
ಕನ್ನಡ ಚಿತ್ರರಂಗದ (Sandalwood) ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devraj) ಮತ್ತು ನಟಿ ಪ್ರಿಯಾಂಕಾ ತಿಮ್ಮೇಶ್ (Priyanka Timmesh) ನಟಿಸಿರುವ ಅರ್ಜುನ್ ಗೌಡ (Arjun Gowda) ಸಿನಿಮಾ ಇದೇ ಡಿಸೆಂಬರ್ 31ರಂದು ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಕೋಟಿ ರಾಮು (Koti Ramu) ಅವರು ಕೊನೆಯದಾಗಿ ಬಂಡವಾಳ ಹಾಕಿದ ಸಿನಿಮಾ ಇದಾಗಿದ್ದು, ಪತ್ನಿ ಮಾಲಾಶ್ರೀ (Malashree) ಮತ್ತು ಮಕ್ಕಳು ಪ್ರೀ ರಿಲೀಸ್ ಪ್ರೆಸ್‌ಮೀಟ್‌ನಲ್ಲಿ (Press Meet) ಭಾಗಿಯಾಗಿದ್ದರು. ಈ ವೇಳೆ ತಂದೆ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟಿದ್ದಾರೆ.
ಪುತ್ರಿ ಅನನ್ಯಾ ಮಾತು:
'ಎಲ್ಲರಿಗೂ ನಮಸ್ಕಾರ. ಮೊದಲು ನಾನು ನಮ್ಮ ಮಾಧ್ಯಮಗಳಿಗೆ (Media) ಮತ್ತು ಇವತ್ತು ಆಗಮಿಸಿರುವ ಸ್ಪೆಷಲ್ ಅತಿಥಿಗಳಿಗೆ (Film Guest) ಧನ್ಯವಾದಗಳನ್ನು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ರಾಮ್ ಫಿಲ್ಮಂ (Ram Films) ಜರ್ನಿಯಲ್ಲಿ ನೀವೆಲ್ಲರೂ ದೊಡ್ಡ ಪಾತ್ರ ವಹಿಸಿದ್ದೀರಿ. ನಿಮ್ಮ ಪ್ರೀತಿ (Love) ಮತ್ತು ಸಪೋರ್ಟ್‌ಗೆ (Support) ನಾನು ಸದಾ ಋಣಿಯಾಗಿರುವೆ.' ಎಂದು ಮಾತು ಆರಂಭಿಸಿದ ಅನನ್ಯಾ ತಂದೆ ಬಗ್ಗೆ ಮಾತನಾಡುತ್ತಾ ಕಣ್ಣಂಚಲಿ ನೀರು ತುಂಬಿಕೊಂಡಿತ್ತು.
'ನಮ್ಮ ತಂದೆ (Father) ಬಗ್ಗೆ ಹೇಳಬೇಕು ಅಂದ್ರೆ ನಾವು ತುಂಬಾನೇ ಪುಣ್ಯವಂತರು ಮತ್ತು ಅದೃಷ್ಟವಂತರು ಅವರನ್ನು ತಂದೆಯಾಗಿ ಪಡೆಯುವುದಕ್ಕೆ. ನಮಗೆ ಸದಾ ಸಪೋರ್ಟ್ ಮಾಡುತ್ತಿದ್ದರು, ಏನೇ ಮಾಡಿದರೂ encourage ಮಾಡುತ್ತಿದ್ದರು. ಸದಾ ದೊಡ್ಡದಾಗಿ ಕನಸು (Dream Big) ಕಾಣಬೇಕು ಎಂದು ಹೇಳುತ್ತಿದ್ದರು. ಕಷ್ಟ ಪಟ್ಟು ಕೆಲಸ ಮಾಡಿ ಎನ್ನುತ್ತಿದ್ದರು. ಈಗಲೂ ಪ್ರತಿ ದಿನ ನಮಗೆ inspire ಮಾಡುತ್ತಾರೆ. ನಮ್ ಗುರಿ ಬಗ್ಗೆ ಚಿಂತಿಸಬೇಕು. ಅದನ್ನು ಹೇಗೆ ನನಸ್ಸು ಮಾಡಿಕೊಳ್ಳಬೇಕು ಎಂದು ಹೇಳಿಕೊಡುತ್ತಿದ್ದರು. ಅರ್ಜುನ್ ಗೌಡ ಸಿನಿಮಾ ಬಗ್ಗೆ ಹೇಳಬೇಕು