Round Up 2021: ಸ್ಯಾಂಡಲ್‌ವುಡ್ ಕಳೆದುಕೊಂಡ ಸಿನಿ ಗಣ್ಯರು!

By Suvarna NewsFirst Published Dec 30, 2021, 6:06 PM IST
Highlights

2021ರಲ್ಲಿ ಕನ್ನಡ ಚಿತ್ರರಂಗ ಕಳೆದುಕೊಂಡ ದಿಗ್ಗಜ ನಟರು, ರಂಭೂಮಿ ಕಲಾವಿದರು, ನಿರ್ಮಾಪಕು ಮತ್ತು ನಿರ್ದೇಶಕರಿವರು....
 

ಕೊರೋನಾ ಸೋಂಕು ಮುಗೀತಪ್ಪ ಚಿತ್ರರಂಗಕ್ಕೆ ಒಳ್ಳೆಯದೇ ಆಗುತ್ತೆ ಎಂದು ಭಾವಿಸಿದ ಸಮಯದಲ್ಲೇ ಅದೆಷ್ಟೋ ಅದ್ಭುತ ಕಲಾವಿದರನ್ನು ಸ್ಯಾಂಡಲ್‌ವುಡ್ ಕಳೆದುಕೊಂಡಿತು. ಈಗಲೂ ಅವರ ಸಿನಿಮಾ ಅಥವಾ ಫೋಸ್ಟರ್ ನೋಡಿದರೆ, ಇಲ್ಲೆಯೇ ಎಲ್ಲೋ ನಮ್ಮ ಜೊತೆ ಇದ್ದಾರೆ ಎಂದೆನಿಸುತ್ತದೆ. ಈಗಲೂ ಪ್ರತಿಯೊಂದೂ ಸಿನಿಮಾದಲ್ಲೂ ದಿವಂಗತ ಕಲಾವಿದರನ್ನು ಸ್ಮರಿಸಿ, ಸಿನಿಮಾವನ್ನು ಅರ್ಪಣೆ ಮಾಡಿಯೇ ಚಾಲನೆ ನೀಡುತ್ತಿದ್ದಾರೆ. ಈ ವರ್ಷ ನಾವು ಕಳೆದುಕೊಂಡ ವ್ಯಕ್ತಿಗಳು ಯಾರ್ಯಾರು ಗೊತ್ತಾ?

- ಪುನೀತ್ ರಾಜಕುಮಾರ್
ಚಿತ್ರರಂಗದ ಓನ್ ಆಂಡ್ ಓನ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅವರು ಅಕ್ಟೋಬರ್ 29ರಂದು ಹೃದಯಘಾತದಿಂದ ನಿಧನರಾದ್ದರು. ಅಪ್ಪು ಅಗಲಿದ ಕೆಲವೇ ಗಂಟೆಗಳಲ್ಲಿ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಎರಡು ಕಣ್ಣುಗಳನ್ನು ನಾಲ್ಕು ಜನರಿಗೆ ನೀಡಿರುವುದಾಗಿ ನಾರಾಯಣ ನೇತ್ರಾಲಯ ತಿಳಿಸಿದೆ. ಅನೇಕರಿಗೆ ಅಪ್ಪು ಮಾದರಿಯಾಗಿ ಈಗ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನ ನೇತ್ರದಾನಕ್ಕೆ ನೊಂದಣಿ ಮಾಡಿಸಿದ್ದಾರೆ. 

- ಸಂಚಾರಿ ವಿಜಯ್
ಕೊರೋನಾ ಕಷ್ಟಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕುಟುಂಬಗಳಿಗೆ ಸಹಾಯ ಮಾಡುತ್ತಾ ಬ್ಯುಸಿಯಾಗಿದ್ದ ನಟ ಸಂಚಾರಿ ವಿಜಯ್ ಜೂನ್‌ 15ರಂದು ರಸ್ತೆ ಅಪಘಾತದಿಂದ ನಿಧನರಾದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದು ವಿಜಯ್ ದೇಹದ ವಿವಿಧ ಅಂಗಗಳು ಅಗತ್ಯ ಇರೋರಿಗೆ ನೀಡಿ, ಅವರ ಕುಟುಂಬದ ಸದಸ್ಯರು ವಿಜಯ್ ಅವರನ್ನು ಬದುಕಿರುವಂತೆ ನೋಡಿಕೊಂಡಿದ್ದು ವಿಶೇಷ. ಕನ್ನಡ ನಾಡಿನ ಅದ್ಭುತ ಕಲಾವಿದನನ್ನು ಕಳೆದುಕೊಂಡ ಸಿನಿ ರಸಿಕರು ಈ ನಟನ ಸಾವಿಗೆ ಮಮ್ಮುಲ ಮರುಗಿದ್ದರು.

- ಜಯಂತಿ
ಹಿರಿಯ ನಟಿ ಜಯಂತಿ ಅವರು ಜುಲೈ 26ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಮರಾಠಿ ಸಿನಿಮಾದಲ್ಲಿ ನಟಿರುವ ಜಯಂತಿ ಅವರು ಸುಮಾರು 150 ಹೆಚ್ಚು ಸಿನಿಮಾಗಳಲ್ಲಿ ಮಾಡಿದ್ದಾರೆ. ಅದರಲ್ಲಿ 40 ಸಿನಿಮಾಗಳು ರಾಜ್‌ಕುಮಾರ್‌ ಅವರಿಗೆ ಜೋಡಿಯಾಗಿ. 

