧನ್ ಮೇಲೆ ಯಾರು ಚಪ್ಪಲಿ ಎಸೆದಿದ್ದು, ಯಾಕೆ ಎಸೆದಿದ್ದರು?

ಅಂದು, 1983ರಲ್ಲಿ ಭಾರತದ ಸರ್ಕಾರವು ಡಾ ರಾಜ್‌ಕುಮಾರ್‌ ಅವರ ಕಲಾಸೇವೆಯನ್ನು ಗುರುತಿಸಿ ಅವರಿಗೆ ಪದ್ಮಭೂಷಣ ಪ್ರಶಸ್ತಿ (Padmabhushana Award) ನೀಡಿ ಗೌರವಿಸಿತ್ತು. ಆ ವೇಳೆ ನಡೆದ ಸಮಾರಂಭಕ್ಕೆ ನಟ ವಿಷ್ಣುವರ್ಧನ್ ಅವರನ್ನು ಅತಿಥಿಯಾಗಿ ಕರೆಸಿಕೊಳ್ಳಲಾಗಿತ್ತು. ಅಂದು, ಡಾ ರಾಜ್‌ಕುಮಾರ್ ಅವರಪಕ್ಕದಲ್ಲೇ ಇದ್ದ ನಟ ವಿಷ್ಣುವಧ್ನ್ ಅವರ ಮೇಲೆ ಯಾರೋ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದರು. ಆಗ ಡಾ ರಾಜ್‌ಕುಮಾರ್ ಎದ್ದು ನಿಂತು 'ನೀವು ಚಪ್ಪಲಿ ಎಸೆದಿರುವುದು ಅವರ ಮೇಲಲ್ಲ, ನನ್ನ ಮೇಲೆ. ಇದನ್ನು ನೀವು ನಿಲ್ಲಿಸದಿದ್ರೆ ತುಂಬಾ ಕಷ್ಟ ಆಗುತ್ತೆ. ಆಮೇಲೆ ಅದೂ ಕೂಡ ನಿಂತುಹೋಗುತ್ತೆ..' ಎಂದಿದ್ದರಂತೆ. 

Latest Videos

ನಟ ರವಿಚಂದ್ರನ್ ಭಾರೀ ಗರಂ, ಹರಿಹಾಯ್ದಿದ್ದು ಯಾಕೆ, ಹೇಳಿದ್ದೇನು ನೋಡಿ!

ಈ ಅವಮಾನವನ್ನು ನಟ ವಿಷ್ಣುವರ್ಧನ್ ಸೈಲೆಂಟಾಗಿ ಅನುಭವಿಸಿ ಕಾರ್ಯಕ್ರಮ ಮುಗಿಸಿ ಹೊರಟರಂತೆ. ನಟ ವಿಷ್ಣುವರ್ಧನ್‌ ಅವರಿಗೆ ಹೀಗೆ ಅವಮಾನ ಆದಾಗಲೆಲ್ಲ ಡಾ ರಾಜ್‌ಕುಮಾರ್ ತುಂಬಾ ಮರುಕ ಪಟ್ಟಿದ್ದರಂತೆ. ಆದರೂ ಕೂಡ ಅಂತಹ ಘಟನೆ ಪದೇ ಪದೇ ನಡೆಯುತ್ತಲೇ ಇತ್ತು. ಕನ್ನಡ ಸಿನಿಮಾ ನಟರಲ್ಲಿ ವಿಷ್ಣುವರ್ಧನ್ ಅನುಭವಿಸಿದಷ್ಟು ಅವಮಾನ ಬೇರೆ ಯಾರೂ ಅನುಭವಿಸಿಲ್ಲ. 

ಅಭಿಷೇಕ್‌ ಲವ್ ಮಾಡಿದ್ರು, ಐಶೂಗೆ ಮನಸ್ಸಿರಲಿಲ್ಲ; ಹೀಗಿದ್ರೂ ಮ್ಯಾರೇಜ್‌ ಆಗಿರೋ ಮಹಾ ಮ್ಯಾಜಿಕ್ ರಿವೀಲ್!

