'45' ಸಿನಿಮಾ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ನೆನೆದು ಅರ್ಜುನ್ ಜನ್ಯಾ. ಗೀತಕ್ಕೆ ಜಾಗದಲ್ಲಿ ಬೇರೆ ಯಾರೇ ಇದ್ದಿರೂ ಈ ಶಾಟ್ ಮಾಡಲು ಬಿಡುತ್ತಿರಲಿಲ್ಲವಂತೆ.....
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ರವರಿಗೆ ಡಿಸೆಂಬರ್ 18ರಂದು ವಿದೇಶದಲ್ಲಿ ಚಿಕಿತ್ಸೆ ನಡೆಯಲಿದೆ. ಸುಮಾರು ಒಂದು ತಿಂಗಳ ವಿಶ್ರಾಂತಿ ಪಡೆದು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಶಿವಣ್ಣ ಜೊತೆ ಅರ್ಜುನ್ ಜನ್ಯ '45' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. 'ಶಿವರಾಜ್‌ಕುಮಾರ್ ಆರೋಗ್ಯದ ವಿಷಯ ಕೇಳಿ ಮನಸ್ಸಿಗೆ ಬಹಳ ನೋವಾಯ್ತು ಅವರು ಗುಣಮುಖರಾಗಿ ಬರುತ್ತಾರೆ ಎಂಬ ಕಾನ್ಫಿಡೆನ್ಸ್ ಇದೆ. ಶಿವಣ್ಣ ಯಾವತ್ತಿದ್ದರೂ ಸ್ಯಾಂಡಲ್‌ವುಡ್ ಕಿಂಗ್' ಎಂದು ಕನ್ನಡ ಖಾಸಗಿ ವೆಬ್ ಪೋರ್ಟಲ್ ಸಂದರ್ಶನದಲ್ಲಿ ಅರ್ಜುನ್ ಮಾತನಾಡಿದ್ದಾರೆ.
'ಆ ವಿಷಯ ಕೇಳಿದಾಗ ನನ್ನ ಮನಸ್ಸಿಗೆ ಬಹಳ ನೋವಾಯ್ತು. ಒಳ್ಳೆಯ ವ್ಯಕ್ತಿಗಳಿಗೆ ಈತರ ಆದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಶಿವಣ್ಣ ಒಂದು ಇರುವರೆಗೂ ನೋವು ಮಾಡದೇ ಇರುವಂತಹ ವ್ಯಕ್ತಿ. ಯಾ ಮನಸ್ಸಿಗೂ ನೋವು ಮಾಡದೆ ಇರುವಂತಹ ವ್ಯಕ್ತಿ. ಎಲ್ಲರಿಗೂ ಪಾಸಿಟಿವ್ ಹೇಳುವವರು. ಯಾರು ಬಗ್ಗೆನೂ ನೆಗೆಟಿವ್ ಮಾತನಾಡಿದನ್ನು ನಾನು ನೋಡಿಲ್ಲ. ಎಲ್ಲರಿಗೂ ಗೌರವ ಕೊಡುತ್ತಾರೆ...ಹೀಗಿರಬೇಕು ಹಾಗಿರಬೇಕು ಅಂತ ಹೇಳುತ್ತಲೇ ಇರುತ್ತಾರೆ. ಅವರಿಗೆ ಏನಾದರೂ ಆಗಿದೆ ಅಂದರೆ ಮನಸ್ಸಿಗೆ ನೋವಾಗುತ್ತದೆ. ಕನ್ನಡಿಗರ ಆಶೀರ್ವಾದ. ಅವರು ಪಡೆದಿರುವ ಪುಣ್ಯ. ಅವರಿಗೆ ಏನೂ ಆಗುವುದಿಲ್ಲ ಅನ್ನುವ ಕಾನ್ಫಿಡೆನ್ಸ್ ನನಗೆ ಇದೆ. ಮತ್ತೆ ಕ್ಯೂರ್ ಆಗಿ ಬರುತ್ತಾರೆ. ಮತ್ತೆ ನೂರಾರು ಸಿನಿಮಾ ಮಾಡಲಿ ಕನ್ನಡ ಚಿತ್ರರಂಗವನ್ನು ಮತ್ತೆ ಆಳುತ್ತಾರೆ' ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಸ್ಮಿಮ್ ಸೂಟ್ ಹಾಕು ಎಂದು ಡೈರೆಕ್ಟರ್ ಹೇಳ್ದಾಗ, ಲಂಗಾ ಎತ್ತಿ ತೊಡೆ ತೋರಿಸಿದ್ರು ನಟಿ ಲಕ್ಷ್ಮೀ!