- ಕೋಟಿ ರಾಮು
ಕನ್ನಡ ಚಿತ್ರರಂಗದಲ್ಲಿ ಮೊದಲು ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡಿದ್ದು ಕೋಟಿ ರಾಮು ಅವರು. ಏಪ್ರಿಲ್ 26ರಂದು ಕೊರೋನಾ ಪಾಸಿಟಿವ್ ಆಗಿ ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದರು. ಅವರು ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಅವರು ಕೊನೆಯ ಸಿನಿಮಾ ಬಿಡುಗಡೆ ಪ್ರಚಾರದಲ್ಲಿ ಪತ್ನಿ ಮಾಲಾಶ್ರೀ ಮತ್ತು ಮಕ್ಕಳು ತೊಡಗಿಸಿಕೊಂಡಿದ್ದಾರೆ. 

- ಸತ್ಯಜಿತ್
ಚಿತ್ರರಂಗದಲ್ಲಿ ಅತಿ ಹೆಚ್ಚು ಖಳನಟ ಹಾಗೂ ಕೆಲವೊಮ್ಮೆ ಹಾಸ್ಯ ಕಲಾವಿದನಾಗಿಯೂ ನಟಿಸಿದ್ದರು ಸತ್ಯಜಿತ್. ಅಕ್ಟೋಬರ್ 10ರಂದು ವಯೋಸಹ ಕಾಯಿಲೆ ಮತ್ತು ಗ್ಯಾಂಗ್ರಿನ್‌ನಿಂದ ಕೊನೆ ಉಸಿರೆಳೆದರು. ಸತ್ಯಜಿತ್ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 

- ಶಿವರಾಮ್
ಅಣ್ಣಾವ್ರ ಆಪ್ತ ಗೆಳೆಯ 70ರ ದಶಕದಿಂದ ಕನ್ನಡಿಗರಿಗೆ ಭಾಗ್ಯವಾಗಿ ಉಳಿದಿದ್ದ ಹಿರಿಯ ಕಲಾವಿದ ಶಿವರಾಮ್‌ ಅವರು ಡಿಸೆಂಬರ್ 4ರಂದು ಇಹಲೋಕ ತ್ಯಜಿಸಿದ್ದರು. ಕಾಲಿ ಜಾರಿ ಬಿದ್ದು, ಮೆದುಳಿಗೆ ಪೆಟ್ಟು ಬಿದ್ದಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದರು.

- ಕೆವಿ ರಾಜು
ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ಗೂ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಕೆವಿ ರಾಜು ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಡಿಸೆಂಬರ್ 25ರಂದು ನಿಧನರಾದರು. ಯಶ್ ನಟನೆಯ 'ರಾಜಧಾನಿ' ರಾಜು ಕೊನೆಯ ಸಿನಿಮಾ. 

- ಗುರು ಕಶ್ಯಪ್
ಸುಂದರಾಂಗ ಜಾಣ, ಪುಷ್ಪಕ ವಿಮಾನ, 100, ದೇವಕಿ ಸೇರಿದಂತೆ ಅನೇಕ ಸಿನಿಮಾಗಳಿಗಗೆ ಸಂಭಾಷಣೆ ಬರೆದು ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ಗುರು ಕಶ್ಯಪ್ ಅವರು ಸೆಪ್ಟೆಂಬರ್ 15ರಂದು ಹೃದಯಾಘಾತದಿಂದ ನಿಧನರಾಗಿದ್ದರು. 

- ಸಿ ಜಯರಾಮ್
ಆಟೋ ರಾಜ, ನಾ ನಿನ್ನ ಬಿಡಲಾರೆ, ಗಲಾಟೆ ಸಂಸಾರ, ಪಾವನ ಗಂಗಾ ಸೇರಿದಂತೆ ಅನೇಕ ಸ್ಟಾರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಿ ಜಯರಾಮ್ ಅವರು ಸಪ್ಟೆಂಬರ್ 8ರಂದು ಇಹಲೋಕ ತ್ಯಜಿಸಿದ್ದಾರೆ. 

- ಕೆ.ಸಿ.ಎಸ್‌ ಚಂದ್ರಶೇಖರ್
ಹುಲಿಯ ಹಾಲಿನ ಮೇವು, ಭಕ್ತ ಜ್ಞಾನದೇವ, ಧರ್ಮ ಯುದ್ಧ, ತಾಯಿ  ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಚಂದ್ರಶೇಖರ್‌ ಅವರು ಜೂನ್‌ 14ರಂದು ವಯೋಸಹಕ ಕಾಯಿಲೆಯಿಂದ ನಿಧನರಾಗಿದ್ದಾರೆ.

Round Up 2021: ವರ್ಷದ ಬೆಸ್ಟ್ ಬಿಕಿನಿ ಲುಕ್‌ಗಳಿವು

- ಬಿ. ಜಯಾ
ಕನ್ನಡದ ಹಿರಿಯ ನಟಿ ಬಿ.ಜಯಾ ಅವರು ಪಾರ್ಶ್ವವಾಯುನಿಂದ ಬಳಲುತ್ತಿದ್ದರು. ಜೂನ್‌ 3ರಂದು ಇಹಲೋಕ ತ್ಯಜಿಸಿದರು.ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

- ರಾಮು
ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಅವರು ಏಪ್ರಿಲ್ 28ರಂದು ಕೊರೋನಾದಿಂದ ನಿಧನರಾಗಿದ್ದಾರೆ. ವೃತ್ತಿಯಲ್ಲಿ ನೃತ್ಯ ನಿರ್ದೇಶಕನಾಗಿದ್ದು, ಕನ್ನಡ ಸಿನಿಮಾಗಳಲ್ಲಿ ನೃತ್ಯ ನಿರ್ದೇಶನ ಮಾಡಿದ್ದಾರೆ ಹಾಗೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು.

click me!