ಪಡ್ಡೆ ಹುಡುಗರ ಮೈಬಿಸಿಯೇರಿಸಿದ 'ರೊಮ್ಯಾಂಟಿಕ್' ಟ್ರೈಲರ್

Suvarna News   | Asianet News
Published : Oct 21, 2021, 06:33 PM ISTUpdated : Oct 21, 2021, 06:40 PM IST
ಪಡ್ಡೆ ಹುಡುಗರ ಮೈಬಿಸಿಯೇರಿಸಿದ 'ರೊಮ್ಯಾಂಟಿಕ್' ಟ್ರೈಲರ್

ಸಾರಾಂಶ

ಆಕಾಶ್ ಪೂರಿ, ಭಾಸ್ಕರ್ ಎಂಬ ಲವರ್ ಬಾಯ್‌ ಆಗಿ ಕಾಣಿಸಿಕೊಂಡರೆ ಮಾಯಾ ಎಂಬ ಪಾತ್ರದಲ್ಲಿ ನಟಿ ಕೆತಿಕಾ ಶರ್ಮಾ ನಟಿಸಿದ್ದಾರೆ. ಇವರಿಬ್ಬರ ರೊಮ್ಯಾಂಟಿಕ್ ಸಖತ್ ವರ್ಕೌಟ್ ಆಗಿದೆ.

ಡ್ಯಾಶಿಂಗ್ ನಿರ್ದೇಶಕ ಪೂರಿ ಜಗನ್ನಾಥ್ (Puri Jagannadh) ಈ ಬಾರಿ ತಮ್ಮ ಮಗನನ್ನು ಟಾಲಿವುಡ್‌ನಲ್ಲಿ (Tollywood) ಭದ್ರವಾಗಿ ನೆಲೆಯೂರಿಸಲು ಹೊಸ ಕಥೆಯೊಂದಿಗೆ ಬಂದಿದ್ದಾರೆ. 'ರೊಮ್ಯಾಂಟಿಕ್' (Romantic) ಎಂಬ ಹೊಸ ಚಿತ್ರವನ್ನು ತಮ್ಮ ಮಗನಿಗಾಗಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ ಸೇರಿದಂತೆ ಸಂಭಾಷಣೆಯನ್ನು ಪೂರಿ ಜಗನ್ನಾಥ್ ಅವರೇ ಬರೆದಿದ್ದಾರೆ. ಅನಿಲ್ ಪಾದೂರಿ (Anil Paduri) ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಟ್ರೈಲರ್ (Trailer) ಇತ್ತೀಚೆಗಷ್ಟೇ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಸೃಷಿಸಿತ್ತು.

ವಿಜಯ್ ದೇವರಕೊಂಡ ಚಿತ್ರಕ್ಕೆ ಹಾಡಿದ ಇಂಡಿಯನ್ ಐಡಲ್ ಸ್ಪರ್ಧಿ ಷಣ್ಮುಖಪ್ರಿಯಾ!

ಬಿಡುಗಡೆಯಾದ ಟ್ರೈಲರ್‌ನಲ್ಲಿ ಆಕಾಶ್ ಪೂರಿ (Akash Puri) ಮತ್ತು ಕೆತಿಕಾ ಶರ್ಮಾ (Ketika Sharma) ರೊಮ್ಯಾಂಟಿಕ್ ವರ್ಕೌಟ್ ಆಗಿದ್ದು, ಹಸಿಬಿಸಿ ದೃಶ್ಯಗಳಲ್ಲಿ ಬೋಲ್ಡ್‌ ಆಗಿ ನಟಿಸಿರುವುದು ಪಡ್ಡೆ ಹುಡುಗರ ಮೈಬಿಸಿಯೇರಿಸಿದೆ. ಲಿಪ್‌ಲಾಕ್ ಸೀನ್‌ಗಳಲ್ಲೂ ಇವರಿಬ್ಬರ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿರುವುದನ್ನು ಕಾಣಬಹುದಾಗಿದೆ. ಇನ್ನು ಪೊಲೀಸ್ ಕಾಪ್ ಪಾತ್ರದಲ್ಲಿ ರಮ್ಯಾಕೃಷ್ಣ (RamyaKrishna) ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಚಿತ್ರದ ಟ್ರೈಲರ್‌ ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿದ್ದು (Trending), ನಾಲ್ಕು ಮಿಲಿಯನ್‌ಗೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿದ್ದಾರೆ.