45 ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಮುಖ್ಯವಾದ ಸೀನ್ ಮಾಡಬೇಕಿತ್ತು. ಶಿವಣ್ಣ ಆರೋಗ್ಯ ಪರಿಸ್ಥಿತಿ ತಿಳಿದು ಆ ಸೀನ್ ಇಡಬೇಕಾ ಅಥವಾ ಡೂಪ್ ಮಾಡಿಸಬೇಕಾ ಎಂದು ಚಿತ್ರತಂಡ ಯೋಚಿಸುತ್ತಿರುವಾಗ ಶಿವಣ್ಣ ತೆಗೆದುಕೊಂಡ ನಿರ್ಧಾರವನ್ನು ಅರ್ಜುನ್ ಜನ್ಯ ಹೇಳಿದ್ದಾರೆ.'ನಾನು ಕುಗ್ಗಿ ಹೋಗುವ ಸಮಯದಲ್ಲಿ ಒಂದು ಏಳಿ ಏನಾಗಲ್ಲ ಅಂತ ಹೇಳಿದ್ದರು. ಅವರು ಇದ್ದ ಪರಿಸ್ಥಿತಿಯಲ್ಲಿ ಯಾರೂ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ. ಬೇರೆ ಯಾರೇ ಗೀತಕ್ಕನ ಜಾಗದಲ್ಲಿ ಇದ್ದರೂ ಆ ಶಾಟ್‌ಗಳನ್ನು ತೆಗೆಯುವುದಕ್ಕೆ ಬೇಡ ಅಂತ ಹೇಳಿರೋರು. ಶಿವಣ್ಣ ಸ್ಟ್ರಿಕ್ಟ್ ಆಗಿ ಹೇಳಿದ್ದರೂ ಡೂಪ್ ಹಾಕುವ ಹಾಗಿಲ್ಲ ಸಿಇ ಮಾಡುವ ಹಾಗಿಲ್ಲ ಏನೂ ಕ್ರಿಯೇಟ್ ಮಾಡುವ ಹಾಗಿಲ್ಲ ಎಂದು. ಮಾಡಿದರೆ ನಾನೇ ಮಾಡಬೇಕು ಅಂದರು. ಅದನ್ನು ಕೇಳಿ ನನಗೆ ಕಣ್ಣಲ್ಲಿ ನೀರು ಬಂದು ಬಿಡ್ತು. ಶಿವಣ್ಣನಿಗೆ ಆಯಸ್ಸು ಆರೋಗ್ಯ ಕೊಟ್ಟು ನಮ್ಮ ಶಿವಣ್ಣ ಚಿತ್ರರಂಗದ ಕಿಂಗ್ ಆಗಿ ರೂಲ್ ಮಾಡಬೇಕು ಅವರು ಕಿಂಗ್ ಆಗಿಯೇ ಇರುತ್ತಾರೆ' ಎಂದಿದ್ದಾರೆ ಅರ್ಜುನ್.
ಕಾಲು ಎಳೆಯುವವರು ಇದ್ದಾಗಲೇ ಬೆಳೆಯೋದು, ಒಳ್ಳೆಯವರು ಜೊತೆಗಿದ್ದರೆ ಒಳ್ಳೆಯದ್ದೇ ಆಗೋದು: ಸುದೀಪ್