ಡಾ ರಾಜ್‌ಕುಮಾರ್ ನಟನೆಯ 'ಗಂಧದ ಗುಡಿ' ಸಿನಿಮಾದಲ್ಲಿ ನಟ ವಿಷ್ಣುವರ್ಧನ್ ಡಾ ರಾಜ್ ಎದುರು ಖಳನಾಯಕರಾಗಿ ಅಭಿನಯಿಸಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿತ್ತು. ಸಿನಿಮಾದಲ್ಲಿ ಮಾಡಿದ್ದ ನಟನೆಯನ್ನು ನಿಜ ಜೀವನಕ್ಕೆ ಎಳೆದುತಂದು ಆಗಾಗ ಹೀಗೆ ಅವಮಾನ ಮಾಡಿದ್ದು ನಿಜವಾಗಿಯೂ ಬೇಸರದ ಸಂಗತಿಯೇ ಸರಿ!

ಮಗ ಹೈದರಾಬಾದ್‌ನಲ್ಲಿ, ತಾಯಿ ಅಮೆರಿಕಾದಲ್ಲಿ; ನಾಗ ಚೈತನ್ಯ ತಾಯಿ ಇಲ್ಲದ ತಬ್ಬಲಿ!

ಒಟ್ಟಿನಲ್ಲಿ, ಡಾ ರಾಜ್‌ಕುಮಾರ್-ವಿಷ್ಣುವರ್ಧನ್ ಕಾಲದಿಂದಲೂ ಈ ಸ್ಟಾರ್ ವಾರ್‌ ಎಂಬುದು ಇದ್ದಿತ್ತು. ಈಗಲೂ ಅದು ನಿಂತಿಲ್ಲ. ಸ್ಟಾರ್‌ಗಳು ಪರಸ್ಪರ ಚೆನ್ನಾಗಿದ್ದರೂ ಈ ಅಭಿಮಾನಿಗಳು ಅವರು ಚೆನ್ನಾಗಿರಲು ಬಿಡುವುದಿಲ್ಲ ಎನ್ನಬಹುದು. ಕನ್ನಡ ಸಿನಿರಂಗ ಅಂತೇನೂ ಅಲ್ಲ, ಭಾರತದ ಎಲ್ಲಾ ಸಿನಿಮಾ ರಂಗದಲ್ಲೂ ಈ ಸ್ಟಾರ್ ವಾರ್ ಇದೆ. 

ಮುದ್ದಿಸಿದೆ, ಚುಂಬಿಸಿದೆ, ಅದರಲ್ಲೇನು ತಪ್ಪು? ಅದೊಂದು ಕೆಟ್ಟ ಅನುಭವ ತಲೆ ಕೆಡಿಸುತ್ತಿದೆ!

ಸೌತ್ ಸಿನಿ ಉದ್ಯಮಕ್ಕೆ ಹೋಲಿಸಿದರೆ ಈ ಪಿಡುಗು ಬಾಲಿವುಡ್‌ ಚಿತ್ರರಂಗದಲ್ಲಿ ಸ್ವಲ್ಪ ಕಡಿಮೆಯೇ ಎನ್ನಬಹುದು. ಅಂದಹಾಗೆ, ನಟ ವಿಷ್ಣುವರ್ಧನ್‌ ಹಾಗೂ ರಾಜ್‌ಕುಮಾರ್ ನಮ್ಮನ್ನಗಲಿದ್ದರೂ ಈಗಲೂ ಕೂಡ ಅವರ ಅಭಿಮಾಮನಿಗಲ ಮಧ್ಯೆ ಘರ್ಷಣೆ ನಡೆಯುತ್ತಲೇ ಇರುತ್ತದೆ. ಅದೊಂದು ಮುಗಿಯದ ದುರಂಥ ಕಥೆ ಎನ್ನಬಹುದೇನೋ!

click me!