ಈ ಕಾರಣಕ್ಕೆ 16ನೇ ವಯಸ್ಸಿಗೆ ಮನೆ ಬಿಟ್ಟು ಓಡಿ ಹೋದ ಸಂಯುಕ್ತ ಹೆಗ್ಡೆ; ಕಾರಣ ಕೇಳಿ ಬೆಚ್ಚಿಬಿದ್ದ ಕಿರಿಕ್ ಅಭಿಮಾನಿಗಳು!

Published : Mar 10, 2025, 12:22 PM ISTUpdated : Mar 10, 2025, 01:01 PM IST
ಈ ಕಾರಣಕ್ಕೆ 16ನೇ ವಯಸ್ಸಿಗೆ ಮನೆ ಬಿಟ್ಟು ಓಡಿ ಹೋದ ಸಂಯುಕ್ತ ಹೆಗ್ಡೆ; ಕಾರಣ ಕೇಳಿ ಬೆಚ್ಚಿಬಿದ್ದ ಕಿರಿಕ್ ಅಭಿಮಾನಿಗಳು!

ಸಾರಾಂಶ

ಸಂಯುಕ್ತಾ ಹೆಗ್ಡೆ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ನಟನೆಯ ಅನುಭವ ಇಲ್ಲದಿದ್ದರೂ, ಹಣದ ಆಸೆಯಿಂದ ಚಿತ್ರರಂಗಕ್ಕೆ ಬಂದರು. 16ನೇ ವಯಸ್ಸಿನಲ್ಲಿ ಡ್ಯಾನ್ಸ್ ಮಾಡಲು ಮುಂಬೈಗೆ ಓಡಿಹೋದರು, ಆದರೆ ಪೋಷಕರು ಒಪ್ಪದ ಕಾರಣ ವಾಪಸ್ಸಾದರು. 'ಕಿರಿಕ್ ಪಾರ್ಟಿ' ಯಶಸ್ಸಿನ ನಂತರ ಪ್ಯಾರಿಸ್‌ಗೆ ಭೇಟಿ ನೀಡುವ ಕನಸು ನನಸಾಯಿತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಕಾಲೇಜ್‌ ಮುಗಿಸುತ್ತಿದ್ದಂತೆ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸುಂದರಿ ಸಂಯುಕ್ತಾ ಹೆಗ್ಡೆ. ಮೊದಲ ಚಿತ್ರದಲ್ಲೇ ಹುಡುಗರ ಹಾರ್ಟ್‌ ಕದ್ದು ಈ ಸುಂದರೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಕನ್ನಡದಲ್ಲಿ ಕಾಲೇಜ್ ಕುಮಾರ್, ಒಮ್ಮೆ ನಿಶ್ಭದ ಒಮ್ಮೆ ಯುದ್ಧ, ತುರ್ತು ನಿರ್ಗಮ ಹಾಗೂ ಕ್ರೀಮ್ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಮಿಂಚುತ್ತಿರುವ ಸಂಯುಕ್ತಾ ಯಾಕೆ ಮನೆ ಬಿಟ್ಟು ಓಡಿ ಹೋಗಿದ್ದರು? ಹಣ ಹಿಂದೆ ಓಡಿದ್ದು ಯಾಕೆ ಎಂದು ಹಂಚಿಕೊಂಡಿದ್ದಾರೆ. 

'ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಪ್ರಮುಖ ಕಾರಣವೇ ಕನ್ನಡ ಚಿತ್ರರಂಗ. ಬೇರೆ ಏನೂ ಕಾರಣ ಇಲ್ಲ ಏಕೆಂದರೆ ಅಕ್ಟಿಂಗ್ ಬಗ್ಗೆ ಏನೂ ಗೊತ್ತಿಲ್ಲ. ಸ್ಕೂಲ್ ಮತ್ತು ಕಾಲೇಜ್‌ನಲ್ಲಿ ನಾನು ಯಾವತ್ತೂ ಆಕ್ಟಿಂಗ್ ಮಾಡಿಲ್ಲ. ಎಲ್ಲಾ ಕಡೆ ಬರೀ ಡ್ಯಾನ್ಸ್ ಮಾಡಿದ್ದೀನಿ. ನನಗೆ ಸಂಪೂರ್ಣವಾಗಿ ಗೊತ್ತಿಲ್ಲದ ಕೆಲಸವನ್ನು ಒಪ್ಪಿಕೊಂಡು ಮುಂದುವರೆಯಲು ಪ್ರಮುಖ ಕಾರಣವೇ ಹಣ. ಹಣ ಬಂದಾಗ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿತ್ತು. ನಾನು ಯಾವತ್ತೂ ಮನೆಯಿಂದ ಹೊರಗಡೆ ಹೋಗಿಲ್ಲ. 16ನೇ ವಯಸ್ಸಿಗೆ ಮನೆ ಬಿಟ್ಟು ಮುಂಬೈಗೆ ಓಡಿ ಹೋಗಿದ್ದೆ. ಯಾಕೆ ಹೋಗಿದ್ದ ಅಂದ್ರೆ ಡ್ಯಾನ್ಸ್ ಮಾಡಲು. 12ನೇ ಕ್ಲಾಸ್‌ನ ನೀನು ಮುಗಿಸಲೇ ಬೇಕು ಅದಾದ ಮೇಲೆ ನೀನು ಡಿಗ್ರಿ ಮಾಡಬೇಕು ಆದರೂ ಆಮೇಲೆ ನೋಡೋಣ ಎಂದು ಹೇಳಿದ್ದರು.  ಮುಂಬೈಗೆ ಹೋಗಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್‌ ಶೋ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದೆ. ನನ್ನ ಬಳಿ ಅವರು ಸೆಲೆಕ್ಷನ್ ಟೋಪಿ ಕೂಡ ಇದೆ. ನನಗೆ 16 ವರ್ಷ ಆಗಿದ್ದ ಕಾರಣ ಕಾಂಟ್ರಾಕ್ಟ್‌ ಅಪ್ಪ-ಅಮ್ಮನೇ ಸೈನ್ ಮಾಡ್ಬೇಕು ಅಂತ ಹೇಳಿಬಿಟ್ಟರು. ನಾನು ಸೈನ್ ಮಾಡುವುದಿಲ್ಲ ವಾಪಸ್ ಬಾ ಅಂತ ಅಪ್ಪ ಅಮ್ಮ ಹೇಳಿದ್ದರು ಬಂದೆ' ಎಂದು ಸಂಯುಕ್ತಾ ಹೆಗ್ಡೆ ಮಾತನಾಡಿದ್ದಾರೆ.

ಯಾಕೆ ಸಪ್ತಮಿ ಅಂತ ಹೆಸರಿಟ್ಟರು? 7ರ ಹಿಂದೆ ಇರುವ ಸೀಕ್ರೆಟ್‌ ರಟ್ಟು ಮಾಡಿದ ಕಾಂತಾರ ಸುಂದರಿ!

'ಚಿಕ್ಕ ವಯಸ್ಸಿನಿಂದ ನಾನು ಪ್ಯಾರಿಸ್‌ಗೆ ಹೋಗಬೇಕು ಅನ್ನೋ ಕನಸು ಕಂಡಿದ್ದೆ. ಸದಾ ಬುಕ್‌ನಲ್ಲಿ ಪ್ಯಾರಿಸ್ ಟವರ್ ಬರೆಯುತ್ತಿದ್ದೆ. ಕಿರಿಕ್ ಪಾರ್ಟಿ ಸಕ್ಸಸ್ ಆದ್ಮೇಲೆ ಚಿತ್ರತಂಡ ಸಿನಿಮಾವನ್ನು ಪ್ಯಾರಿಸ್‌ನಲ್ಲಿ ರಿಲೀಸ್ ಮಾಡುತ್ತಾರೆ. ಇಡೀ ಖರ್ಚು ಪ್ರೊಡಕ್ಷನ್ ಹೌಸ ನೋಡಿಕೊಂಡಿದೆ ನಾನು ಕನಸು ಕಂಡ ಜಾಗವನ್ನು ಅಂದು ಭೇಟಿ ಮಾಡಿದೆ. ಸಿನಿಮಾ ಯಶಸ್ಸು ಆದ್ಮೇಲೆ ನಮಗೆ ಇನ್ನೂ ಜಾಸ್ತಿ ಹಣ ಕೊಟ್ಟರು. ಸಿನಿಮಾ ಆದ್ಮೇಲೆ ಅವರೊಟ್ಟಿಗೆ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ಗೌರವ ಕೊಡುತ್ತಾರೆ ಹೀಗಾಗಿ ಅವರ ತಂಡ ಯಶಸ್ಸು ಕಂಡಿದೆ' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಯುಕ್ತಾ ಹೇಳಿದ್ದಾರೆ. 

ಕಾಲು ಸುಟ್ಟಿಕೊಂಡು ಹಾಸಿಗೆ ಹಿಡಿದ ಹೆಂಡತಿ ; ಎಡವಟ್ಟಿನ ಬಗ್ಗೆ ಕ್ಲಾರಿಟಿ ಕೊಟ್ಟ ಮಾಸ್ಟರ್ ಆನಂದ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!