 


'ರೊಮ್ಯಾಂಟಿಕ್' ಚಿತ್ರವು ರೊಮ್ಯಾಂಟಿಕ್ ಆಕ್ಷನ್ ಎಂಟರ್ಟೈನರ್ ಕಥೆಯನ್ನು ಹೊಂದಿದ್ದು, ನಟ ಆಕಾಶ್ ಪೂರಿ, ಭಾಸ್ಕರ್ ಎಂಬ ಲವರ್ ಬಾಯ್‌ ಆಗಿ ಕಾಣಿಸಿಕೊಂಡಿದ್ದು, ಮಾಯಾ ಎಂಬ ಪಾತ್ರದಲ್ಲಿ ನಟಿ ಕೆತಿಕಾ ಶರ್ಮಾ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿರುವುದು ವಿಶೇಷವಾಗಿದ್ದು, ಜೊತೆಗೆ ಮಂದಿರ ಬೇಡಿ, ಮಕರಂದ್ ದೇಶಪಾಂಡೆ, ದಿವ್ಯದರ್ಶಿನಿ ಸೇರಿದಂತೆ ಅನೇಕರು ಚಿತ್ರದ ತಾರಾಬಳಗದಲ್ಲಿದ್ದಾರೆ.  ಪೂರಿ ಕನೆಕ್ಟ್ಸ್ ಬ್ಯಾನರ್‌ನಲ್ಲಿ 'ರೊಮ್ಯಾಂಟಿಕ್' ಚಿತ್ರವನ್ನು ನಿರ್ಮಿಸಲಾಗಿದ್ದು, ಚಾರ್ಮಿ ಕೌರ್ ಸಹ ಚಿತ್ರಕ್ಕೆ ನಿರ್ಮಾಣ ಮಾಡಿದ್ದಾರೆ. ಸುನೀಲ್ ಕಶ್ಯಪ್ ಸಂಗೀತ ಸಂಯೋಜನೆ, ನರೇಶ್ ಕ್ಯಾಮೆರಾ ಕೈಚಳಕವಿರುವ ಈ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ  ಪ್ರಮಾಣ ಸಿಕ್ಕಿದೆ. ಚಿತ್ರವು ಇದೇ ಅಕ್ಟೋಬರ್ 29ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

ಟಾಲಿವುಡ್‌ಗೆ ಪುನೀತ್‌ರನ್ನು ಸ್ವಾಗತಿಸಿದ ಪೂರಿ ಜಗನ್ನಾಥ್‌

ಇನ್ನು ಪೂರಿ ಜಗನ್ನಾಥ್ 'ಲೈಗರ್' (Liger) ಎಂಬ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ (Vijay DevaraKonda) ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ತೆಲುಗಿನಲ್ಲಿ ನಟಿ ಚಾರ್ಮಿ ಕೌರ್ (Charmme Kaur) ಚಿತ್ರಕ್ಕೆ ಬಂಡವಾಳ ಹೂಡಿದ್ದು, ಹಿಂದಿಯಲ್ಲಿ ಕರಣ್ ಜೋಹರ್ (Karan Johar) ಅವರ ಧರ್ಮ ಪ್ರೊಡಕ್ಷನ್ಸ್ ಜೊತೆಗೆ ಪೂರಿ ಜಗನ್ನಾಥ್ ಅವರ ಬ್ಯಾನರ್ ಪುರಿ ಕನೆಕ್ಟ್ಸ್ ಮೂಲಕ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ವಿಶೇಷವಾಗಿ ಈ ಚಿತ್ರದ ಮೂಲಕ ಭಾರತೀಯ ಸಿನಿರಂಗಕ್ಕೆ ಬಾಕ್ಸಿಂಗ್ ದಂತಕಥೆ 'ಮೈಕ್ ಟೈಸನ್' (Mike Tyson) ಪದಾರ್ಪಣೆ ಮಾಡುತ್ತಿದ್ದು, ಹಿಂದಿ ಮತ್ತು ತೆಲುಗಿನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!