ಅಂದ್ರೆ ಈ ಸಿನಿಮಾಗೆ ತಂದೆ ನಮ್ಮನ್ನು ತುಂಬಾನೇ involve ಮಾಡಿದ್ದರು. ಟ್ರೈಲರ್ (Trailer), ಡಿಸೈನ್ (Poster Design) ಮತ್ತು ಮ್ಯೂಸಿಕ್ (Music) ಎಲ್ಲವನ್ನೂ ನಮಗೆ ತೋರಿಸುತ್ತಿದ್ದರು. ಹಾಗೇ ನಮ್ಮ ಸಲಹೆ ಪಡೆದುಕೊಳ್ಳುತ್ತಿದ್ದರು. ಅವರಿಗೆ ಈ ಸಿನಿಮಾ ಮೇಲೆ ಎಷ್ಟು ಪ್ರೀತಿ ಇತ್ತು ಎಂದು ನಮಗೆ ಗೊತ್ತಾಗುತ್ತಿತ್ತು. ನಾನು ಕೇಳಿಕೊಳ್ಳುವುದು ಇಷ್ಟೆ, ದಯವಿಟ್ಟು ಕೋವಿಡ್ (Covid19) protocolನ ಫಾಲೋ ಮಾಡಿ, ಚಿತ್ರಮಂದಿರಕ್ಕೆ ಹೋಗಿ. ನಮ್ಮ ತಂದೆಗೆ ತೋರಿಸಿದ ಪ್ರೀತಿ ಮತ್ತೆ ಸಪೋರ್ಟ್‌ನ ಈ ಸಿನಿಮಾಗೆ ನೀಡಿ,' ಎಂದು ಅನನ್ಯಾ (Ananya Ram) ಕೇಳಿ ಕೊಂಡಿದ್ದಾರೆ.
ಪುತ್ರ ಆರ್ಯನ್ ಮಾತು:
'ಎಲ್ಲರಿಗೂ ನಮಸ್ಕಾರ. ಮೊದಲು ನಾನು ತಂದೆ ಬಗ್ಗೆ ಹೇಳುವೆ. ಅವರು ನಮಗೆ ಸಿಕ್ಕ ಬೆಸ್ಟ್ ಫಾದರ್. ತಂದೆಗಿಂತ ಹೆಚ್ಚಾಗಿ ಅವರು ನಮಗೆ ಸ್ನೇಹಿತರಾಗಿದ್ದರು (Best Friend). ತಂದೆ ಬಗ್ಗೆ ಮಾತನಾಡಿದರೆ ಗಂಟೆ ಗಟ್ಟಲೆ ಮಾತನಾಡಬಹುದು. ಆದರೆ ಇವತ್ತು ಸಿನಿಮಾ ಬಗ್ಗೆ ಮಾತನಾಡುತ್ತೀನಿ. ನಾನು ಅರ್ಜುನ್ ಗೌಡ ಸಿನಿಮಾ ನೋಡಿದ್ದೀನಿ, ಪ್ರತಿಯೊಂದೂ ಶಾಟ್‌ನಲ್ಲೂ ತಂದೆ ಅವರ presence ನಮಗೆ ಕಾಣಿಸುತ್ತಿತ್ತು. ದಯವಿಟ್ಟು ಸಿನಿಮಾ ನೋಡಿ ಹಾಗೇ ನಿಮ್ಮ ಪ್ರೀತಿ ನಮ್ಮ ಮೇಲಿರಲಿ,' ಎಂದು ಆರ್ಯನ್ ರಾಮ್ (Aryan Ram) ಮಾತನಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ (Shivarajkumar), ರವಿಚಂದ್ರನ್ (Ravichandran), ಉಪೇಂದ್ರ (Upendra), ಗಣೇಶ್ (Ganesh), ಡಾರ್ಲಿಂಗ್ ಕೃಷ್ಣ (Darling Krishna), ದೇವರಾಜ್ (Devaraj), ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh), ಸಾಧು ಕೋಕಿಲಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ ತಮ್ಮ ಪುತ್ರನ ಜೊತೆ ಅನನ್ಯಾ ರಾಮ್ ಮಲ್ಲ 2 (Malla 2) ಸಿನಿಮಾ ಮಾಡಲಿ. ನಾನೇ ಲಾಂಚ್ ಮಾಡುತ್ತೇನೆ, ಎಂದು ರವಿಚಂದ್ರನ್ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.